ಜಮ್ಮು-ಕಾಶ್ಮೀರ: ವಿಶ್ವದ ಅತಿ ಎತ್ತರದ ಸೇತುವೆಯ ಮೇಲೆ ʼವಂದೇಭಾರತ್ʼ ರೈಲಿನ ಪ್ರಪ್ರಥಮ ಪ್ರಾಯೋಗಿಕ ಸಂಚಾರ

Update: 2025-01-25 17:22 IST
ಜಮ್ಮು-ಕಾಶ್ಮೀರ: ವಿಶ್ವದ ಅತಿ ಎತ್ತರದ ಸೇತುವೆಯ ಮೇಲೆ ʼವಂದೇಭಾರತ್ʼ ರೈಲಿನ ಪ್ರಪ್ರಥಮ ಪ್ರಾಯೋಗಿಕ ಸಂಚಾರ

Screengrab:X/@PTI_News

  • whatsapp icon

ಶ್ರೀನಗರ: ವಿಶ್ವದ ಅತಿ ಎತ್ತರದ ಸೇತುವೆಯಾದ ಚೆನಾಬ್ ಸೇತುವೆಯ ಮೇಲೆ ಶನಿವಾರ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನಿಲ್ದಾಣದಿಂದ ಶ್ರೀನಗರದವರೆಗೆ ವಂದೇಭಾರತ್ ರೈಲಿನ ಪ್ರಪ್ರಥಮ ಪ್ರಾಯೋಗಿಕ ಸಂಚಾರ ನಡೆಸುವ ಮೂಲಕ ಭಾರತವು ತನ್ನ ರೈಲ್ವೆ ತಂತ್ರಜ್ಞಾನದಲ್ಲಿನ ಮುನ್ನಡೆಯನ್ನು ಜಗತ್ತಿನ ಮುಂದಿರಿಸಿತು.

ಇದಲ್ಲದೆ, ಭಾರತದ ಪ್ರಪ್ರಥಮ ತೂಗು ಸೇತುವೆಯಾದ ಅಂಜಿ ಖಡ್ ಸೇತುವೆಯ ಮೇಲೂ ಈ ರೈಲು ಸಂಚಾರ ನಡೆಸಲಿದೆ.

ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ತಣ್ಣನೆಯ ವಾತಾವರಣದಲ್ಲಿ ಸಂಚರಿಸುವಾಗ, ಪ್ರಯಾಣಿಕರ ಆರಾಮದಾಯಕತೆಯನ್ನು ಗಮನದಲ್ಲಿಟ್ಟುಕೊಂಡು ಹವಾಮಾನ ಹೊಂದಾಣಿಕೆಯನ್ನು ಅಳವಡಿಸಿ ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಈ ರೈಲು -30 ಡಿಗ್ರಿ ಸೆಲ್ಷಿಯಸ್ ನಷ್ಟು ಕನಿಷ್ಠ ಹವಾಮಾನದಲ್ಲೂ ತನ್ನ ಕಾರ್ಯಾಚರಣೆ ನಡೆಸಲಿದೆ.

ಈ ಐಷಾರಾಮಿ ರೈಲಿನಲ್ಲಿ ಸುಧಾರಿತ ನೀರು ಬಿಸಿ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ನೀರು ಘನೀಕೃತವಾಗದಂತೆ ದೂರವಿಡುತ್ತದೆ. ಇದರೊಂದಿಗೆ ಜೈವಿಕ ಶೌಚಾಲಯ ಟ್ಯಾಂಕ್ ಗಳನ್ನೂ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News