* ಪಾಕ್‌ನೊಂದಿಗೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಲು ನಮ್ಮ ಸರಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

Update: 2016-01-10 17:47 GMT


- ಸದಾನಂದ ಗೌಡ, ಕೇಂದ್ರ ಸಚಿವ
-ಹಾಗೆಂದು, ಗಡಿಯಲ್ಲಿ ಇರುವೆ ಬಿಟ್ಟುಕೊಳ್ಳುವುದು ಅಸಂಬದ್ಧ.
..................................................
* ಹೊಸ ವರ್ಷ ನಮ್ಮ ಮುಂದೆ ಸವಾಲುಗಳ ಪಟ್ಟಿಯೊಂದಿಗೆಶುರುವಾಗಿದೆ.
- ಅರುಣ್‌ಜೇಟ್ಲಿ, ಕೇಂದ್ರ ಹಣಕಾಸು ಸಚಿವ

-ಬಿಜೆಪಿಯ ಹೊಸ ವರ್ಷದ ದೊಡ್ಡ ಸವಾಲು ನೀವೇ ಆಗಿರುವುದು ವಿಪರ್ಯಾಸ. ..................................................
* ಶೀಘ್ರದಲ್ಲಿಯೇ ಡಾ.ಎಂ.ಎಂ. ಕಲಬುರ್ಗಿ ಹಂತಕರನ್ನು ಬಂಧಿಸಲಾಗುವುದು.
- ಡಾ.ಜಿ.ಪರಮೇಶ್ವರ್, ಗೃಹ ಸಚಿವ

-ಇನ್ನೆಷ್ಟು ಪ್ರಶಸ್ತಿ ವಾಪಸಾಗಬೇಕು ಎನ್ನುವುದನ್ನಾದರೂ ಹೇಳಿ. ..................................................
* ನಾನು ಕೋಮುವಾದಿಯಲ್ಲ, ಪ್ರೇಮವಾದಿ.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
-ಧ್ವಂಸಗೊಳಿಸುವುದೂ ನಿಮ್ಮ ಪ್ರಕಾರ ಪ್ರೇಮದ ಭಾಗವೇ?
..................................................
* ಇತ್ತೀಚೆಗೆ ಪಾಕ್ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಯ ಕ್ರಮ ತಪ್ಪಲ್ಲ.
- ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ

-ನಿತೀಶ್ ಲಾಲುವನ್ನು ಭೇಟಿಯಾಗಬಹುದಾದರೆ, ಇದೇನು ದೊಡ್ಡ ತಪ್ಪಲ್ಲ ಬಿಡಿ. ..................................................


* ಮೊನ್ನೆ ಬಂದೂಕು ಸಂಸ್ಕೃತಿ ವಿರುದ್ಧ ನಾನು ಭಾಷಣ ಮಾಡುವಾಗ ನಾನೇಕೆ ಅತ್ತೆ ಎಂಬುದರ ಬಗ್ಗೆ ನನಗೂ ಅಚ್ಚರಿಯಾಗುತ್ತಿದೆ.
- ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

-ಮನಃಸ್ಸಾಕ್ಷಿ ಅಳಿಸಿರಬೇಕು. ..................................................
* ರಾಜಕೀಯ ವ್ಯವಸ್ಥೆಗೆ ತಳ ಸಮುದಾಯದ ನೋವು ಅರ್ಥನೇ ಆಗಿಲ್ಲ.
- ಸಿ.ಆರ್. ದ್ವಾರಕಾನಾಥ್, ಹಿ.ವ.ಆ. ಮಾಜಿ ಅಧ್ಯಕ್ಷ

-ಅರ್ಥ ಆಗದಂತೆ ನಟಿಸುತ್ತಿದ್ದಾರೆ ಅಷ್ಟೇ. ..................................................

* ಇಂದು ಸತ್ಯ ಹೇಳಿದರೆ ದೊಡ್ಡ ಅಪರಾಧವಾಗುತ್ತದೆ.
- ಡಾ.ಬಂಜಗೆರೆ ಜಯಪ್ರಕಾಶ್, ಕ.ಪು.ಪ್ರಾ. ಅಧ್ಯಕ್ಷ

-ಸುಳ್ಳು ಹೇಳಿದರೆ ಸ್ಥಾನ ಪ್ರಶಸ್ತಿಗಳೂ ಸಿಗುತ್ತವಂತೆ. ..................................................
* ನನ್ನನ್ನು ಉಪೇಕ್ಷಿಸಿದ್ದರಿಂದ ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು.
- ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ

-ಬಿಹಾರದ ಜನರು ಗೆದ್ದರು ಬಿಡಿ. ..................................................
* ಸೈತಾನನ್ನಾದರೂ ಬದಲಿಸಬಹುದು ಆದರೆ ಪಾಕಿಸ್ತಾನವನ್ನು ಬದಲಿಸಲು ಸಾಧ್ಯವಿಲ್ಲ.
- ಯೋಗಿ ಆದಿತ್ಯನಾಥ್, ಸಂಸದ
-ಸೈತಾನನ್ನು ಬದಲಿಸಲು ಸೈತಾನನಿಗೆ ಸಾಧ್ಯವಿದೆಯೋ ಎಂಬ ಪ್ರಯೋಗ ಮಾಡಲು ನಿಮ್ಮನ್ನು ಪಾಕಿಸ್ತಾನಕ್ಕೆ ಕಳುಹಿಸಿದರೆ ಹೇಗೆ?
..................................................
* ನಾವು ನಮ್ಮ ಭಿನ್ನಾಭಿಪ್ರಾಯವನ್ನು ಮರೆಯದೇ ಇದ್ದರೆ, ಸಂವಿಧಾನ ಕೂಡಾ ನಮ್ಮನ್ನು ರಕ್ಷಿಸಲಾರದು.
- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

