ಕಾಲೇಜುಗಳಲ್ಲಿ ನೀತಿ ಬೋಧೆ?!

Update: 2016-01-13 06:47 GMT

ಒರೆಗಲ್ಲು

ನಮ್ಮ ಸಮಾಜಕ್ಕೆ ಅಂಟಿದ ದೊಡ್ಡ ರೋಗವೇನೆಂದರೆ, ಏನೇ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳುವುದಿದ್ದರೂ ವಿದ್ಯಾರ್ಥಿಗಳಿಂದ ಪ್ರಾರಂಭಿಸಬೇಕು ಎಂದು ವಾದಿಸುವುದು. ಪರಿಸರ ರಕ್ಷಣೆ, ವನಮಹೋತ್ಸವ, ಗ್ರಾಹಕ ಚಳವಳಿ, ಶುಚಿತ್ವ ಇತ್ಯಾದಿ ಏನೇ ಯೋಜನೆಯಿದ್ದರೂ ವಿದ್ಯಾರ್ಥಿಗಳ ಮುಖಾಂತರ ಪ್ರಚಾರ ಮಾಡಬೇಕು ಎನ್ನುವುದು ವಿದ್ಯಾರ್ಥಿ ಜೀವನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳದವರ ವಾದವೆನ್ನಬೇಕಾಗುತ್ತದೆ. ಒಂದು ಕಾಲದಲ್ಲಿ ಕುಟುಂಬ ಯೋಜನೆಯ ಬಗ್ಗೆ ಜಾಗೃತಿಯನ್ನುಂಟು ಮಾಡಲು ವಿದ್ಯಾರ್ಥಿಗಳನ್ನು ಬಳಸಿಕೊಂಡ ಹಾಗೆ! 28-12-15ರ ಪತ್ರಿಕೆಯೊಂದರ ಮುಖಪುಟದಲ್ಲಿ 'ಡಿಗ್ರಿ ಕಾಲೇಜಿನಲ್ಲಿ ಇನ್ನು ನೈತಿಕ ವೌಲ್ಯದ ಪಾಠ' ಎಂಬ ಸುದ್ದಿ ಪ್ರಕಟವಾಗಿದೆ. ಕಾಲೇಜು ಶಿಕ್ಷಣ ಇಲಾಖಾ ಆಯುಕ್ತರ ಪ್ರಕಾರ ತರಗತಿ ಆರಂಭಕ್ಕೆ ಮುನ್ನ ಪ್ರತಿದಿನ ವಿದ್ಯಾರ್ಥಿಗಳು ಒಂದೆಡೆ ಸೇರಿ ಸುತ್ತಮುತ್ತಲಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲು; ಚರ್ಚಿಸಲು ಇದೊಂದು ವೇದಿಕೆಯಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಪ್ರತಿದಿನ ಅಸೆಂಬ್ಲಿ ಮಾಡಿ ಪ್ರೇರಣದಾಯಿ ಚರ್ಚೆ ನಡೆಸಿ ಉನ್ನತ ವೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕೆಂಬುದು ಇಲಾಖೆಯ ಇರಾದೆಯಾಗಿದೆ.
