ಕಳವು ಪ್ರಕರಣ; ಆರೋಪಿಗಳ ಬಂಧನ
Update: 2016-01-21 17:38 GMT
ಆನೇಕಲ್, ಜ,21: ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅತ್ತಿ ಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನುಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಾಥ್, ರಮೇಶ್, ಶ್ರೀನಾಥ್ ರೆಡ್ಡಿಯೆಂದು ಗುರುತಿಸಲಾಗಿದೆ. ಆರೋಪಿಗಳು ಅತ್ತಿಬೆಲೆ ಸುತ್ತಮುತ್ತಲ ಮನೆಗಳಿಗೆ ನುಗ್ಗಿ ಮನೆಯಲ್ಲಿ ವಸ್ತುಗಳು ಹಾಗೂ ಕಾರುಗಳನ್ನು ಕಳ್ಳತನ ಮಾಡುತ್ತಿದ್ದರು.
ಬಂಧಿತರಿಂದ ಒಟ್ಟು 35 ಲಕ್ಷ ರೂ. ಮೌಲ್ಯದ 207 ಗ್ರಾಂ ಚಿನ್ನ , 2 ಕೆ.ಜಿ ಬೆಳ್ಳಿ, ಎರಡು ಕ್ಯಾಮರಾ ,ಮೂರು ಎಲ್‌ಇಡಿ ಟಿ.ವಿ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಮಾಲಕರಿಗೆ ಹಸ್ತಾಂತರಿಸಿದ್ದಾರೆ.