ಮಧ್ಯಪ್ರದೇಶ | ಸೈಬರ್ ವಂಚಕರಿಂದ ʼಡಿಜಿಟಲ್‌ ಅರೆಸ್ಟ್ʼ: ಮನನೊಂದ ಮಹಿಳೆಯಿಂದ ಆತ್ಮಹತ್ಯೆ

Update: 2025-01-06 22:32 IST
Hacker

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಮೌಗಂಜ್: ನೀವು ಕಳಿಸಿರುವ ಪಾರ್ಸೆಲ್ನಲ್ಲಿ ಅಕ್ರಮ ವಸ್ತುಗಳಿದ್ದು, ನಿಮ್ಮನ್ನು ಬಂಧಿಸುತ್ತೇವೆ ಎಂದು ಸೈಬರ್ ವಂಚಕರು ಬೆದರಿಕೆ ಒಡ್ಡಿದ್ದರಿಂದ, ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ನಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ರವಿವಾರ ಸಂಜೆ ಘುರೇಹತ ಪ್ರದೇಶದಲ್ಲಿ ವಿಷ ಸೇವಿಸಿದ್ದ ರೇಶ್ಮಾ ಪಾಂಡೆ, ಸೋಮವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.

"ನೀವು ಕಳಿಸಿರುವ ಪಾರ್ಸೆಲ್ನಲ್ಲಿ ಅಕ್ರಮ ವಸ್ತುಗಳಿವೆ ಎಂದು ಸರಕಾರಿ ಶಾಲೆಯ ಅತಿಥಿ ಶಿಕ್ಷಕಿಯಾದ ರೇಶ್ಮಾ ಪಾಂಡೆಯ ಮೇಲೆ ಸೈಬರ್ ವಂಚಕರು ಒತ್ತಡ ಹೇರುತ್ತಿದ್ದರು. ಆರೋಪಿಗಳು ಆಕೆಯಿಂದ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಮನನೊಂದ ರೇಶ್ಮಾ ಪಾಂಡೆ, ವಿಷ ಸೇವಿಸಿದ್ದಾರೆ. ತಕ್ಷಣವೇ ಅವರ ಪುತ್ರ ಅವರನ್ನು ರೇವಾದಲ್ಲಿರುವ ಸಂಜಯ್ ವೈದ್ಯಕೀಯ ಕಾಲೇಜಿಗೆ ಸಾಗಿಸಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ರಸ್ನಾ ಠಾಕೂರ್ ತಿಳಿಸಿದ್ದಾರೆ.

"ನಾವು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸೈಬರ್ ತಂಡವು ತನಿಖೆ ಪ್ರಾರಂಭಿಸಿದೆ" ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News