ನಮ್ಮ ಸಮಾಜಕ್ಕೆ ಅಂಟಿದ ದೊಡ್ಡ ರೋಗವೇನೆಂದರೆ, ಏನೇ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳುವುದಿದ್ದರೂ ವಿದ್ಯಾರ್ಥಿಗಳಿಂದ ಪ್ರಾರಂಭಿಸಬೇಕು ಎಂದು ವಾದಿಸುವುದು. ಪರಿಸರ ರಕ್ಷಣೆ, ವನಮಹೋತ್ಸವ, ಗ್ರಾಹಕ ಚಳವಳಿ, ಶುಚಿತ್ವ ಇತ್ಯಾದಿ ಏನೇ ಯೋಜನೆಯಿದ್ದರೂ ವಿದ್ಯಾರ್ಥಿಗಳ ಮುಖಾಂತರ ಪ್ರಚಾರ ಮಾಡಬೇಕು ಎನ್ನುವುದು ವಿದ್ಯಾರ್ಥಿ ಜೀವನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳದವರ ವಾದವೆನ್ನಬೇಕಾಗುತ್ತದೆ. ಒಂದು ಕಾಲದಲ್ಲಿ ಕುಟುಂಬ ಯೋಜನೆಯ ಬಗ್ಗೆ ಜಾಗೃತಿಯನ್ನುಂಟು ಮಾಡಲು ವಿದ್ಯಾರ್ಥಿಗಳನ್ನು ಬಳಸಿಕೊಂಡ ಹಾಗೆ! ನನ್ನ ಪ್ರಕಾರ ಶಿಕ್ಷಣವನ್ನು ಅದರ ಪಾಡಿಗೆ ಬಿಟ್ಟು ಬಿಡಿ. ಅದರಲ್ಲಿ ನಿಮ್ಮ ಹಸ್ತಕ್ಷೇಪ ಇಲ್ಲದಿರಲಿ. ಏಕೆಂದರೆ, ಯಾವುದೇ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ದಿಷ್ಟ ಪಠ್ಯಕ್ರಮ, ನಿಯಮಿತ ಬೋಧನಾ ವಿಧಾನ, ವೌಲ್ಯಮಾಪನ, ಪೂರಕ ಪಠ್ಯ ಚಟುವಟಿಕೆಗಳು, ಆಂತರಿಕ ವೌಲ್ಯಮಾಪನ ಇತ್ಯಾದಿಗಳು ಇದ್ದೇ ಇರುತ್ತವೆ.
ವಿದ್ಯಾರ್ಥಿಗಳಿಗೆ ನೀತಿಬೋಧೆ, ವೌಲ್ಯಶಿಕ್ಷಣ ನೀಡಬೇಕು ಎನ್ನುವ ಹಿರಿಯರು ಎಷ್ಟು ನೀತಿವಂತರು? ಹಿರಿಯರಲ್ಲಿ ಯಾವ ವೌಲ್ಯಾದರ್ಶಗಳಿವೆ? ವಿದ್ಯಾರ್ಥಿಗಳು ನಾಳಿನ ಪ್ರಜೆಗಳೆಂಬುದು ನಿಜ. ಆದರೆ, ಅವರ ಸಂಘಟನೆಗಳ ನಾಯಕರು, ಅಧಿಕಾರಿವರ್ಗ, ಶಿಕ್ಷಣ ತಜ್ಞರು ಮುಂತಾದವರು ಒಟ್ಟು ಸೇರಿ ಸಂವಾದ ನಡೆಸಿ ಏನಾದರೂ ಹೊಸ ಉಪಕ್ರಮಕ್ಕೆ ತೊಡಗುವ ಕ್ರಮ ನಮ್ಮಲ್ಲಿದೆಯೇ? ದಶಕಗಳಾಚೆ ಪ.