ಬಸ್‌ ಸಿಬ್ಬಂದಿಗೆ ಬಂದೂಕು ತೋರಿಸಿದ ಆರೋಪ: ಯೂಟ್ಯೂಬರ್‌ ʼತೊಪ್ಪಿʼ ಪೊಲೀಸ್‌ ವಶಕ್ಕೆ!

Update: 2025-04-16 14:37 IST
ಬಸ್‌ ಸಿಬ್ಬಂದಿಗೆ ಬಂದೂಕು ತೋರಿಸಿದ ಆರೋಪ: ಯೂಟ್ಯೂಬರ್‌ ʼತೊಪ್ಪಿʼ ಪೊಲೀಸ್‌ ವಶಕ್ಕೆ!

PC : mrz_thoppi \ instagram.com

  • whatsapp icon

ಕೋಝಿಕ್ಕೋಡ್: ಜಿಲ್ಲೆಯ ವಡಗರದಲ್ಲಿ ಖಾಸಗಿ ಬಸ್ ಸಿಬ್ಬಂದಿಯ ಜೊತೆಗೆ ನಡೆದ ಜಗಳದಲ್ಲಿ ಖಾಸಗಿ ಬಸ್‌ನ ಸಿಬ್ಬಂದಿಯತ್ತ ಬಂದೂಕು ತೋರಿಸಿದ ಆರೋಪದ ಮೇಲೆ ಜನಪ್ರಿಯ ಯೂಟ್ಯೂಬರ್ ʼತೊಪ್ಪಿʼಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಆಯುಧವು ಏರ್ ಗನ್ ಆಗಿದ್ದು, ಅದಕ್ಕೆ ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದು ತೊಪ್ಪಿಯನ್ನು ನಂತರ ಬಿಡುಗಡೆ ಮಾಡಲಾಗಿದೆ ಎಂದು ವಡಗರ ಪೊಲೀಸರು ತಿಳಿಸಿದ್ದಾರೆ.

ಬಸ್ ಸಿಬ್ಬಂದಿ ಕೂಡ ಯೂಟ್ಯೂಬರ್ ವಿರುದ್ಧ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ತೊಪ್ಪಿ ಪ್ರಯಾಣಿಸುತ್ತಿದ್ದ ಕಾರನ್ನು ಬಸ್ ಹಿಂದಿಕ್ಕಿದೆ. ಬಳಿಕ ಯೂಟ್ಯೂಬರ್ ಖಾಸಗಿ ಬಸ್ ಅನ್ನು ಹಿಂಬಾಲಿಸಿ ವಡಗರದಲ್ಲಿ ಅಡ್ಡಗಟ್ಟಿದ್ದು ಬಸ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ, ತೊಪ್ಪಿ ತಮ್ಮತ್ತ ಬಂದೂಕು ತೋರಿಸಿದನೆಂದು ಬಸ್ ನೌಕರರು ಆರೋಪಿಸಿದ್ದಾರೆ.

"ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಪಿಸ್ತೂಲ್ ಕೇವಲ ಏರ್ ಗನ್ ಎಂದು ಕಂಡುಬಂದಿದೆ. ಮತ್ತು, ಬಸ್ ಸಿಬ್ಬಂದಿ ಯಾವುದೇ ಪೊಲೀಸ್ ದೂರು ದಾಖಲಿಸಲಿಲ್ಲ. ಆದ್ದರಿಂದ, ಅವರನ್ನು ಬಿಡುಗಡೆ ಮಾಡಲಾಯಿತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೊಪ್ಪಿಯ ಮೂಲ ಹೆಸರು ನಿಹಾದ್ ಆಗಿದ್ದು, ಅವರ ಯೂಟ್ಯೂಬ್ ಚಾನೆಲ್‌ ಗೆ ಲಕ್ಷಾಂತರ ಚಂದಾದಾರರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News