ಜಾಗತಿಕ ತೈಲ ಬೆಲೆಗಳು ಇಳಿಯುತ್ತಿದ್ದರೂ ಮೋದಿ ಸರಕಾರ ಇಂಧನಗಳ ಮೇಲೆ ಅಬಕಾರಿ ಸುಂಕವನ್ನೇಕೆ ಹೆಚ್ಚಿಸುತ್ತಿದೆ?

Update: 2025-04-09 18:02 IST
ಜಾಗತಿಕ ತೈಲ ಬೆಲೆಗಳು ಇಳಿಯುತ್ತಿದ್ದರೂ ಮೋದಿ ಸರಕಾರ ಇಂಧನಗಳ ಮೇಲೆ ಅಬಕಾರಿ ಸುಂಕವನ್ನೇಕೆ ಹೆಚ್ಚಿಸುತ್ತಿದೆ?

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಕೇಂದ್ರ ಸರಕಾರವು ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ ಎರಡು ರೂ.ಹೆಚ್ಚಿಸಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಸ್ಥಿರವಾಗಿ ಇಳಿಯುತ್ತಿರುವ ಈ ಸಮಯದಲ್ಲಿ ಸುಂಕ ಹೆಚ್ಚಳವು 2025ರ ಬಜೆಟ್‌ನಲ್ಲಿ ನೀಡಲಾದ ತೆರಿಗೆ ರಿಯಾಯಿತಿಗಳ ಬಳಿಕ ಸಂಭವನೀಯ ಬಂಡವಾಳ ವೆಚ್ಚಕ್ಕಾಗಿ ಸರಕಾರದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ.

ಅಬಕಾರಿ ಸುಂಕದಲ್ಲಿ ಹೆಚ್ಚಳವನ್ನು ಜನಸಾಮಾನ್ಯರು ಭರಿಸಬೇಕಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ, ಆದರೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲೆ 50 ರೂ.ಏರಿಕೆಯನ್ನು ಭರಿಸಬೇಕಿದೆ.

ಕುತೂಹಲಕಾರಿಯಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ಇನ್ನೂ ವರ್ಗಾಯಿಸಲಾಗಿಲ್ಲ, ಆದಾಗ್ಯೂ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಕಡಿತಕ್ಕೆ ಸಂಬಂಧಿಸಿದಂತೆ ‘ಕಾದು ನೋಡುವ’ ಬಗ್ಗೆ ಸುಳಿವು ನೀಡಿದ್ದಾರೆ. ಕಚ್ಚಾ ತೈಲ ಬೆಲೆಗಳಲ್ಲಿ ಕುಸಿತವು ಮುಂದುವರಿದರೆ ಇಂಧನ ಬೆಲೆಗಳಲ್ಲಿ ಕಡಿತವನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದವರಿಗೆ ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿತಗೊಳಿಸಿದ್ದು,ಇದು ಕೇಂದ್ರದ ನೇರ ಆದಾಯದ ಅಂದಾಜುಗಳಿಗೆ ಕನ್ನ ಹಾಕಿದೆ. ಮೋದಿ ಸರಕಾರವು ವಿಂಡ್‌ಫಾಲ್ ತೆರಿಗೆ(ಉದ್ಯಮಗಳು ಅನಿರೀಕ್ಷಿತವಾಗಿ ಸರಾಸರಿಗಿಂತ ಹೆಚ್ಚಿನ ಆದಾಯ ಗಳಿಸಿದಾಗ ವಿಧಿಸುವ ತೆರಿಗೆ)ಯನ್ನು ರದ್ದುಗೊಳಿಸಿದ್ದು ರಿಲಯನ್ಸ್ ಇಂಡಸ್ಟ್ರೀಸ್,ನಯೆರಾದಂತಹ ತೈಲ ಕಂಪನಿಗಳಿಗೆ ಪರಿಹಾರವನ್ನು ಒದಗಿಸಿತ್ತು.

ಇತ್ತೀಚಿನ ಅಬಕಾರಿ ಸುಂಕ ಹೆಚ್ಚಳ ಕುರಿತಂತೆ ಪುರಿ,ಹೆಚ್ಚುವರಿ ಎರಡು ರೂ.ಸುಂಕವು ಸಾಮಾನ್ಯ ನಿಧಿಗೆ ಸೇರುತ್ತದೆ ಮತ್ತು ಇದನ್ನು ತೈಲ ಮಾರಾಟ ಸಂಸ್ಥೆಗಳಿಗೆ ಎಲ್‌ಪಿಜಿ ನಷ್ಟವನ್ನು ಭರಿಸಲು ಬಳಸಲಾಗುವುದು ಎಂದು ತಿಳಿಸಿದರು.

ಮೋದಿ ಸರಕಾರವು ತನ್ನ 11 ವರ್ಷಗಳ ಆಡಳಿತದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಎಂದಿಗೂ ಗ್ರಾಹಕರಿಗೆ ವರ್ಗಾಯಿಸಿಲ್ಲ. 2020ರಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆಗಳು ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದಾಗಲೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ಕೃಪೆ: economictimes.indiatimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News