* ಪಾಶ್ಚಿಮಾತ್ಯರಿಂದ ಪ್ರಭಾವಿತವಾಗಿರುವ ಸ್ವದೇಶಿಯರಿಂದ ಭಾರತಕ್ಕೆ ಅಪಾಯವಿದೆ.

Update: 2016-01-03 18:00 GMT


* ಪಾಶ್ಚಿಮಾತ್ಯರಿಂದ ಪ್ರಭಾವಿತವಾಗಿರುವ ಸ್ವದೇಶಿಯರಿಂದ ಭಾರತಕ್ಕೆ ಅಪಾಯವಿದೆ.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
-ತಮ್ಮಿಂದ ಪ್ರಭಾವಿತರಾಗಿರುವ ಸ್ವದೇಶಿಯರೆಲ್ಲ ಅಮೆರಿಕದಲ್ಲಿ ಡಾಲರ್ ಎನಿಸುತ್ತಿದ್ದಾರಲ್ಲ?
..................................................
* ಭ್ರಷ್ಟಾಚಾರದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಅವಳಿ ಜವಳಿಯಂತಿವೆ.
- ನ್ಯಾ.ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತ

-ನ್ಯಾಯಾಂಗ ಈ ಅವಳಿಜವಳಿಗಳನ್ನು ತೊಟ್ಟಿಲಲ್ಲಿಟ್ಟು ಜೋಜೋ ಹಾಡುತ್ತಿದೆ. ..................................................
* ನನಗೀಗ ಕೇವಲ 27 ವರ್ಷ ಆದಂತೆ ಅನಿಸುತ್ತಿದೆ.
- ಸಲ್ಮಾನ್ ಖಾನ್, ನಟ
-ಕತ್ರೀನಾಳ ಪುತ್ರಿಯ ಜೊತೆಗೆ ಹೀರೋ ಆಗಿ ನಟಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
..................................................
* ಭಾರತವನ್ನು ರಕ್ಷಿಸಲು ನರೇಂದ್ರ ಮೋದಿಯನ್ನು ಕಿತ್ತೆಸೆಯಬೇಕು.
- ಸೀತಾರಾಂ ಯಚೂರಿ, ಸಿಪಿಎಂ ಮುಖಂಡ

-ಮೊಂಡಾಗಿರುವ ಕಮ್ಯುನಿಸ್ಟ್ ಕತ್ತಿಯನ್ನು ಮೊದಲು ಹರಿತ ಮಾಡಿಕೊಳ್ಳಿ. ..................................................
* ದೇವನೂರ ಮಹಾದೇವ ವ್ಯವಸ್ಥೆಯ ಗುಲಾಮ.
- ಪ್ರೊ.ಕೆ.ಎಸ್. ಭಗವಾನ್, ಚಿಂತಕ
 
-ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವವರೆಗೆ ಮಾತ್ರ ಎನ್ನುವುದು ಒಡಂಬಡಿಕೆಯಂತೆ. ..................................................
* ಎಲ್ಲದರಲ್ಲೂ ಹೊಸತನ ಮೋದಿ ಆಶಯ.
- ಸುಷ್ಮಾ ಸ್ವರಾಜ್, ಕೇಂದ್ರ ಸಚಿವೆ

-ನವಾಝ್ ಶರೀಫ್ ಮದುವೆಯೂಟದಲ್ಲಿ ಭಾಗವಹಿಸಿದಾಗಲೇ ಅದು ವಿಶ್ವಕ್ಕೆ ಅರ್ಥವಾಯಿತು. ..................................................
* ಸ್ವಾತಂತ್ರ ಬಂದು ಇಷ್ಟು ವರ್ಷ ಕಳೆದರೂ ನಾವು ಪರಾವಲಂಬನೆಯಲ್ಲಿದ್ದೇವೆ.
- ಶೋಭಾ ಕರಂದ್ಲಾಜೆ, ಸಂಸದೆ
-ಮತ್ತೊಮ್ಮೆ ಸ್ವತಂತ್ರವಾಗಿ ಪಕ್ಷ ಕಟ್ಟುವ ಆಲೋಚನೆಯಿದೆಯೇ ಯಡಿಯೂರಪ್ಪರಿಗೆ?
..................................................
* ಉದ್ಯೋಗ ಸೃಷ್ಟಿಸುವವರನ್ನು ಹುಟ್ಟುಹಾಕುವುದು ಸರಕಾರದ ಮುಖ್ಯ ಉದ್ದೇಶವೇ ಹೊರತು ಉದ್ಯೋಗ ಕೇಳುವವರನ್ನಲ್ಲ.
- ನರೇಂದ್ರ ಮೋದಿ, ಪ್ರಧಾನಿ
-ಕೇಳುವವರನ್ನು ಸಾಯಿಸುವುದೇ?

