ಉತ್ತರ ಪ್ರದೇಶ | ಆಸ್ಪತ್ರೆ ಶುಲ್ಕ ಪಾವತಿಸಲು ಪುತ್ರನನ್ನೇ ಮಾರಾಟ ಮಾಡಿದ!

Update: 2024-09-08 20:04 IST
ಉತ್ತರ ಪ್ರದೇಶ | ಆಸ್ಪತ್ರೆ ಶುಲ್ಕ ಪಾವತಿಸಲು ಪುತ್ರನನ್ನೇ ಮಾರಾಟ ಮಾಡಿದ!

ಹರೀಶ್ ಪಾಟಿಲ್ | PC : X \ @AG_knocks

  • whatsapp icon

ಕೃಷ್ಣನಗರ್ : ಆಸ್ಪತ್ರೆಯ ಶುಲ್ಕ ಪಾವತಿಸಿ ಪತ್ನಿ ಹಾಗೂ ನವಜಾತ ಶಿಶುವನ್ನು ಬಿಡುಗಡೆ ಮಾಡಲು ವ್ಯಕ್ತಿಯೋರ್ವ ತನ್ನ ಮೂರು ವರ್ಷದ ಪುತ್ರನನ್ನೇ ಮಾರಾಟ ಮಾಡುವ ಬಲವಂತಕ್ಕೆ ಒಳಗಾದ ಘಟನೆ ಇಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಈ ಘಟನೆಯಲ್ಲಿ ಮಗುವನ್ನು ದತ್ತು ತೆಗೆದುಕೊಂಡ ದಂಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಉತ್ತರಪ್ರದೇಶದ ಬರ್ವಾ ಪಟ್ಟಿಯ ದಿನಗೂಲಿ ನೌಕರನಾಗಿರುವ ಹರೀಶ್ ಪಾಟಿಲ್ ತನ್ನ ಪತ್ನಿಯನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಅವರಿಗೆ ಆಸ್ಪತ್ರೆಯ ಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ಆತನ ಪತ್ನಿ ಹಾಗೂ ನವಜಾತ ಶಿಶುವನ್ನು ಬಿಡುಗಡೆ ಮಾಡಲು ನಿರಾಕರಿಸಿದರು.

ಇದರಿಂದ ಖಿನ್ನನಾದ ಪಟೇಲ್ ಶುಕ್ರವಾರ ಕೆಲವೇ ಸಾವಿರ ರೂಪಾಯಿಗಳಿಗೆ ತನ್ನ ಮೂರು ವರ್ಷದ ಪುತ್ರನನ್ನು ವಿನಿಮಯ ಮಾಡಿಕೊಳ್ಳುವ ನಕಲಿ ದತ್ತು ಪ್ರಕ್ರಿಯೆಗೆ ಒಪ್ಪಿಕೊಂಡ. ಈ ಬಗ್ಗೆ ಮಾಹಿತಿ ಸ್ವೀಕರಿಸಿದ ಕೂಡಲೇ ಪೊಲೀಸರು ತನಿಖೆ ಆರಂಭಿಸಿದರು ಹಾಗೂ ಮಧ್ಯವರ್ತಿ ಅಮರೇಶ್ ಯಾದವ್, ದತ್ತು ತೆಗೆದುಕೊಂಡ ದಂಪತಿ ಭೋಲಾ ಯಾದವ್ ಹಾಗೂ ಅವರ ಪತ್ನಿ ಕಲಾವತಿ, ತಾರಾ ಕುಶ್ವಾಹ ಹೆಸರಿನ ನಕಲಿ ವೈದ್ಯ ಹಾಗೂ ಆಸ್ಪತ್ರೆಯ ಸಹಾಯಕಿ ಸುಗಂಧಿಯನ್ನು ಬಂಧಿಸಿದರು.

ಬಾಲಕನನ್ನು ರಕ್ಷಿಸಲಾಗಿದೆ ಹಾಗೂ ಆತನನ್ನು ಹೆತ್ತವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News