ಯಮುನಾ ಪ್ರವಾಹ: ದಿಲ್ಲಿಯ ನೀರು ಶುದ್ಧೀಕರಣ ಘಟಕಗಳು ಬಂದ್

Update: 2023-07-13 20:51 IST
ಯಮುನಾ ಪ್ರವಾಹ: ದಿಲ್ಲಿಯ ನೀರು ಶುದ್ಧೀಕರಣ ಘಟಕಗಳು ಬಂದ್

ಯಮುನಾ ನದಿ | Photo : PTI 

  • whatsapp icon

ಹೊಸದಿಲ್ಲಿ: ಯಮುನಾ ನದಿಯ ನೀರಿನ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವಝೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾಗಳಲ್ಲಿಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಗಿತಗೊಳಿಸಲಾಗಿದ್ದು, ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನೀರು ಪೂರೈಕೆ ವ್ಯತ್ಯಯಗೊಳ್ಳಬಹುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಯಮುನಾ ನದಿಯ ನೀರಿನ ಮಟ್ಟ ಗುರುವಾರ ಬೆಳಿಗ್ಗೆ 208.48 ಮೀ.ತಲುಪಿದ್ದು, ಸಮೀಪದ ರಸ್ತೆಗಳು, ಸಾರ್ವಜನಿಕ ಮತ್ತು ಖಾಸಗಿ ಮೂಲಸೌಕರ್ಯಗಳು ಜಲಾವೃತಗೊಂಡಿವೆ. ನದಿಗೆ ಸಮೀಪದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿ ನೀರಿನ ಮಟ್ಟ ಬುಧವಾರ ರಾತ್ರಿ 208 ಮೀ.ದಾಟಿದ್ದು, ಗುರುವಾರ ಬೆಳಿಗ್ಗೆ 208.48 ಮೀ.ಗೆ ಏರಿಕೆಯಾಗಿದೆ. ನದಿ ನೀರಿನ ಮಟ್ಟ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿರುವ ಕೇಂದ್ರ ಜಲ ಆಯೋಗವು,ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News