ಗುಡಿಸಲು ತೆರವಿನ ವೇಳೆ ಪುಸ್ತಕಗಳೊಂದಿಗೆ ಓಡುತ್ತಿರುವ ಬಾಲಕಿಯ ವೀಡಿಯೊ ಬೆಚ್ಚಿಬೀಳಿಸಿದೆ: ಸುಪ್ರೀಂ ಕೋರ್ಟ್ ಕಳವಳ

Update: 2025-04-01 20:24 IST
ಗುಡಿಸಲು ತೆರವಿನ ವೇಳೆ ಪುಸ್ತಕಗಳೊಂದಿಗೆ ಓಡುತ್ತಿರುವ ಬಾಲಕಿಯ ವೀಡಿಯೊ  ಬೆಚ್ಚಿಬೀಳಿಸಿದೆ: ಸುಪ್ರೀಂ ಕೋರ್ಟ್ ಕಳವಳ

Credit: Screen grab/X/yadavakhilesh

  • whatsapp icon

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯ ವೇಳೆ ತನ್ನ ಗುಡಿಸಲನ್ನು ಬುಲ್ಡೋಝರ್‌ನಿಂದ ಕೆಡವುವಾಗ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಪುಸ್ತಕಗಳನ್ನು ಹಿಡಿದುಕೊಂಡು ಓಡಿಹೋಗುತ್ತಿರುವ ಇತ್ತೀಚಿನ ವೀಡಿಯೊ ಎಲ್ಲರನ್ನೂ ಬೆಚ್ಚಿಬೀಳಿಸಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಪ್ರಯಾಗರಾಜ್‌ ನಲ್ಲಿ ಅಕ್ರಮ ಧ್ವಂಸ ಪ್ರಕರಣದ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಅಂಬೇಡ್ಕರ್ ನಗರದ ಜಲಾಲ್‌ ಪುರದಿಂದ ವೈರಲ್ ಆದ ವೀಡಿಯೊವನ್ನು ಉಲ್ಲೇಖಿಸಿತು.

"ಇತ್ತೀಚೆಗೆ ಸಣ್ಣ ಗುಡಿಸಲುಗಳನ್ನು ಬುಲ್ಡೋಝರ್‌ ಗಳಿಂದ ಕೆಡವಲಾಗುತ್ತಿರುವ ವೀಡಿಯೊ ಬಂದಿತ್ತು. ಕೆಡವಲಾದ ಗುಡಿಸಲಿನಿಂದ ಒಬ್ಬ ಪುಟ್ಟ ಬಾಲಕಿ ಕೈಯ್ಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಓಡಿಹೋಗುತ್ತಿರುವ ಆ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ̧" ಎಂದು ನ್ಯಾಯಮೂರ್ತಿ ಭುಯಾನ್ ಮೌಖಿಕವಾಗಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಆ ವೀಡಿಯೊಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

"ಜಲಾಲ್ಪುರ ತಹಶೀಲ್ದಾರ್ ಹೊರಡಿಸಿದ ಆದೇಶದ ನಂತರ ಸರ್ಕಾರಿ ಭೂಮಿಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆಗೂ ಮೊದಲು ಹಲವಾರು ನೋಟಿಸ್‌ ಗಳನ್ನು ನೀಡಲಾಗಿತ್ತು”, ಅಂಬೇಡ್ಕರ್ ನಗರ ಪೊಲೀಸರು ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News