ಬಂಗಾಳದಲ್ಲಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಯ ವೇಳೆ ತಾವು ಬರೆಯುವ ಟೇಬಲ್ ಮೇಲೆ ಚೂರಿಯಿಟ್ಟುಕೊಂಡು ಬರೆಯುತ್ತಿದ್ದುದು ಗೊತ್ತೆ? ಒಮ್ಮೆ ಪರೀಕ್ಷೆಯ ವೇಳೆ ಶಿಸ್ತು ಪರಿಶೀಲಿಸಲು ಬಂದ ಉಪಕುಲಪತಿಯನ್ನೇ ಇರಿದು ಕೊಂದ ವಿದ್ಯಾರ್ಥಿಗಳು ಆಗಿಹೋಗಿದ್ದಾರೆ. ಎಡಪಂಥೀಯ ಸರಕಾರ ಆಡಳಿತಕ್ಕೆ ಬಂದ ಮೇಲೆ ಇಂಥ ಅತಿರೇಕಕ್ಕೆ ಪೂರ್ಣವಿರಾಮ ಬಿದ್ದುದು ಹೇಗೆ? ಈ ಸರಕಾರ ಎಲ್ಲ ವಿದ್ಯಾರ್ಥಿ ಮುಖಂಡರನ್ನು ಸಭೆ ಸೇರಿಸಿ ಏನಾದರೂ ಹೊಸ ಉಪಕ್ರಮ ಕೈಗೊಳ್ಳುವಾಗ ಅವರೊಂದಿಗೆ ಚರ್ಚಿಸಿ ಸಹಮತಕ್ಕೆ ಬಂದು ಯೋಜನೆ ಹಾಕಿಕೊಳ್ಳುತ್ತಿದ್ದರು. ತಾವೇ ಸ್ವತಃ ಹಾಜರಿದ್ದು ಸಹಮತಕ್ಕೆ ಬಂದ ಕಾರ್ಯಕ್ರಮಗಳ ಯಶಸ್ಸಿಗೆ ವಿದ್ಯಾರ್ಥಿಗಳೇ ಮುಂದೆ ನಿಂತು ಕಾರ್ಯಶೀಲರಾಗುತ್ತಿದ್ದರು. ಈ ಉಪಕ್ರಮದ ನಂತರ ವಿದ್ಯಾರ್ಥಿಗಳು ಮುಷ್ಕರ, ಧರಣಿ ನಡೆಸುವುದೇ ನಿಂತಿತು. ಶೈಕ್ಷಣಿಕ ಕಾರ್ಯಕ್ರಮಗಳು ಸರಾಗವಾಗಿ, ಸುಗಮವಾಗಿ ಜರಗುವಂತಾಯಿತು.
ಪಠ್ಯಕ್ರಮ ಎನ್ನುವಾಗ ನಾವು ಪ್ರಚ್ಛನ್ನ (ತೆರೆಮರೆಯ) ಪಠ್ಯಕ್ರಮವನ್ನು ಅನುಲಕ್ಷಿಸುವುದಿಲ್ಲ. ಗಣಿತದ ಪ್ರಮೇಯದಲ್ಲಿ 400 ರೂ. ಬೆಲೆಯ ಒಂದು ಕೆಜಿ ಚಾಪುಡಿಗೆ ಒಂದು ಕೆಜಿ ಮರದ ಪುಡಿ (ಕೆಜಿಗೆ ಒಂದು ರೂ.) ಬೆರೆಸಿ, ಎರಡು ಕೆಜಿ ಮಾರಾಟ ಮಾಡಿದರೆ ಲಾಭದ ಶೇಕಡಾ ಅಂಶ ಎಷ್ಟು? ಎಂಬ ನಿರೂಪಣೆಯಲ್ಲಿ ವಿದ್ಯಾರ್ಥಿ ಲಾಭಕ್ಕಾಗಿ ಚಾಪುಡಿಯೊಂದಿಗೆ ಮರದ ಪುಡಿಯನ್ನೋ, ಕತ್ತೆ ಲದ್ದಿಯ ಪುಡಿಯನ್ನೋ ಬೆರೆಸಬಹುದು ಎಂಬ ನೀತಿಯನ್ನು ಈ ಪ್ರಮೇಯದ ಮೂಲಕ ಅಂತರ್ಗತ ಮಾಡಿಕೊಳ್ಳುತ್ತಾನೆ. ಲಾಭಕ್ಕಾಗಿ ಏನೆಲ್ಲಾ ಮಾಡಬಹುದು ಎಂಬ ಈ ಗೃಹೀತ ತೆರೆಮರೆಯ ಪಠ್ಯಕ್ರಮ. ಇದನ್ನು ಅಥವಾ ಇಂಥೆಲ್ಲ ಪ್ರವೃತ್ತಿಯನ್ನು ಪ್ರಜ್ಞಾಪೂರ್ವಕವಾಗಿ ಪ.ಬಂಗಾಳ ಸರಕಾರ ಅಂದು ತೊಡೆದು ಹಾಕಿದುದೇ ವಿದ್ಯಾರ್ಥಿ ಜನಾಂಗದ ನೀತಿ ವೌಲ್ಯಗಳ ಉತ್ಕರ್ಷಕ್ಕೆ ಕಾರಣವಾಯಿತೆನ್ನುವುದನ್ನು ಮರೆಯಬಾರದು.
