ವಿಜಯಪುರ ಕಾಂಗ್ರೆಸ್ ಉಪಾಧ್ಯಕ್ಷ ವಾಲಿಕಾರ್ ವಿರುದ್ಧ ವಂಚನೆ ಆರೋಪ

Update: 2016-02-11 18:33 GMT
  • whatsapp icon

ಬೆಂಗಳೂರು, ಫೆ.11: ಮಾನವ ಹಕ್ಕು ಮಂಡಳಿ ಹೆಸರಿನಲ್ಲಿ ವಿಜಯಪುರದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಸೀಂ ಪೀರ್ ವಾಲಿಕಾರ್ ಅವರು ರೈತರಿಗೆ ಬೋರ್‌ವೆಲ್ ಕೊರೆಸಲು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 65 ಲಕ್ಷ ರೂ.ವನ್ನು ವಂಚಿಸಿದ್ದಾರೆ ಎಂದು ರಾಜ್ಯ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಎನ್.ಸುರೇಶ್ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಮುಧೋಳು ತಾಲೂಕಿನ ನಿವಾಸಿ ಸುನಂದಾ ಪೂಜಾರಿ ಎಂಬುವವರನ್ನು ಮಧ್ಯವರ್ತಿಯಾಗಿಸಿಕೊಂಡು ರೈತರು ಹಾಗೂ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಕೆಲಸ ಕೊಡಿಸದೆ ವಂಚಿಸಿದ್ದಾರೆಂದು ತಿಳಿಸಿದರು.

  ಮಾನವ ಹಕ್ಕು ಮಂಡಳಿಯ ಮುಧೋಳು ತಾಲೂಕಿನ ಅಧ್ಯಕ್ಷೆ ಸುನಂದಾ ಪೂಜಾರಿ ಮಾತನಾಡಿ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಸೀಂ ಪೀರ್ ವಾಲಿಕಾರ್ ಅವರು ನನ್ನ ಮೂಲಕ ರೈತರು ಹಾಗೂ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ.ವಸೂಲಿ ಮಾಡಿ ವಂಚಿಸಿದ್ದಾರೆ. ಈಗ ರೈತರು ಹಾಗೂ ವಿದ್ಯಾರ್ಥಿಗಳು ನನ್ನ ಬಳಿ ಹಣ ಕೇಳುತ್ತಿದ್ದಾರೆ. ಹಣ ವಾಪಾಸ್ ಕೊಡುವಂತೆ ವಾಲಿಕಾರ್‌ಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News