ಇಸ್ರೇಲ್: ಭಾರತ ಶಾಸ್ತ್ರಜ್ಞನಿಗೆ ಪ್ರತಿಷ್ಠಿತ ಪ್ರಶಸ್ತಿ

Update: 2016-02-15 15:01 GMT

ಜೆರುಸಲೇಂ, ಫೆ. 15: ಧರ್ಮ ಮತ್ತು ತತ್ವಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿನ ಮಹತ್ವದ ಅಧ್ಯಯನಕ್ಕಾಗಿ ಖ್ಯಾತ ಭಾರತ ಶಾಸ್ತ್ರಜ್ಞ ಪ್ರೊಫೆಸರ್ ಡೇವಿಡ್ ಶುಲ್ಮನ್‌ರಿಗೆ ಪ್ರತಿಷ್ಠಿತ ಇಸ್ರೇಲ್ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರೊಫೆಸರ್ ಶಾವುಲ್ ಶಕೀದ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯು ಪ್ರಶಸ್ತಿಗಾಗಿ ಶುಲ್ಮನ್‌ರನ್ನು ಶಿಫಾರಸು ಮಾಡಿತು ಹಾಗೂ ಶಿಕ್ಷಣ ಸಚಿವ ನಟ್ಫಾಲಿ ಬೆನೆಟ್ ಪ್ರಶಸ್ತಿ ವಿಜೇತರನ್ನು ಘೋಷಿಸಿದರು.

ಅದೇ ವೇಳೆ, ಎಡಪಂಥೀಯ ವಿಚಾರಧಾರೆಯ ಶುಲ್ಮನ್‌ರಿಗೆ ಪ್ರಶಸ್ತಿ ನೀಡಿರುವ ಬಗ್ಗೆ ಇಸ್ರೇಲ್‌ನ ಬಲಪಂಥೀಯ ಒಲವುಳ್ಳ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಶುಲ್ಮನ್ ‘‘ಓರ್ವ ಬುದ್ಧಿವಂತ ಸಂಶೋಧಕರಾಗಿದ್ದು ದಕ್ಷಿಣ ಭಾರತದ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮಹತ್ವದ ಸಂಶೋಧನೆಗಳನ್ನು ನಡೆಸಿದ್ದಾರೆ’’ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.

67 ವರ್ಷದ ಶುಲ್ಮನ್ ಎಡಪಂಥೀಯ ಸಂಘಟನೆ ‘ತಾಯುಶ್’ನಲ್ಲಿ ಸಕ್ರಿಯರಾಗಿದ್ದಾರೆ. ಇದು ದಕ್ಷಿಣ ಹೆಬ್ರಾನ್ ಹಿಲ್ಸ್‌ನಲ್ಲಿ ಸಕ್ರಿಯವಾಗಿರುವ ಜಂಟಿ ಇಸ್ರೇಲ್-ಫೆಲೆಸ್ತೀನಿ ಉಪಕ್ರಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News