ನಾಡ ಕಚೇರಿಯಲ್ಲಿ ಅರ್ಜಿ ಸ್ವೀಕಾರ

Update: 2016-01-18 18:17 GMT

ಬೆಂಗಳೂರು, ಜ. 18: ಭೂಮಿ ಸೇವೆ ಮತ್ತು ಮ್ಯುಟೇಷನ್‌ಗಾಗಿ ತಾಲೂಕು ಕಚೇರಿಯ ಭೂಮಿ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಪ್ರಸ್ತುತ ಸದರಿ ಸೇವೆಗಳಿಗಾಗಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಹೋಬಳಿ ಮಟ್ಟದ ನಾಡ ಕಚೇರಿಗಳಿಗೆ ವಿಸ್ತರಿಸಲಾಗಿರುತ್ತದೆ.

   ಅದರಂತೆ, ಭೂಮಿ ಕೇಂದ್ರಗಳಲ್ಲಿ ಭೂಮಿ ಸೇವೆ/ಮ್ಯೂಟೇಷನ್‌ನ ಈ ಕೆಳಕಂಡ ಸೇವೆಗಳಿಗಾಗಿ ಸ್ವೀಕರಿಸುತ್ತಿದ್ದ ಅರ್ಜಿಗಳನ್ನು ಇನ್ನು ಮುಂದೆ ರಾಜ್ಯದ ಎಲ್ಲ್ಲ ನಾಡಕಚೇರಿಗಳಲ್ಲಿ ಸ್ವೀಕರಿಸಲಾಗುತ್ತದೆ. ಖಾತಾ ಬದಲಾವಣೆ (ಪೌತಿ, ವಿಲ್ ಮತ್ತು ಮೈನರ್ ಗಾರ್ಡಿಯನ್) ಸರಕಾರಿ ಆದೇಶ (ಭೂ ಮಂಜೂರು, ಭೂ ಸುಧಾರಣೆ ಮಂಜೂರು, ಮರು ಮಂಜೂರು) ಕೋರ್ಟ್ ತಡೆ( ತಡೆಯಾಜ್ಞೆ, ತಡೆ ಬಿಡುಗಡೆ, ಹಕ್ಕು ಮತ್ತು ಋಣಭಾರ (ಆಧಾರ/ಆಧಾರ/ಭೋಗ್ಯ ಬಿಡುಗಡೆ, ಸರಕಾರಿ ನಿಬಂಧನೆ) ಭೂ ಪರಿವರ್ತನೆ (ನಿವೇಶನ, ಕಾರ್ಖಾನೆ ಇತ್ಯಾದಿ) ತಕರಾರು (30ದಿನಗಳ ನೋಟಿಸ್ ಅವಧಿಯೊಳಗೆ ಇರುವ ವಹಿವಾಟುಗಳಿಗೆ).

ನಾಡ ಕಚೇರಿಗಳಲ್ಲಿ ಈ ಮೇಲಿನ ಭೂಮಿ ಸೇವೆಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದರಿಂದ, ಸಾರ್ವಜನಿಕರು ದೂರದ ತಾಲೂಕು ಕಚೇರಿಯಲ್ಲಿರುವ ಭೂಮಿ ಕೇಂದ್ರಗಳಿಗೆ ಪ್ರಯಾಣಿಸಿ ಅರ್ಜಿಗಳನ್ನು ಸಲ್ಲಿಸುವುದನ್ನು ತಪ್ಪಿಸಿ, ಅವರ ಗ್ರಾಮದ ಸಮೀಪದಲ್ಲಿರುವ ಹೋಬಳಿ ಕೇಂದ್ರದ ನಾಡಕಚೇರಿಗಳಲ್ಲಿಯೇ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News