ನವಾಝ್ ಶರೀಫ್ ಮೊಮ್ಮಗಳ ಮದುವೆಯಲ್ಲಿ ಉಂಡವನೇ ಜಾಣ.
* ಜನತಾ ಪರಿವಾರ ಒಂದಾಗೋದು ಸುಲಭವಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
-ಸಂಘಪರಿವಾರದ ಸಹಕಾರ ಸಿಕ್ಕಿದರೆ ಕಷ್ಟವಿಲ್ಲ.
..................................................
* ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೋಡಿದರೆ ತನಗೂ ಸಾಯಬೇಕೆನಿಸುತ್ತದೆ.
- ದೇವೇಗೌಡ, ಮಾಜಿ ಪ್ರಧಾನಿ
-ಜೆಡಿಎಸ್ ಪಕ್ಷದ ಆತ್ಮಹತ್ಯೆಗಿಂತ ವಾಸಿ.
..................................................
* ಕಾಂಗ್ರೆಸ್ ಆಡಳಿತಕ್ಕೆ ಬಂದ ಅನಂತರ ಏಳು ತಿಂಗಳು ತನಗೆ ಮಂತ್ರಿ ಸ್ಥಾನ ಸಿಗದಿರುವುದಕ್ಕೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯ ಕುತಂತ್ರವೇ ಕಾರಣ.
- ಡಿ.ಕೆ.ಶಿವಕುಮಾರ್, ಇಂಧನ ಸಚಿವ
-ಕಾಂಗ್ರೆಸ್ ಹೈಕಮಾಂಡ್ ಬದಲಾಗಿದ್ದಾರೆಯೇ?
..................................................
* ರಾಜ್ಯದಲ್ಲಿ ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶವಿಲ್ಲ. - ಯು.ಟಿ. ಖಾದರ್, ಆರೋಗ್ಯ ಸಚಿವ
-ಆನ್‌ಲೈನ್‌ನಲ್ಲಿ ರೋಗಗಳನ್ನು ಹಂಚುವುದಕ್ಕೆ ಅವಕಾಶವಿದೆಯಂತೆ.
..................................................
* ಅರುಣ್‌ಜೇಟ್ಲಿ ರಾಜಕಾರಣಿಗಳಿಗೆ ಮಾದರಿಯಾಗಿರುವವರು.
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
-ಉಳಿದವರ ಹಗರಣಗಳಿಗೆ ಜೇಟ್ಲಿಯೇ ಮಾದರಿ ಅಂತೀರಾ?
..................................................
* ಬಿಜೆಪಿ ಮತ್ತು ಜೆಡಿಎಸ್‌ಗಳಿಗೆ ಸಿದ್ಧಾಂತಗಳೇ ಇಲ್ಲ.
- ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
-ಸದ್ಯಕ್ಕೆ ಸಿದ್ಧಾಂತಗಳಿರದೇ ಇರುವುದೂ ಪಕ್ಷಗಳ ಪಾಲಿಗೆ ಸಿದ್ಧಾಂತವೇ ಆಗಿದೆ.
..................................................
* ಮುಂದಿನ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ.
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
-ಯಾವ ಪಕ್ಷದಿಂದ ಎನ್ನುವುದು ಪ್ರಶ್ನೆ.
..................................................
* ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವನ್ನು ಮೆಚ್ಚಿದೆ.
- ನಳಿನ್ ಕುಮಾರ್ ಕಟೀಲ್, ಸಂಸದ
--ಭಾರತದ ಜನರನ್ನು ಹೊರತು ಪಡಿಸಿ.
..................................................
* ಹವಾಲಾ ಕೇಸ್‌ನಿಂದ ಎಲ್.ಕೆ. ಅಡ್ವಾಣಿಯವರನ್ನು ನಾನೇ ಪಾರು ಮಾಡಿದ್ದು. - ರಾಮ್‌ಜೇಠ್ಮಲಾನಿ, ಹಿರಿಯ ನ್ಯಾಯವಾದಿ
-ಇದನ್ನು ಹೆಮ್ಮೆಯಿಂದ ಹೇಳುತ್ತಿದ್ದೀರಾ, ಬೇಸರದಿಂದ ಹೇಳುತ್ತಿದ್ದೀರಾ?
..................................................
* ಅಡ್ವಾಣಿ ಅವರಂತೆ ಜೇಟ್ಲಿಯೂ ನಿಷ್ಕಳಂಕರಾಗಿ ಹೊರಹೊಮ್ಮಲಿದ್ದಾರೆ..
- ನರೇಂದ್ರ ಮೋದಿ, ಪ್ರಧಾನಿ
-ಸದ್ಯಕ್ಕೆ ಅವರು ಕಳಂಕಿತರು ಎನ್ನುವುದನ್ನು ನೀವು ಒಪ್ಪಿಕೊಂಡಂತೆ ಆಯಿತು.
..................................................