ಮೂವತ್ತು ವರ್ಷಗಳ ಹಿಂದೆ ಒಂದನೆ ತರಗತಿಯಿಂದ ಹತ್ತನೆ ತರಗತಿಯ ವರೆಗೆ ಮ್ಯಾಕ್ಮಿಲನ್ ಕಂಪೆನಿಯ ನೀತಿ ಪಾಠದ ಹತ್ತು ಪ್ರಸ್ತಕಗಳು ನೀತಿ ಬೋಧನೆಯ ಪಠ್ಯವಾಗಿ (ಕಾನ್ವೆಂಟ್‌ಗಳಲ್ಲಿ) ನಿಗದಿಯಾಗಿದ್ದವು. ಇವುಗಳಲ್ಲಿ ಬೈಬಲ್ಲಿನ ನೀತಿಗಳೇ ನಿರೂಪಿತವಾಗಿದ್ದವು. 'ನಿನ್ನನ್ನು ಸೃಷ್ಟಿಸಿದ್ದು ಯಾರು?' ಎಂಬ ಶಿಕ್ಷಕಿಯ ಪ್ರಶ್ನೆಗೆ ವಿದ್ಯಾರ್ಥಿ 'ತಂದೆ ತಾಯಂದಿರು' ಎಂದು ಉತ್ತರ ಕೊಡುತ್ತಿದ್ದ. ಆದರೆ ಶಿಕ್ಷಕಿಯ ಪ್ರಕಾರ ಇದು ಸಮರ್ಪಕವಾದ ಉತ್ತರವಲ್ಲ. ಸರಿಯಾದ ಉತ್ತರವೆಂದರೆ ದೇವರು ನಮ್ಮನ್ನು ಸೃಷ್ಟಿ ಮಾಡಿದ್ದು. ತಂದೆ ತಾಯಂದಿರು ಸಹಾಯ ಮಾಡಿರುವುದು, ಅಷ್ಟೇ. ಈ ಮ್ಯಾಕ್ಮಿಲನ್ ನೀತಿ ಪಾಠದ ಶ್ರೇಣಿ ಪುಣ್ಯಕ್ಕೆ ಸಾರಾಸಗಟಾಗಿ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿರಲಿಲ್ಲ. ಹೊಸದಿಲ್ಲಿಯ ್ಞ್ಚಛ್ಟಿಠಿಯವರು ಲೇಖಕರಿಂದ 9-15 ವಯಸ್ಸಿನ ಮಕ್ಕಳ ಉಪಯೋಗಕ್ಕಾಗಿ ಗ್ರಂಥಗಳನ್ನು ಆಹ್ವಾನಿಸಿದರು. ಪೌರಪ್ರಜ್ಞೆ, ವಿಚಾರವಾದ, ಕೋಮುಸೌಹಾರ್ದ, ಜಾತ್ಯತೀತತೆ ಮತ್ತು ಸಮಾಜವಾದಿ ಒಲವಿನ, ಸಮಾಜ ಬದಲಾವಣೆಯ ಆಶಯವನ್ನೆತ್ತಿ ಹಿಡಿಯುವ 'ಅಮಾಸನ ಪಾಠಗಳು' ಎಂಬ ಮಾದರಿ ಪಾಠಗಳ ಸಂಕಲನವನ್ನು ನಾನೂ ಸಿದ್ಧಪಡಿಸಿ ಕಳಿಸಿದೆ. ಒಟ್ಟು ಹನ್ನೆರಡು ಮಾದರಿ ಪಾಠಗಳ ಈ ಸಂಕಲನವನ್ನು ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಸೂಕ್ತ ವ್ಯಂಗ್ಯ ಚಿತ್ರಗಳೊಂದಿಗೆ ದಪ್ಪಕ್ಷರದಲ್ಲಿ ಪ್ರಕಟಿಸಿತು (1995). ಇದರ ಎರಡನೆ ಆವೃತ್ತಿ 2007ರಲ್ಲಿ ಪ್ರಕಟವಾದುದಲ್ಲದೆ, ಕರ್ನಾಟಕ ಸರಕಾರದ ವಯಸ್ಕರ ಮತ್ತು ನವಸಾಕ್ಷರರ ಉಪಯೋಗಕ್ಕಾಗಿ ಇದನ್ನು ನಾಲ್ಕು ಕಿರು ಗ್ರಂಥಗಳನ್ನಾಗಿ ಪ್ರತ್ಯೇಕವಾಗಿ ಪ್ರಕಟಿಸಲಾಯಿತು. ಮೊದಲನೆ ಪಾಠದ ಶೀರ್ಷಿಕೆ 'ಅಮಾಸನ ಅಕ್ಷರಾಭ್ಯಾಸ'. ಎಲೆಯ ಮಕ್ಕಳಿಗೆ ಪ್ರಿಯವಾದ ಶಬ್ದಗಳನ್ನು ವಾಕ್ಯದ ಮೂಲಕ ಕಲಿಸಬೇಕು. ಆ ವಾಕ್ಯದಲ್ಲಿ ನೀತಿ ವೌಲ್ಯ ಮತ್ತು ಧನಾತ್ಮಕ ವಿಚಾರವೂ ಕ್ರೋಡೀಕೃತವಾಗಿ ಒಡಬೆರೆತಿರಬೇಕು ಎನ್ನುವುದನ್ನು ಶೈಕ್ಷಣಿಕ ಮತ್ತು ಶಿಶು ಮನೋವಿಜ್ಞಾನವನ್ನು ಓದಿದವರು ಪ್ರತಿಪಾದಿಸುತ್ತಾರೆ. ಈ ದೃಷ್ಟಿಯಿಂದ 'ಅ'ಕಾರವನ್ನು ಪರಿಚಯಿಸುವಾಗ 'ಅಮ್ಮನೇ ಏಕೆ ಅನ್ನ ಮಾಡಬೇಕು?', 'ಇಲಿಯ ಮೇಲೆ ಗಣಪ ಹೇಗೆ ಕೂರುತ್ತಾನೆ?', 'ಉಪ್ಪು ಹೊರುವವನ ಬೆವರು ಸಿಹಿಯೇ?', 'ಗುಡಿಸಲುಗಳಿಗೆ ಏಕೆ ಬೆಂಕಿ ಬೀಳುತ್ತದೆ?', 'ಜನಶಕ್ತಿ ಮುಂದೆ ಅಣುಶಕ್ತಿ ಎಲ್ಲಿ?' ಮುಂತಾದ ವಾಕ್ಯಗಳು ಈ ಪಾಠದಲ್ಲಿ ಕನ್ನಡ ಅಕ್ಷರಮಾಲಾನುಸಾರ ಬಂದಿವೆ.
