ಫಲಿತಾಂಶ ಪ್ರಕಟ
Update: 2016-01-23 18:22 GMT
ಬೆಂಗಳೂರು, ಜ. 23: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಳೆದ ಅಕ್ಟೋಬರ್‌ನಲ್ಲಿ ನಡೆಸಿದ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ, ಪರೀಕ್ಷೆಗಳ ಫಲಿತಾಂಶವನ್ನು ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರಕಟಿಸಿದೆ.
ಅಲ್ಲದೆ ಮಂಡಳಿಯ ಅಂತರ್ಜಾಲ www.kseeb.kar.nic.in ನಲ್ಲಿಯೂ ಪ್ರಕಟಿಸಿದೆ. ಉತ್ತರ ಪತ್ರಿಕೆಯ ಛಾಯಾಪ್ರತಿ ಮತ್ತು ಅಂಕಗಳ ಎಣಿಕೆಗೆ ಅರ್ಜಿ ಸಲ್ಲಿಸಲು ಜ.31ಕೊನೆಯ ದಿನ.