ಮನುಷ್ಯನ ಮೂತ್ರ ಡೆಟಾಲ್‌ಗಿಂತ ಪರಿಣಾಮಕಾರಿ

Update: 2016-02-07 18:45 GMT

-ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಅಧ್ಯಕ್ಷ
    ಹಾಗೆಂದು ಅದರಲ್ಲಿ ನೀವು ಬಾಯಿ ಶುಚಿಗೊಳಿಸುವುದು ಎಷ್ಟು ಸರಿ?
---------------------
    ಹಿಂದೂ ಧರ್ಮ ರಕ್ಷಣೆಗಾಗಿ ಹಿಂಸೆಗೂ ಸಿದ್ಧರಿರಬೇಕು
- ಡಾ. ಎಂ. ಚಿದಾನಂದ ಮೂರ್ತಿ, ಸಂಶೋಧಕ
    
ನಿಮ್ಮ ಮಕ್ಕಳು, ಮೊಮ್ಮಕ್ಕಳು ಬೀದಿಗಿಳಿಯುವುದರಿಂದಲೇ ರಕ್ಷಣೆ ಆರಂಭವಾಗಲಿ.

---------------------

    ನನಗೆ ಹಿಂದೂ ಎನ್ನಲು ಭಯವಾಗುತ್ತಿದೆ
- ಅನುಪಮ್ ಖೇರ್, ಬಾಲಿವುಡ್ ನಟ
    
ಈ ನಟನೆಗೆ ನಿಮಗೆ ಆಸ್ಕರ್ ಪ್ರಶಸ್ತಿ ಖಚಿತ.

---------------------
     ಮಹಾತ್ಮಾ ಗಾಂಧಿ ಗುಂಡೇಟಿಗೆ ಬಲಿಯಾದಾಗ ದೇಶದ ಜನತೆ ತೋರಿದ ಶಾಂತಿ-ಸಹಿಷ್ಣುತೆ ಅಪರಿಮಿತವಾದದ್ದು
- ನರೇಂದ್ರ ಮೋದಿ, ಪ್ರಧಾನಿ
    
ಆರೆಸ್ಸೆಸ್‌ನ ಮೇಲೆ ಅಂದಿನ ಸರಕಾರ ತೋರಿಸಿದ ಸಹಿಷ್ಣುತೆಯೇ ಇಂದಿನ ಅಸಹಿಷ್ಣುತೆಗೆ ಕಾರಣ.

---------------------
    ರೋಹಿತ್ ವೇಮುಲಾ ದಲಿತನಲ್ಲ
- ಸುಷ್ಮಾ ಸ್ವರಾಜ್, ಕೇಂದ್ರ ಸಚಿವೆ
    
ಮೊದಲು ನೀವು ಮನುಷ್ಯರು ಎನ್ನುವುದನ್ನು ಸಾಬೀತು ಪಡಿಸಿ.

---------------------
    ನೀರಿನ ವಿಷಯದಲ್ಲಿ ರಾಜಕೀಯ ಸಲ್ಲದು
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
    
ರೈತರ ಕಣ್ಣೀರಿನ ವಿಷಯದಲ್ಲೂ ಒಂದಿಷ್ಟು ರಾಜಕೀಯ ಬಿಟ್ಟು ಮಾತನಾಡಿ.

---------------------
    ಮಹಾತ್ಮಾ ಗಾಂಧಿ ಹಂತಕ ಗೋಡ್ಸೆ ತಲೆತಿರುಕ
- ಉಮಾ ಭಾರತಿ, ಕೇಂದ್ರ ಸಚಿವೆ
    
ಆ ಕಾರಣಕ್ಕೇ ಇರಬೇಕು ಆತ ನಿಮ್ಮ ಪಕ್ಷಕ್ಕೆ ಮಹಾತ್ಮನಾಗಿರುವುದು.

---------------------
    ನನಗೆ ಮೋದಿ ಬಗ್ಗೆ ಅಪಾರ ವಿಶ್ವಾಸವಿದೆ
- ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ
    ಆ ವಿಶ್ವಾಸ ಅವರಿಗೂ ನಿಮ್ಮ ಬಗ್ಗೆ ಇರಬೇಕಲ್ಲ?
---------------------
    ಕಾಂಗ್ರೆಸ್ ಕೋಮುವಾದಿಗಳ ವಿರುದ್ಧದ ಹೋರಾಟದಲ್ಲಿ ಧೈರ್ಯ ತೋರುತ್ತಿಲ್ಲ.
-ಎ.ಕೆ. ಸುಬ್ಬಯ್ಯ, ಹಿರಿಯ ವಕೀಲ
    ಧೈರ್ಯವಿದ್ದವರು ಕಾಂಗ್ರೆಸ್‌ನಲ್ಲೇಕೆ ಇರುತ್ತಾರೆ?

    ರಾಜ್ಯದಲ್ಲಿ ಬಿಜೆಪಿಗೆ ಆರ್ಥಿಕ ಸಮಸ್ಯೆ ಇದೆ.
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅಧಿಕಾರಕ್ಕೇರಿಸಿದರೆ, ಆ ಸಮಸ್ಯೆಯನ್ನು ಸರಿಪಡಿಸುತ್ತೀರಿ ಅಂತಾಯಿತು.

