ಎಡೆಸ್ನಾನಕ್ಕೆ ನಾನೂ ಸಿದ್ಧ. - ಪೇಜಾವರ ಸ್ವಾಮೀಜಿ.
* ಜೆಡಿಎಸ್‌ನ ಭವಿಷ್ಯ ನಿರ್ಧರಿಸುವುದು ರಾಜ್ಯದ ಆರು ಕೋಟಿ ಜನತೆಯೇ ಹೊರತು ಸಿದ್ದರಾಮಯ್ಯ ಅಲ್ಲ
- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
-ಸಿದ್ದರಾಮಯ್ಯ ಅವರ ಭವಿಷ್ಯ ರೂಪಿಸಿದ್ದೂ ಅದೇ ಆರು ಕೋಟಿ ಜನತೆ ತಾನೆ?
* ರಾಹುಲ್ ಇನ್ನೂ ಬಚ್ಚಾ.
- ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
-ಊರಿಗೆ ಅರಸನಾದರೂ ಸೋನಿಯಾಗೆ ಬಚ್ಚಾ.
* ರಾಜ್ಯದಲ್ಲಿ ಸರಕಾರವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
- ಕೆ.ಎಸ್. ಈಶ್ವರಪ್ಪ, ವಿ.ಪ.ವಿ. ನಾಯಕ
-ಇದ್ದಿದ್ದರೆ ನೀವು ಯಾವತ್ತೋ ಜೈಲು ಸೇರಬೇಕಾಗಿತ್ತು. ನಿಮಗೆ ಒಳ್ಳೆಯದೇ ಆಯಿತು ಬಿಡಿ.
* ಕಲೆಯಿಂದ ಶಾಂತಿ, ನೆಮ್ಮದಿ ಹೊಂದಲು ಸಾಧ್ಯ.
- ಯು.ಟಿ. ಖಾದರ್, ಆರೋಗ್ಯ ಸಚಿವ
-ನಾಳೆಯಿಂದ ಆಸ್ಪತ್ರೆಗಳಲ್ಲಿ ಚಿತ್ರ ಕಲಾವಿದರನ್ನು ನೇಮಿಸುವ ಯೋಜನೆಯೇನಾದರೂ ಇದೆಯೇ ಆರೋಗ್ಯ ಸಚಿವರೇ?
* ಲಂಚ ಕೊಡುವವರು ಮಹಾನ್ ಭ್ರಷ್ಟರು. - ರವಿಸುಬ್ರಹ್ಮಣ್ಯ, ಶಾಸಕ
-ತೆಗೆದುಕೊಳ್ಳುವ ನಿಮ್ಮಂಥವರಷ್ಟೇ ಸಾಚಾಗಳು
. ..................................................
* ಅನಗತ್ಯವಾಗಿ ಅಸಹಿಷ್ಣುತೆ ವಿಷಯ ಪ್ರಸ್ತಾಪಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವುದು ಸರಿಯಲ್ಲ.
- ವಿಶ್ವೇಶ್ವತೀರ್ಥ ಸ್ವಾಮೀಜಿ, ಪೇಜಾವರ ಮಠ
- ವಿಷಯವಷ್ಟೇ ಪ್ರಸ್ತಾಪಿಸಬಾರದು. ಅಸಹಿಷ್ಣುತೆಯ ಕೃತ್ಯ ಎಸಗಬಹುದು ಎಂದಾಯಿತು.
. ..................................................
* ಭಾರತದಲ್ಲಿದ್ದ ಯಾವುದೇ ರಾಜರು ಹೊರದೇಶದ ಮೇಲೆ ದಾಳಿ ಮಾಡಿರುವ ಒಂದೇ ಒಂದು ಉದಾಹರಣೆ ಇಲ್ಲ.
- ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ
-ಮರಾಠಿಗರು ಕರ್ನಾಟಕದ ಮೇಲೆ ದಾಳಿ ಮಾಡಿದ್ದು ಹೊರದೇಶ ಎನ್ನುವ ಕಾರಣದಿಂದಲೇ ಆಗಿದೆ.
..................................................
* ನಾನು ಮಂದಿರಕ್ಕೆ ಹೋಗುವುದನ್ನು ತಡೆಯಲು ಆರೆಸ್ಸೆಸ್‌ನವರು ಯಾರು?
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
-ದಲಿತರು ಹೋಗುವುದನ್ನು ಶತಶತಮಾನಗಳಿಂದಲೇ ಅವರು ತಡೆಯುತ್ತಾ ಬಂದಿದ್ದಾರೆ. ಅದರ ಬಗ್ಗೆಯೂ ಧ್ವನಿಯೆತ್ತಿ. ..................................................
* ಯಾರು ಬೇಕಾದರೂ ಬಿಜೆಪಿಯ ರಾಜ್ಯಾಧ್ಯಕ್ಷರಾಗಬಹುದು.
- ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ
-ಅಷ್ಟೂ ಕೇವಲವಾದ ಹುದ್ದೆಯೇ ಅದು.
..................................................
* ನಮ್ಮ ಸೈನಿಕರು ದೇಶಕ್ಕಾಗಿ ಪ್ರಾಣ ಕೊಡುವುದು ಬೇಡ. ವೈರಿಗಳನ್ನು ಕೊಂದರೆ ಸಾಕು.
- ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
-ದೇಶ ರಕ್ಷಿಸುವುದೆಂದರೆ ಕೊಲ್ಲುವುದಷ್ಟೇ ಅಲ್ಲ.