* ಕಾಂಗ್ರೆಸ್‌ನಲ್ಲಿ ನೆಹರೂ, ಇಂದಿರಾ ಗಾಂಧಿ ತತ್ವ ಸಿದ್ಧಾಂತಗಳು ಸತ್ತು ಹೋಗುತ್ತಿವೆ.
- ರಮೇಶ್‌ಕುಮಾರ್, ಶಾಸಕ
-ಪಕ್ಷವೇ ಸತ್ತು ಹೋಗುತ್ತಿರುವಾಗ, ಅವರ ತತ್ವ ಉಳಿಯುವುದು ಹೇಗೆ?
..................................................
* ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿಮಾರ್ಣವಾಗಬೇಕು ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಬಯಕೆಯಾಗಿದೆ.
- ವೆಂಕಯ್ಯನಾಯ್ಡು, ಕೇಂದ್ರ ಸಚಿವ
-ರಸ್ತೆ, ಸೇತುವೆ, ಮನೆಗಳ ನಿರ್ಮಾಣ ಯಾವಾಗ?
..................................................
* ಶೋಷಿತರಿಗೆ ಪ್ರವೇಶವಿಲ್ಲದ ದೇವಸ್ಥಾನಗಳನ್ನು ಬಹಿಷ್ಕರಿಸಿ.
- ಎಲ್. ಹನುಮಂತಯ್ಯ, ಕ.ಪು.ಪ್ರಾ. ಅಧ್ಯಕ್ಷ
-ಬಹಿಷ್ಕಾರ ಮಾಡಿದವರಿಗೆ ಕಾನೂನಿನಲ್ಲಿ ಶಿಕ್ಷೆ ಇದೆಯಂತಲ್ಲ?
..................................................
* ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಎಲ್ಲ ರೀತಿಯಲ್ಲೂ ಅರ್ಹರು.
- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
- ಮುಖ್ಯಮಂತ್ರಿಯಾಗುವುದಕ್ಕೆ ಮಾತ್ರ ಸಲ್ಲರು. ಅಲ್ಲವೇ?
..................................................
* ನಿಜವಾದ ಮುತ್ಸದ್ಧಿತನವೆಂದರೆ ಇದು (ಪ್ರಧಾನಿ ಪಾಕ್ ಭೇಟಿ).
- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ
-ನವಾಝ್ ಶರೀಫ್ ಮೊಮ್ಮಗಳ ಮದುವೆಯಲ್ಲಿ ಉಂಡವನೇ ಜಾಣ.
..................................................
* ಮಾಜಿ ಪ್ರಧಾನಿ ವಾಜಪೇಯಿ ಇಡೀ ದೇಶಕ್ಕೆ ಪ್ರೇರಣೆ.
- ಅನಂತಕುಮಾರ್, ಕೇಂದ್ರ ಸಚಿವ
-ಅದಕ್ಕೆ ಅವರನ್ನು ಕೋಮಾದಲ್ಲಿಡಲಾಗಿದೆ.
..................................................
* ಪ್ರಧಾನಿ ನರೇಂದ್ರ ಮೋದಿಗೆ ಕಂಡವರ ಮಕ್ಕಳ ಬಗ್ಗೆ ಚಿಂತೆ ಇದ್ದರೆ, ಮಲ್ಲಿಕಾರ್ಜುನ ಖರ್ಗೆಗೆ ತನ್ನ ಮಗನ ಬಗ್ಗೆ ಮಾತ್ರ ಚಿಂತೆ.
- ಪ್ರತಾಪ್ ಸಿಂಹ, ಸಂಸದ
- ಮದುವೆಯಾಗಿ ಮೂರೇ ತಿಂಗಳಲ್ಲಿ ಪತ್ನಿಯನ್ನು ದೂರ ಇಟ್ಟ ಮೇಲೆ ಕಂಡವರ ಮಕ್ಕಳೇ ಗತಿ.
..................................................
*ಬಿಜೆಪಿಯಲ್ಲಿ ಮೆದುಳಿಲ್ಲದ ನಾಯಕರೇ ಹೆಚ್ಚು.
- ಸಿದ್ದರಾಮಯ್ಯ, ಮುಖ್ಯಮಂತ್ರಿ
-ಅವರ ಮೆದುಳುಗಳೆಲ್ಲ ಆರೆಸ್ಸೆಸ್ ಕಚೇರಿಯಲ್ಲಿರುವ ಪ್ರಿಡ್ಜ್ ನೊಳಗಿದೆಯಂತೆ.
..................................................
* ಕಾನೂನು ಉಲ್ಲಂಘಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇಲ್ಲ.
- ಜೆ.ನಂದಕುಮಾರ್, ಆರೆಸ್ಸೆಸ್ ಪ್ರಚಾರ ಪ್ರಮುಖ್
-ಬಹುಶಃ ಕಾನೂನನ್ನು ಧ್ವಂಸಗೊಳಿಸಿ ನಿರ್ಮಾಣ ಮಾಡುವ ಉದ್ದೇಶ ಇರಬಹುದು.
..................................................