ನ್ಯಾಯದೇಗುಲ ಪ್ರಕರಣ; ಮಾಲಕರಿಗೆ ಹಣ ಪಾವತಿಸಲು ಕಂದಾಯ ಇಲಾಖೆಗೆ ಹೈಕೋರ್ಟ್ ಸೂಚನೆ

Update: 2016-01-21 18:25 GMT

 ಬೆಂಗಳೂರು, ಜ.21: ವಿಲ್ಸನ್‌ಗಾರ್ಡನ್ ವ್ಯಾಪ್ತಿಯಲ್ಲಿ ನ್ಯಾಯದೇಗುಲಕ್ಕೆ ವಶಪಡಿಸಿಕೊಂಡ ನಿವೇಶನ ಮಾಲಕರಿಗೆ ಬಾಕಿ ಉಳಿದಿರುವ 49 ಕೋಟಿ ರೂ. ನೀಡಲು ಹೈಕೋರ್ಟ್ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ. ಈ ಸಂಬಂಧ ಝಾಕೀರ್ ಅಹ್ಮದ್‌ಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ ಪೀಠವು ನಿವೇಶನದ ಮಾಲಕರಿಗೆ ಉಳಿದ ಬಾಕಿ ಹಣವನ್ನೂ ನೀಡುವಂತೆ ಸೂಚನೆ ನೀಡಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ನ್ಯಾಯದೇಗುಲಕ್ಕಾಗಿ 5 ಸಾವಿರ ಚದರ ಮೀಟರ್ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಈಗಾಗಲೇ 29 ಕೋಟಿ ರೂ.ಗಳನ್ನು ನೀಡಿದ್ದು, ಉಳಿದ 49 ಕೋಟಿ ರೂ. ನೀಡಿಲ್ಲ. ಹೀಗಾಗಿ, ಈ ಹಣವನ್ನೂ ಪಾವತಿಸುವಂತೆ ವಾದ ಮಂಡಿಸಿದರು. ನ್ಯಾಯ ಪೀಠವು ವಾದ ಪ್ರತಿವಾದವನ್ನು ಆಲಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬಾಕಿ ಉಳಿದಿರುವ 49 ಕೋಟಿ ರೂ. ಪಾವತಿಸುವಂತೆ ಸೂಚನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News