ನೀತಿ ವೌಲ್ಯಗಳನ್ನು ಬೋಧಿಸುವ ಮೂಲಕ ಕಲಿಸಲಾಗದು. ಹಾಗೆ ಬೋಧಿಸುವುದು ಅರ್ಥಹೀನ. ವಾಚ್ಯವಾಗಿ ಬೋಧಿಸುವುದಕ್ಕಿಂತ ಏನಾದರೊಂದು ಕತೆ, ಪ್ರಸಂಗ, ದೃಷ್ಟಾಂತದ ಮೂಲಕ ನಿಗಮನ ರೀತ್ಯಾ (ಛಿಛ್ಠ್ಚಠಿಜಿಛಿ ಆಗಿ) ಪ್ರೇರೇಪಿಸುವ ಮೂಲಕ ಹೆಚ್ಚಿನ ಪ್ರಯೋಜನವಾದೀತು. ನಿಯಮ ನಿರೂಪಣೆಗಿಂತ ನಾವು ಶಿಕ್ಷಕರು ಮತ್ತು ಕುಟುಂಬದ ಹಿರಿಯರು ಒಂದು ವೌಲ್ಯಾದರ್ಶದ ಜೀವಂತ ಮಾದರಿಯಾಗಿ, ಅನುಷ್ಠಾನದ ಮೂಲಕ ಹೆಚ್ಚಿನ ಸಹಸ್ಪಂದನವನ್ನು ಹೊಂದಬಹುದು. ಮನೆಯಲ್ಲಿ ತಂದೆ ತಾಯಂದಿರೇ ಹೆಣ್ಣು-ಗಂಡು ಮಕ್ಕಳ ನಡುವೆ ತಾರತಮ್ಯ ಪ್ರದರ್ಶಿಸಿಸುವುದು; ತಮ್ಮ ಭಾಷಾ ಮತ್ತು ಚರಿತ್ರೆಯ ಪಠ್ಯಗಳು ಪುರುಷ ಪ್ರಧಾನ ವೌಲ್ಯಗಳನ್ನೆತ್ತಿ ಹಿಡಿಯುವುದು ಮುಂತಾದ ಅನಿಷ್ಟಗಳಿಂದ ಮಕ್ಕಳು ಪ್ರಚ್ಛನ್ನವಾಗಿ ಕೆಲವು ವೌಲ್ಯಗಳನ್ನೂ ವಿಚಾರಗಳನ್ನೂ ರಕ್ತಗತಗೊಳಿಸುತ್ತಾರೆ. ಆಡುವುದೊಂದು - ಮಾಡುವುದೊಂದು ಇದೇ ಬದುಕುವ ಮಾರ್ಗ ಎಂಬಂತೆ ಹಿರಿಯರನ್ನು ಅನುಕರಿಸುತ್ತಾರೆ. ಸಂಸ್ಕೃತ ಭಾಷಾ ಪ್ರಯೋಗದಲ್ಲಿ 'ಸ್ತ್ರೀ' ಹೆರುವವಳು; ಪುರುಷ 'ತುಂಬುವವ. ಜಗತ್ತಿನ ದೊಡ್ಡಣ್ಣನಾದ ಅಮೆರಿಕದಲ್ಲಿ ವಾಹನಗಳಿಗೆ ಪೆಟ್ರೋಲ್ ತುಂಬುವಾಗ '್ಛಜ್ಝ್ಝಿ ಛ್ಟಿ' ಎಂಬುದಾಗಿ ಉದ್ಗರಿಸುತ್ತಾರೆ. ಬೆಂಗಳೂರಿನ ಚ್ಚಠಿಜಿಟ್ಞಜಿ (ಸ್ವರಾಜ್ ಸಂಘಟನೆ)ಯವರು ಲಿಂಗತ್ವ ಸಮಾನತೆಗಾಗಿ ಶ್ರಮಿಸುತ್ತಾ ಬಂದಿದ್ದಾರೆ; ಪ್ರಾಥಮಿಕ ಪಠ್ಯಪುಸ್ತಕಗಳ ವ್ಯಾಕರಣ-ಅರ್ಥ ವಿಜ್ಞಾನಗಳು ಗಂಡು ಹೆಣ್ಣುಗಳ ನಡುವೆ ಲೈಂಗಿಕ ತಾರತಮ್ಯವನ್ನು ಪ್ರಚೋದಿಸುತ್ತಿರುವುದನ್ನು ದೃಷ್ಟಾಂತಗಳೊಂದಿಗೆ ಉಲ್ಲೇಖಿಸಿ ಸರಕಾರಕ್ಕೆ ವರದಿ ಮಾಡಿದ್ದಾರೆ. ನಮ್ಮ ಕುಟುಂಬ ಜೀವನ ಮತ್ತು ಸಾಮಾಜಿಕ ಜೀವನದ ದ್ವಂದ್ವ- ವೈರುಧ್ಯಗಳು ಪಠ್ಯಪುಸ್ತಕಗಳಲ್ಲಿ ಅಂತರ್ಗತವಾಗಿದ್ದು, ಅವುಗಳನ್ನು ಪ್ರಜ್ಞಾಪೂರ್ವಕವಾಗಿ ಶಿಕ್ಷಕವರ್ಗ ತೊಡೆದು ಹಾಕಬೇಕಾಗಿದೆ. ಆದುದರಿಂದ, ಪಠ್ಯಗಳು ಹೇಗೇ ಇರಲಿ; ಅವುಗಳ ಮೂಲಕ ಶಿಕ್ಷಕರು ಧನಾತ್ಮಕ ವೌಲ್ಯಾದರ್ಶಗಳನ್ನು ಬೋಧನೆಯಲ್ಲಿ ಮತ್ತು ನಡವಳಿಕೆಯಲ್ಲಿ ಎತ್ತಿ ಹಿಡಿಯಬೇಕು; ವಿದ್ಯಾರ್ಥಿಗಳು ಇಂತಹ ಶಿಕ್ಷಕರಿಂದ ಖಂಡಿತವಾಗಿ ಉತ್ತಮ ಗುಣವೌಲ್ಯಗಳನ್ನು ಪ್ರೇರಣೆ ಮೂಲಕ ರೂಢಿಸಿಕೊಳ್ಳಬಲ್ಲರು; ಮುಂದಿನ ಬಾಳಿನುದ್ದಕ್ಕೂ ಸಮಾಜೋಪಯೋಗಿ ಪ್ರಜ್ಞಾವಂತ ನಾಗರಿಕ ವ್ಯಕ್ತಿಗಳಾಗಿ ರೂಪುಗೊಳ್ಳಬಲ್ಲರು.
ನಾವು ನಮ್ಮ ಎಳೆಯ ಜನಾಂಗಕ್ಕೆ ನೀಡುವ ಶಿಕ್ಷಣವು ಅವರ ಬುದ್ಧಿ-ಭಾವ-ಸಂಕಲ್ಪಗಳನ್ನು ಉದ್ದೀಪನಗೊಳಿಸುವಂತಾಗಬೇಕಾದರೆ, ಪಠ್ಯ -ಪೂರಕ ಪಠ್ಯಗಳಲ್ಲಿ ಸಮನ್ವಯವಿರಬೇಕು. ರಾಷ್ಟ್ರೀಯ ಸೇವಾ ಯೋಜನೆ, ಭಾಷಾ ಲಲಿತಕಲಾ ಸಂಘ, ಎನ್.ಸಿ.ಸಿ., ಪರಿಸರಾಧ್ಯಯನ ಸಂಘ-ಮುಂತಾದ ಸಂಘಗಳು ಹೆಚ್ಚಿನ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿವೆ. ಜಾತಿ-ಲಿಂಗ ಭೇದ ಮರೆತು ವಿದ್ಯಾರ್ಥಿಗಳು ಇಂಥ ಚಟುವಟಿಕೆಗಳ ಮೂಲಕ ಒಳ್ಳೆಯ ನೀತಿವೌಲ್ಯಗಳನ್ನು ಕಲಿಯಬಲ್ಲರು. ಆದುದರಿಂದ ಶಾಲಾ ಕಾಲೇಜುಗಳಲ್ಲಿ ಪ್ರತ್ಯೇಕ 'ಪ್ರೇರಣದಾಯಿ' ನೀತಿಬೋಧೆ ಅನಗತ್ಯ.

Writer - ಡಾ. ಆರ್ಕೆೆ, ಮಣಿಪಾಲ

contributor

Editor - ಡಾ. ಆರ್ಕೆೆ, ಮಣಿಪಾಲ

contributor

Similar News

ಸಂವಿಧಾನ -75