ವಾರಗಳ ನಂತರ ತೈವಾನ್ ನಲ್ಲಿ ಮತ್ತೆ ಭೂಕಂಪ

Update: 2024-04-23 08:14 GMT

PC : NDTV 

ಹ್ವಾಲಿಯೆನ್ (ತೈವಾನ್): ಮಂಗಳವಾರ ಮುಂಜಾನೆ ತೈವಾನ್ ಗಣರಾಜ್ಯ ದ್ವೀಪವನ್ನು 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕಾ ಜಿಯೊಲಾಜಿಕಲ್ ಸರ್ವೆ ವರದಿ ಮಾಡಿದೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗದಿದ್ದರೂ, ಈ ತಿಂಗಳ ಆರಂಭದಲ್ಲಿ 7.4 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ 13 ಮಂದಿ ಮೃತಪಟ್ಟು, 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಡನೆ ನಡೆದಿತ್ತು. ಈ ಭೂಕಂಪವು ಗ್ರಾಮೀಣ ಹಾಗೂ ಕಣಿವೆಗಳ ಹ್ವಾಲಿಯೆನ್ ಕೌಂಟಿ ನಗರದ ಕರಾವಳಿ ಪ್ರದೇಶದಲ್ಲಿ ಕೇಂದ್ರಿತವಾಗಿತ್ತು ಎನ್ನಲಾಗಿದೆ.

1999 ರಲ್ಲಿ 7.7 ತೀವ್ರತೆಯಲ್ಲಿ ಅಪ್ಪಳಿಸಿದ್ದ ಭೂಕಂಪದಿಂದ 2,400 ಮಂದಿ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News