---------------------
    ಪ್ರತಿಮೆಯೇ ದೇವರಲ್ಲ, ಪ್ರತಿಮೆಯೇ ಬೇರೆ, ದೇವರೇ ಬೇರೆ
- ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
    ಪ್ರತಿಮೆ ನಿಮ್ಮ ಲಾಭಕ್ಕಾಗಿ. ಅಲ್ಲವೇ?
---------------------
    2017ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಶಾಲಿಯಾಗಿ ಬಿಜೆಪಿ ಮೂಲೆ ಗುಂಪಾಗುತ್ತದೆ
- ಹಾರ್ದಿಕ್ ಪಟೇಲ್, ಮೀಸಲು ಹೋರಾಟಗಾರ
    
ಇಷ್ಟನ್ನು ಹೇಳಲು, ನೀವು ಜೈಲು ಸೇರಬೇಕಾಯಿತಲ್ಲ ಎನ್ನುವುದೇ ದುಃಖದ ವಿಷಯ.

---------------------
    ದಲಿತರ ಮೀಸಲು ರದ್ದಿಲ್ಲ
- ನರೇಂದ್ರ ಮೋದಿ, ಪ್ರಧಾನಿ
    
    ಅವರ ಮೀಸಲಾತಿ ರದ್ದು ಮಾಡುವುದಿಲ್ಲ. ಬದಲಿಗೆ ಮೇಲ್ಜಾತಿಯ ಎಲ್ಲರಿಗೂ ಮೀಸಲಾತಿ ನೀಡುವ ಉದ್ದೇಶ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮಾನಾಥ ರೈ ಕಲಿಯುಗದ ಕುಂಭಕರ್ಣರು
- ನಳೀನ್ ಕುಮಾರ್ ಕಟೀಲ್, ಸಂಸದ
    ಪ್ರಭಾಕರ ಭಟ್ಟರ ಆಸ್ಥಾನದಲ್ಲಿ ನರ್ತಿಸುವ ನಿಮ್ಮನ್ನು ಕಲಿಯುಗದ ಬೃಹನ್ನಳೆ ಎಂದು ಕೆಲವರು ಕರೆಯುತ್ತಿದ್ದಾರಲ್ಲ?
---------------------
    ಕನ್ನಡಕ್ಕೆ ಎಂದಿಗೂ ಅಳಿವಿಲ್ಲ
- ಡಾ. ಸಿದ್ದಲಿಂಗಯ್ಯ, ಹಿರಿಯ ಕವಿ
    
ಹೌದು. ಗ್ರಂಥಾಲಯಗಳ ಪುಸ್ತಕಗಳ ಒಳಗೆ ಭದ್ರವಾಗಿ ಇರುತ್ತದೆ.

---------------------
    ಝಮೀರ್ ಅಹ್ಮದ್ ಖಾನ್ ಜೆಡಿಎಸ್‌ನಲ್ಲಿದ್ದಾರೋ, ಕಾಂಗ್ರೆಸ್‌ನಲ್ಲಿದ್ದಾರೋ ಗೊತ್ತಾಗುತ್ತಿಲ್ಲ
- ದೇವೇಗೌಡ, ಮಾಜಿ ಪ್ರಧಾನಿ
    
ಸದ್ಯಕ್ಕೆ ಜೆಡಿಎಸ್ ಬಿಜೆಪಿಯೊಳಗಿದೆಯೋ, ಬಿಜೆಪಿ ಜೆಡಿಎಸ್‌ನೊಳಗಿದೆಯೋ ಎನ್ನುವುದನ್ನು ಹುಡುಕಿ ತೆಗೆಯಿರಿ.

---------------------
    ಜಗತ್ತೇ ಆರ್ಥಿಕ ಹಿಂಜರಿತದಲ್ಲಿದ್ದರೂ ಭಾರತ ಗಟ್ಟಿಯಾಗಿದೆ
- ಅರುಣ್ ಜೇಟ್ಲಿ, ಕೇಂದ್ರ ಸಚಿವ
    
ಅದೆಷ್ಟೋ ರಾಜಕಾರಣಿಗಳು ದೋಚಿದರೂ ಮುಗಿಯದ ಹಿರಿಮೆ ಭಾರತದ್ದು.

---------------------
    ವಿಮಾನ ಖರೀದಿಸುವ ಆಸೆ ಇದೆ. ಆದರೆ ನನ್ನಲ್ಲಿ ಅಷ್ಟು ಹಣ ಇಲ್ಲ
- ಶಾರೂಕ್ ಖಾನ್, ಬಾಲಿವುಡ್ ನಟ
    
ಒಂದು ಕೆಜಿ ಅಕ್ಕಿ ಖರೀದಿಸಲು ಹಣವಿಲ್ಲದವರನ್ನೊಮ್ಮೆ ನೆನೆದುಕೊಳ್ಳಿ.

---------------------
    ದಿಲ್ಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸಂಚು.
- ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
    
ಆ ಹೆಸರಿನಲ್ಲಿ ಮತ್ತೊಮ್ಮೆ ಸರಕಾರವನ್ನು ನೀವೇ ವಿಸರ್ಜಿಸಲು ಮುಂದಾಗಬೇಡಿ.

---------------------
    ಧರ್ಮ ಎಂದರೆ ಶುದ್ಧ ನೀರಿನಂತೆ.
- ಡಾ. ವೀರೇಂದ್ರ ಹೆಗಡೆ, ಧರ್ಮಾಧಿಕಾರಿ ಧರ್ಮಸ್ಥಳ
    -ಆ ನೀರನ್ನು ರಾಜಕಾರಣಿಗಳು ಕಲಕುವುದಕ್ಕೆ ಅವಕಾಶ ನೀಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!