ಹಿರಿಯ ನಟಿ ಲೀಲಾವತಿ ಆರೋಗ್ಯಸುಧಾರಣೆ
Update: 2016-02-10 18:29 GMT
ಬೆಂಗಳೂರು, ಫೆ. 10: ಹಿರಿಯ ನಟಿ ಲೀಲಾವತಿ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಅವರು ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಲೀಲಾವತಿಯವರು ಇಂದು ಬೆಳಗ್ಗೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಬೆಂಗಳೂರಿನ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಲೀಲಾವತಿ, ಪುತ್ರ ವಿನೋದ್ ರಾಜ್ ಜೊತೆ ನೆಲೆಸಿದ್ದು, ಎರಡು ದಿನಗಳ ಹಿಂದೆ ಲೀಲಾವತಿ ಆಯತಪ್ಪಿಬಿದ್ದಿದ್ದರು. ಬಿದ್ದ ನೋವಿನ ಶಮನಕ್ಕಾಗಿ ಮನೆಯಲ್ಲೇ ಲೀಲಾವತಿಯವರು ಮಾತ್ರೆಯನ್ನು ಸೇವಿಸುತ್ತಿದ್ದರು. ಆದರೆ, ಈ ಮಾತ್ರೆ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.