ಚೀನಾ ಓಪನ್: ಜೊಕೊವಿಕ್‌ಗೆ ಟ್ರೋಫಿ

Update: 2015-10-17 07:27 GMT
ಬೀಜಿಂಗ್, ಅ.11: ವಿಶ್ವದ ನಂ.1 ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಕ್ ಚೀನಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ರಫೆಲ್ ನಡಾಲ್‌ರನ್ನು ಸುಲಭವಾಗಿ ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ.

ಚೀನಾ ಓಪನ್‌ನಲ್ಲಿ ಸೋಲಿಲ್ಲದ ಸರದಾರನಾಗಿರುವ ಜೊಕೊವಿಕ್ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ ನಡಾಲ್‌ರನ್ನು 6-2, 6-2 ನೇರ ಸೆಟ್‌ಗಳಿಂದ ಮಣಿಸಿ ಆರನೆ ಬಾರಿ ಚೀನಾ ಓಪನ್ ಟ್ರೋಫಿಯನ್ನು ಎತ್ತಿ ಹಿಡಿದರು.

ಒಂದೂವರೆ ಗಂಟೆಯ ಫೈನಲ್ ಪಂದ್ಯದಲ್ಲಿ ನಡಾಲ್ ವಿರುದ್ಧ ಜೊಕೊವಿಕ್ ಸಂಪೂರ್ಣ ಪ್ರಾಬಲ್ಯ ಮೆರೆದರು. 2013ರ ಫೈನಲ್‌ನಂತೆಯೇ ನಡಾಲ್‌ರನ್ನು ನೇರ ಸೆಟ್‌ಗಳಿಂದ ಸದೆಬಡಿದರು. 2009,2010, 2012, 2013,2014ರಲ್ಲಿ ಚೀನಾ ಓಪನ್ ಪ್ರಶಸ್ತಿ ಜಯಿಸಿರುವ ಜೊಕೊವಿಕ್ ಸತತ 29ನೆ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ನಡಾಲ್ ವಿರುದ್ಧ 22-23 ದಾಖಲೆ ಹೊಂದಿರುವ ಜೊಕೊವಿಕ್ ಕಳೆದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor