ಬಿಡಿಎ ದಾಳಿ: 15 ಕೋಟಿ ರೂ.ಆಸ್ತಿ ವಶ

Update: 2016-01-22 18:41 GMT

ಬೆಂಗಳೂರು, ಜ.22: ನಗರದ ಲೊಟ್ಟೆಗೊಲ್ಲಹಳ್ಳಿ ಹಾಗೂ ಆರ್‌ಎಂವಿ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಸುಮಾರು 15 ಕೋಟಿ ರೂ. ಆಸ್ತಿಯನ್ನು ವಶಪಡಿಸಲಾಗಿದೆ.

  ಲೊಟ್ಟೆಗೊಲ್ಲಹಳ್ಳಿ ಗ್ರಾಮದ ಸರ್ವೇ ನಂ 2/3 ಹಾಗೂ 3/3 ಹಾಗೂ ಚಿಕ್ಕಮಾರನಹಳ್ಳಿ ಗ್ರಾಮದ ಸರ್ವೇ ನಂ.30, ಆರ್‌ಎಂವಿ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ 4 ಶೆಡ್‌ಗಳನ್ನು ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಿ ಪ್ರಾಧಿಕಾರಕ್ಕೆ ಸೇರಿದ 15 ಗುಂಟೆ ಪ್ರದೇಶದವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News