ಬೇಕರಿ ತರಬೇತಿ

Update: 2016-02-08 18:24 GMT

ಬೆಂಗಳೂರು, ಫೆ. 8: ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಅಭ್ಯರ್ಥಿಯು ಕನಿಷ್ಠ ಎಸೆಸೆಲ್ಸಿ (ಹತ್ತನೆ ತರಗತಿ) ಉತ್ತೀರ್ಣರಾಗಿರಬೇಕು. ನಿಗದಿತ ಅರ್ಜಿ ಫಾರಂಗಳನ್ನು 10ರೂ.(ಹತ್ತು) ಸಂದಾಯಿಸಿ, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-24, ಇಲ್ಲಿಂದ ಪಡೆದು ಕೊಳ್ಳಬಹುದು. ಅರ್ಜಿಯನ್ನು ಪಡೆಯಲು ಹಾಗೂ ಭರ್ತಿಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಕೊನೆಯ ಫೆ.27ರ 12ಗಂಟೆಯ ಒಳಗೆ, ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿವಿ, ಹೆಬ್ಬಾಳ ಬೆಂಗಳೂರು-24 ಈ ವಿಳಾಸಕ್ಕೆ ತಲುಪಿಸಬೇಕು.

ಹೆಚ್ಚಿನ ವಿವರಗಳಿಗೆ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ ಇವರನ್ನು ಖುದ್ದಾಗಿ ಅಥವಾ ದೂ. ಸಂಖ್ಯೆ-080-2351 3370ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News