-ಸಂವಿಧಾನವನ್ನು ನಿಮ್ಮಿಂದ ರಕ್ಷಿಸುವ ಕೆಲಸವೀಗ ನಡೆಯಬೇಕಾಗಿದೆ. ..................................................
* ಭಾಷೆಯನ್ನು ಸರಿಯಾಗಿ ಬಳಸದಿದ್ದಲ್ಲಿ ನಾಶವಾಗುವ ಸಾಧ್ಯತೆಗಳಿವೆ.
- ರಮಾನಾಥ ರೈ, ಸಚಿವ
-ಅನುದಾನವನ್ನು ತಾವು ಸರಿಯಾಗಿ ಬಳಸುವುದು ಯಾವಾಗ?
..................................................
* 2030ರೊಳಗೆ ಹಸಿವು-ಬಡತನ ಮುಕ್ತ ಭಾರತ.
- ನರೇಂದ್ರ ಮೋದಿ, ಪ್ರಧಾನಿ

-ಅಂದರೆ 2030ರ ಬಳಿಕ ಉದರಗಳಿಲ್ಲದ ಮಕ್ಕಳು ಜನಿಸುತ್ತಾರೆ ಎಂದು ಕಾಣುತ್ತದೆ. ..................................................
* ಹಿಂದು ಎನ್ನುವ ಶಬ್ದ ಮತ್ತು ವ್ಯಕ್ತಿಗೆ ಜಗತ್ತಿನಲ್ಲಿ ಅತ್ಯಂತ ಅವಮಾನವಾಗುತ್ತಿದೆ.
- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

-ಹೌದು. ಅದಕ್ಕೆ ನಿಮ್ಮಂತಹ ಕೆಲವು ನಾಯಕರೇ ಕಾರಣರಾಗಿರುವುದು ವಿಪರ್ಯಾಸ. ..................................................
* ಸಚಿವನಾಗಿರುವುದರಿಂದ ನನಗೆ ಗೌರವ. ಇಲ್ಲಾಂದ್ರೆ ನಾನೂ ಅಸ್ಪಶ್ಯನೇ.
- ಎಚ್. ಆಂಜನೇಯ, ಸಚಿವ
 
- ಸಚಿವನಾಗಿರುವುದರ ಬಗ್ಗೆ ಕೆಲವರಿಗೆ ಈ ಕಾರಣಕ್ಕೇ ಅಸಮಾಧಾನವಿದೆ. ..................................................
* ರಾಷ್ಟ್ರ ರಾಜಕಾರಣಕ್ಕೆ ಮರಳುವುದಿಲ್ಲ.
- ದೇವೇಗೌಡ, ಮಾಜಿ ಪ್ರಧಾನಿ

-ಹಾಸನ ನಗರ ಸಭೆ ರಾಜಕಾರಣಕ್ಕೆ ವಾಪಸಾಗಿದ್ದೀರಿ ಎನ್ನುವುದು ಸುದ್ದಿ. ..................................................
* ಮಹಿಳೆಯರಿಗೆ ಪಿಎಚ್‌ಡಿ ಸರಳಗೊಳಿಸಿ.
- ಸ್ಮತಿ ಇರಾಣಿ, ಕೇಂದ್ರ ಸಚಿವೆ
-ಅಂದರೆ ನಕಲಿ ಪ್ರಮಾಣ ಪತ್ರ ಕೊಡುವ ಮೂಲಕವೇ?
..................................................
* ರಾಜ್ಯ ಸರಕಾರದ ಬಹುತೇಕ ಇಲಾಖೆಗಳಿಗೆ ಲಕ್ವ ಹೊಡೆದಿದೆ.
- ಎಚ್.ವಿಶ್ವನಾಥ್, ಮಾಜಿ ಸಚಿವ

-ಕೆಲವು ಇಲಾಖೆಗಳು ಕೋಮಾದಲ್ಲಿವೆ. ..................................................
* ಸಂಪನ್ಮೂಲ ಮತ್ತು ಸಮನ್ವಯದ ಕೊರತೆಯಿಂದಾಗಿ ಪರಿಷತ್ ಚುನಾವಣೆಯಲ್ಲಿ ನಾವು ಸೋಲಬೇಕಾಯಿತು.
- ಸಿ.ಟಿ. ರವಿ, ಮಾಜಿ ಸಚಿವ

-ಸಂಪನ್ಮೂಲ ಅಂದರೆ ಹಣವನ್ನು ಹಂಚುವಲ್ಲಿ ಸಮನ್ವಯತೆಯ ಕೊರತೆಯಾಗಿರಬೇಕು. ..................................................
* ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬಂದು ಪ್ರಾರ್ಥಿಸಿದರೆ ನಾಡಿನ ಹಲವು ಸಂಕಷ್ಟಗಳು ದೂರವಾಗಬಹುದು.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
-ಗರ್ಭ ಗುಡಿಗೆ ಪ್ರವೇಶವಿದೆಯೇ? ಅಥವಾ ಕನಕನ ಕಿಂಡಿಯೇ ಗತಿಯೇ?
..................................................

* ಭಾರತದಲ್ಲಿ ಅಸಹಿಷ್ಣುತೆ ಇಲ್ಲ. - ತಸ್ಲೀಮಾ ನಸ್ರೀನ್, ಲೇಖಕಿ

-ತಮ್ಮನ್ನು ಸಹಿಸಿಕೊಂಡ ಕಾರಣಕ್ಕಾಗಿ ಇರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!