ಮುಸ್ಲಿಮರಿಗೆ ಸ್ವಾತಂತ್ರ್ಯ ಇಷ್ಟವಿರಲಿಲ್ಲ : ಭೈರಪ್ಪ

Update: 2016-01-25 05:12 GMT

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದು ಮುಸ್ಲಿಮರಿಗೆ ಇಷ್ಟವಿರಲಿಲ್ಲ. ಹಿಂದೂಗಳಿಗಾಗಿ ನಾವೇಕೆ ಹೋರಾಡಬೇಕು ಎಂಬ ಧೋರಣೆಯಲ್ಲಿದ್ದ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿದ್ದರು ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದ್ದಾರೆ ಎಂದು ವಿಶ್ವವಾಣಿ ಪತ್ರಿಕೆ ವರದಿ ಮಾಡಿದೆ. 

ರಾಷ್ಟ್ರೋತ್ಥಾನ ಸಾಹಿತ್ಯ ಸಂಸ್ಥೆ ಎನ್.ಎಂ.ಕೆ.ಆರ್.ವಿ. ಕಾಲೇಜಿನಲ್ಲಿ ರವಿವಾರ ಆಯೋಜಿಸಿದ್ದ ಶತಾವಧಾನಿ ಡಾ. ಆರ್. ಗಣೇಶ್ ಅವರ ಭಾರತೀಯ ಕ್ಷಾತ್ರ ಪರಂಪರೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಬ್ರಿಟಿಷರು ದೇಶ ಆಳಲು ಮುಸ್ಲಿಂ- ಹಿಂದೂಗಳ ನಡುವೆ ಒಡಕು ತಂದಿದ್ದರು. ಆದರೆ ಈ ಒಡಕು ಮೊದಲಿನಿಂದಲೂ ಇತ್ತು. ದೇಶ ಬಿಟ್ಟು ಹೊರಡುವ ಸಂದರ್ಭದಲ್ಲಿ ಮುಸ್ಲಿಂ ನಾಯಕರೊಂದಿಗೆ ಚರ್ಚಿಸಿದ್ದ ಬ್ರಿಟಿಷರು ಹಿಂದೂಗಳಿಗಾಗಿ ಏಕೆ ಸ್ವಾತಂತ್ರ್ಯ ಪಡೆಯುತ್ತೀರಾ, ಅವರಿಗಾಗಿ ಏಕೆ ದುಡಿಯುತ್ತೀರಾ ಎಂದು ಪ್ರಶ್ನಿಸಿದ್ದರು. 

ಇದರಿಂದಾಗಿ ಸ್ವತಂತ್ರ ಭಾರತದ ಬಗ್ಗೆ ಮುಸ್ಲಿಮರಿಗೆ ನಂಬಿಕೆ ಹೊರಟುಹೋಗಿತ್ತು. ಸ್ವಾತಂತ್ರ್ಯ ನೀಡುವುದಾದರೆ ಪ್ರತ್ಯೇಕ ರಾಷ್ಟ್ರ  ನೀಡಿ ಎಂಬ ಬೇಡಿಕೆಯಿಟ್ಟಿದ್ದರು. ಹೀಗಾಗಿ ಪಾಕಿಸ್ತಾನ ನಿರ್ಮಾಣವಾಯಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News