..................................................
* ಇಡೀ ರಾಜ್ಯದಲ್ಲಿ ಬಿಜೆಪಿ ಅಲೆ ಕ್ಷೀಣಿಸಿದೆ.
- ಡಿ.ಕೆ. ಶಿವಕುಮಾರ್, ಇಂಧನ ಸಚಿವ
-ಅದಕ್ಕಾಗಿ ಇಷ್ಟೊಂದು ಬೇಸರವೇ?
..................................................
* ಇತಿಹಾಸ ಬದಲಿಸುವ ಯತ್ನವಾಗಿ ಪಾಕ್ ಜೊತೆ ಮಾತುಕತೆ.
- ನರೇಂದ್ರ ಮೋದಿ, ಪ್ರಧಾನಿ
-ಅಂದರೆ ವಿರೋಧ ಪಕ್ಷದಲ್ಲಿದ್ದಾಗ ನಿಮಗೆ ಇತಿಹಾಸ ಬದಲಾಗುವುದು ಬೇಡವಾಗಿತ್ತೆ?
..................................................
* ಮನಮೋಹನ್ ಸಿಂಗ್ ಬದಲಿಗೆ ಪ್ರಣವ್ ಮುಖರ್ಜಿ ಪ್ರಧಾನಿಯಾಗಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿರಲಿಲ್ಲ.
- ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ನಾಯಕ
-ಪ್ರಣವ್ ಮುಖರ್ಜಿ ಪ್ರಧಾನಿಯಾಗುವುದಕ್ಕಿಂತ, ಕಾಂಗ್ರೆಸ್ ಸೋಲೇ ಅತ್ಯುತ್ತಮ.
..................................................
* ಭಾರತೀಯ ವಿಜ್ಞಾನಿಗಳು ವಿಶ್ವದಲ್ಲಿಯೇ ನಂಬರ್ ಒನ್.
- ನಿತಿನ್ ಗಡ್ಕರಿ, ಕೇಂದ್ರ ಸಚಿವ
-ರಾಜಕಾರಣಿಗಳ ಬಗ್ಗೆಯೂ ಒಂದಿಷ್ಟು ಹೇಳಬಾರದೆ?
..................................................
* ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದಕ್ಕೆ ವಿಷಾದವಿಲ್ಲ.
- ಆಸ್ಕರ್ ಫೆರ್ನಾಂಡಿಸ್, ಮಾಜಿ ಕೇಂದ್ರ ಸಚಿವ
-ವಿಷಾದವೇನಿದ್ದರೂ ನಿಮ್ಮಂತಹ ಹಿರಿಯರ ಕುರಿತಂತೆ ಮಾತ್ರ,
..................................................
* ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ.
- ಡಾ.ಜಿ. ಪರಮೇಶ್ವರ್, ಗೃಹಸಚಿವ
-ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಬಹುದೇ?
..................................................
* ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆಯುವ ಬದಲು ಜೈಲಿಗೆ ಹೋಗಲು ಸಿದ್ಧ.
- ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
-ಯಾಕೆ ಜೈಲಿಗೆ ಹೋಗಲಿಲ್ಲ?
..................................................
* ಫೋಟೊಗ್ರಾಫರ್‌ಗಳು ಕಂಡಕಂಡಲ್ಲಿ ನನ್ನ ಫೋಟೊ ತೆಗೆಯುವುದಕ್ಕೆ ನನ್ನ ಅಭ್ಯಂತರವಿಲ್ಲ.
- ಆಲಿಯಾ ಭಟ್, ಬಾಲಿವುಡ್ ನಟಿ
-ಆದರೆ ಫೋಟೊಗ್ರಾಫರ್‌ಗಳಿಗೆ ಉತ್ಸಾಹ ಇಲ್ಲವಂತೆ.
..................................................
* ಸಂಸ್ಕಾರ ಭರಿತ ಶಿಕ್ಷಣ ನಮಗೆ ದಾರಿದೀಪ.
- ನಿತಿನ್ ಗಡ್ಕರಿ, ಕೇಂದ್ರ ಸಚಿವ
-ನಿಮಗದು ಯಾಕೆ ಸಿಗಲಿಲ್ಲ?
..................................................
*ಎಡೆಸ್ನಾನಕ್ಕೆ ನಾನೂ ಸಿದ್ಧ.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
-ದಲಿತರು ಉಂಡ ಎಂಜಲೆಲೆಯಲ್ಲಿ ಸ್ನಾನ ಮಾಡುವುದಕ್ಕೆ ಒಪ್ಪಿಗೆಯೇ?
..................................................
* ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಿದೆ. ಅದಕ್ಕನುಸಾರವಾಗಿ ಮದ್ಯದಂಗಡಿಯನ್ನೂ ಹೆಚ್ಚಿಸಬೇಕಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
-ಮತ್ತು ಆಸ್ಪತ್ರೆ, ಶಾಲೆಯ ವಿಷಯ ಬರುವಾಗ ಜನಸಂಖ್ಯೆ ಇಳಿಮುಖವಾಗುತ್ತಿದೆಯೇ?
..................................................
* ಸಾಮಾಜಿಕ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು.
- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
-ಬಹುಶಃ ಮನುಶಾಸ್ತ್ರ ನೀಡಿರುವ ಮೀಸಲಾತಿಯ ಬಗ್ಗೆ ಹೇಳುತ್ತಿರಬೇಕು.
Share this