ಪೊಲೀಸರ ಸೋಗಿನಲ್ಲಿ ಸುಲಿಗೆ

Update: 2016-01-07 17:52 GMT

ಇಬ್ಬರು ಆರೋಪಿಗಳ ದಸ್ತಗಿರಿಬೆಂಗಳೂರು, ಜ. 7: ಪೊಲೀಸರೆಂದು ಸುಳ್ಳು ಹೇಳಿಕೊಂಡು ನೈಸ್ ರಸ್ತೆಗೆ ವಿಹಾರಕ್ಕೆ ಬರುವ ಪ್ರೇಮಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ತಲಘಟ್ಟಪುರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಬಂಧಿತ ಆರೋಪಿಗಳನ್ನು ರಾಮನಗರ ಜಿಲ್ಲೆ, ಕನಕಪುರದ ಗಿರಿಯನಹಳ್ಳಿಯ ನಿವಾಸಿ ರಘು (29) ಹಾಗೂ ತಾತಗುಣಿ, ಲಕ್ಷ್ಮೀಪುರ ಗ್ರಾಮದ ನಿವಾಸಿ ಗೋವಿಂದ ರಾಜು (43) ಎಂದು ಗುರುತಿಸಲಾಗಿದೆ.ರೋಪಿಗಳು ಡಿ.19ರಂದು ನೈಸ್ ರಸ್ತೆಗೆ ವಿಹಾರಕ್ಕೆ ಬಂದಿದ್ದ ಪ್ರೇಮಿಗಳನ್ನು ಅಡ್ಡಗಟ್ಟಿ ಅವರನ್ನು ಬೆದರಿಸಿದ್ದರು. ಅಲ್ಲದೆ, ಪ್ರೇಮಿಗಳನ್ನು ಅವರ ಕಾರಿನಲ್ಲೇ ತಲಘಟ್ಟಪುರಕ್ಕೆ ಕರೆತಂದು ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹುಡುಗ ಮತ್ತು ಹುಡುಗಿಯ ಎಟಿಎಂ ಕಾರ್ಡ್‌ಗಳ ಮೂಲಕ 60 ಸಾವಿರ ರೂ. ನಗದನ್ನು ಡ್ರಾ ಮಾಡಿಸಿ ಸುಲಿಗೆ ಮಾಡಿದ್ದರು. ಈ ಸಂಬಂಧ ವರುಣ್ ಉಮೇಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.ರೋಪಿಗಳಿಂದ ಸುಲಿಗೆ ಮಾಡಿದ್ದ ಹಣದಲ್ಲಿ 52 ಸಾವಿರ ರೂ., ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ ನಕಲಿ ಖಾಕಿ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಬ್ಬರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾವು ಪೊಲೀಸರೆಂದು ಸುಳ್ಳು ಹೇಳಿಕೊಂಡು ವಿಹಾರಕ್ಕೆ ಬರುವ ಪ್ರೇಮಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಸಂಬಂಧ ತಲಘಟ್ಟಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News