ಬಿಬಿಎಂಪಿ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2016-01-18 18:13 GMT

 ಬೆಂಗಳೂರು, ಜ. 18: ಕೆಲಸವೇ ಆಗದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಕಾನೂನುಬಾಹಿರವಾಗಿ ಅನುಮೋದನೆ ಪಡೆದುಕೊಂಡಿರುವ ಬಗ್ಗೆ ನಗರಪಾಲಿಕೆ ಆಯುಕ್ತ ಕುಮಾರ್ ನಾಯಕ್ ವಿರುದ್ಧ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರ ಎಚ್.ನಾಗಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಎಸ್.ಮಂಜುನಾಥ್, ಉಪಗುತ್ತಿಗೆದಾರ ಜಯರಾಂ ವಿರುದ್ಧವೂ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಸದಾಶಿವನಗರದ ಪೊಲೀಸ್ ಠಾಣೆಯಿಂದ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ಬಿ.ಇ.ಎಲ್. ರಸ್ತೆಗೆ ಡಾಂಬರೀಕರಣ ಆವಶ್ಯಕತೆ ಇಲ್ಲ ಎಂದು ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಸೂಚಿಸಿದಾಗ ಪ್ರಸ್ತಾವನೆ ಕೈಬಿಡಲಾಗಿತ್ತು.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಸ್ತಾವನೆ ಕೈಬಿಟ್ಟ ಬಗ್ಗೆ ಆಡಳಿತಾಧಿಕಾರಿಗಳು ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದ್ದರು.

ಆದರೂ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮೂರನೇ ಬಾರಿಗೆ ಸಭೆ ಮುಂದೆ ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡದೆ ಅನುಮೋದನೆ ಪಡೆದುಕೊಂಡಿರುವ ಕ್ರಮ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿನಲ್ಲಿ ರಮೇಶ್ ಸಂಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News