.................................................. * ಜಾತ್ಯತೀತ ಶಕ್ತಿ ಬಲಿಷ್ಠವಾದಾಗ ದೇಶಕ್ಕೆ ಉತ್ತಮ ಭವಿಷ್ಯವಿದೆ.
- ರಮಾನಾಥ ರೈ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ


-ಬೊಜ್ಜು ಶಕ್ತಿಯಲ್ಲ ಎನ್ನುವುದು ವೈದ್ಯರ ಅಂಬೋಣ. .................................................. * ಮಾನವ ಹಕ್ಕುಗಳ ಪ್ರತಿಪಾದನೆ ಈಗ ಫ್ಯಾಶನ್ ಆಗಿದೆ.
- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ

-ಮಾನವ ಹಕ್ಕುಗಳ ದಮನದ ಬಗ್ಗೆಯೂ ಒಂದಿಷ್ಟು ಮಾತನಾಡಿ. ..................................................
* ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ.
- ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ

-ಕಾಂಗ್ರೆಸ್‌ನ ಪತನದಲ್ಲಿ ನಿಮ್ಮ ಕೊಡುಗೆಯ ಬಗ್ಗೆ ಜನ ಈಗ ಆಡಿಕೊಳ್ಳುತ್ತಿದ್ದಾರೆ. ..................................................
* ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿಯ ಭ್ರಮೆ.
- ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

-ಬಿಜೆಪಿಯ ಭ್ರಮೆಯನ್ನು ಕಾಂಗ್ರೆಸ್‌ನೊಳಗಿರುವವರೇ ನಿಜ ಮಾಡಿ ತೋರಿಸಲು ಸಜ್ಜಾಗಿದ್ದಾರೆ. ..................................................
* ರಾಜಕೀಯ ಲಾಭಕ್ಕೋಸ್ಕರ ನಾರಾಯಣ ಗುರುಗಳ ಪರಂಪರೆಯನ್ನು ತಮ್ಮದಾಗಿಸಿಕೊಳ್ಳುವ ಸಂಚು ನಡೆಯುತ್ತಿದೆ.
- ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

-ಆ ಸಂಚಿನಲ್ಲಿ ಜನಾರ್ದನ ಪೂಜಾರಿ ಪಾಲೂ ಒಂದಿಷ್ಟು ಇದೆಯಂತೆ. ..................................................
* ಸುಮ್ಮನೆ ಮನೆಯಲ್ಲಿ ಕೂರುವ ವ್ಯಕ್ತಿ ನಾನಲ್ಲ.
- ದೇವೇಗೌಡ, ಮಾಜಿ ಪ್ರಧಾನಿ

-ಆಗಾಗ ಪತ್ರಿಕಾಗೋಷ್ಠಿ ಕರೆಯುತ್ತಿದ್ದರೆ ಆಯಿತು ಬಿಡಿ. ..................................................
* ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗಲು ಯುವಜನತೆ ಸಂಸ್ಕಾರಹೀನವಾಗಿ ಬದುಕಿರುವುದೇ ಕಾರಣ.
- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

-ನಿಮ್ಮ ಭಾಷಣದ ಸಂಸ್ಕಾರವನ್ನು ಯುವಜನತೆ ಮೈಗೂಡಿಸಿಕೊಳ್ಳುತ್ತಿರುವ ಪರಿಣಾಮ. ..................................................
* ಬಿಜೆಪಿಯಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ.
- ವಿನಯ ಸಹಸ್ರಬುದ್ಧೆ, ಬಿಜೆಪಿ ಉಪಾಧ್ಯಕ್ಷ
-ಪ್ರತಿಭೆಯಿಲ್ಲದೇ ಈ ಪರಿಯಲ್ಲಿ ದೇಶವನ್ನು ದೋಚಲು ಸಾಧ್ಯವೇ?
..................................................
* ಐಸಿಸ್‌ನತ್ತ ಭಾರತೀಯ ಮುಸ್ಲಿಮರು ಆಕರ್ಷಿತರಾಗಿಲ್ಲ.
- ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ

-ಆರೆಸ್ಸೆಸ್‌ನತ್ತ ಆಕರ್ಷಿತರಾದವರ ಬಗ್ಗೆಯೂ ಒಂದಿಷ್ಟು ಕಾಳಜಿ ಇರಲಿ. ..................................................
* ವಿಧಾನಪರಿಷತ್ ಚುನಾವಣೆಯಲ್ಲಿ ಇನ್ನೂ 4 ಸ್ಥಾನ ಗೆದ್ದಿದ್ದರೆ ತೃಪ್ತಿಯಾಗುತ್ತಿತ್ತು.
- ಡಿ.ಕೆ. ಶಿವಕುಮಾರ್, ಇಂಧನ ಸಚಿವ

-ಕಾಂಗ್ರೆಸ್ ಬಹುಮತ ಪಡೆದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ನೀವು ಘೋಷಿಸಿದ್ದರೆ, ಆ ಸ್ಥಾನಗಳನ್ನೂ ಗೆಲ್ಲುತ್ತಿದ್ದಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!