ಮಹಿಳಾ ಸಮುದಾಯ ಸಂಘಟಿತವಾಗಲಿ: ಸೈಯದ್

Update: 2016-01-10 19:04 GMT

ಬೆಂಗಳೂರು, ಜ.10: ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳಾ ಸುರಕ್ಷತೆ ದೊಡ್ಡ ಸವಾಲಾಗಿದ್ದು, ಆ ಸವಾಲನ್ನು ಮಹಿಳೆಯರು ಸಂಘಟನಾತ್ಮಕವಾಗಿ ಒಗ್ಗೂಡುವ ಮೂಲಕ ಸಮರ್ಥವಾಗಿ ಎದುರಿಸಬೇಕು ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ.ಸೈಯದ್ ಕರೆ ನೀಡಿದ್ದಾರೆ.
ರವಿವಾರ ನಗರದ ಐಎಸ್‌ಐ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವುಮೆನ್ ಇಂಡಿಯಾ ಮೂಮೆಂಟ್’ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಮುದಾಯ ಸ್ವತಂತ್ರವಾಗಿ ಚಿಂತಿಸುವುದರ ಮೂಲಕ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ವುಮೆನ್ ಇಂಡಿಯಾ ಮೂಮೆಂಟ್‌ನ ರಾಜ್ಯ ಸಂಚಾಲಕಿ ಫಸಿಹ ಖಾನ್, ವುಮೆನ್ ಇಂಡಿಯಾ ಮೂಮೆಂಟ್‌ನ ರಾಷ್ಟ್ರಾಧ್ಯಕ್ಷೆ ಯಾಸ್ಮಿನ್ ಫಾರೂಖಿ, ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷೆ ಸಫಿಯಾ ಪರ್ವಿನ್, ಎಸ್‌ಡಿಪಿಐನ ಉಪಾಧ್ಯಕ್ಷ ಸರ್ಫುದ್ದಿನ್ ಆಹ್ಮದ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ಡಬ್ಲೂಐಎಂನ ತಮಿಳುನಾಡಿನ ಕಾರ್ಯದರ್ಶಿ ಫಾತಿಮಾ ಘಾನಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News