ವಯನಾಡ್ ಭೂಕುಸಿತ | ‘ತೀವ್ರ ಸ್ವರೂಪದ ವಿಪತ್ತು’ ಎಂದು ಘೋಷಿಸಿ : ಅಮಿತ್ ಶಾಗೆ ಶಶಿ ತರೂರ್ ಪತ್ರ

Update: 2024-08-01 21:25 IST
ವಯನಾಡ್ ಭೂಕುಸಿತ | ‘ತೀವ್ರ ಸ್ವರೂಪದ ವಿಪತ್ತು’ ಎಂದು ಘೋಷಿಸಿ : ಅಮಿತ್ ಶಾಗೆ ಶಶಿ ತರೂರ್ ಪತ್ರ

ಶಶಿ ತರೂರ್ | PC : PTI 

  • whatsapp icon

ಹೊಸದಿಲ್ಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಪೀಡಿತ ಪ್ರದೇಶಗಳಿಗೆ ಸಂಸದರಿಂದ ತುರ್ತು ನೆರವಿಗೆ ಅನುಕೂಲವಾಗುವಂತೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ(ಎಂಪಿಎಲ್‌ಎಡಿಎಸ್)ಯ ಮಾರ್ಗಸೂಚಿಗಳಡಿ ವಯನಾಡ್ ಭೂಕುಸಿತಗಳನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಎಂಪಿಎಲ್‌ಎಡಿಎಸ್ ಸ್ಥಳೀಯ ಅಗತ್ಯಗಳನ್ನು ಆಧರಿಸಿ ಭಾರೀ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಸೂಚಿಸಲು ಮತ್ತು ಕಾರ್ಯಗತಗೊಳ್ಳುವಂತೆ ಮಾಡಲು ಸಂಸದರಿಗೆ ಅಧಿಕಾರ ನೀಡುತ್ತದೆ.

ಜು.30ರ ನಸುಕಿನಲ್ಲಿ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೀಕರ ಭೂಕುಸಿತಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದು,ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಎಷ್ಟೋ ಜನರು ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದಾರೆ. ಇಷ್ಟೊಂದು ವ್ಯಾಪಕ ಪ್ರಮಾಣದ ವಿಪತ್ತು ಸಮಾಜದ ಎಲ್ಲ ವರ್ಗಗಳಿಂದ ಸಂಘಟಿತ ಮತ್ತು ಉದಾರ ಪ್ರತಿಕ್ರಿಯೆಯನ್ನು ಅಗತ್ಯವಾಗಿಸಿದೆ ಎಂದು ತರೂರ್ ಪತ್ರದಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News