ಕೊಲೆ ಪ್ರಕರಣ: ಎಂಟು ಆರೋಪಿಗಳ ಬಂಧನ

Update: 2016-02-16 18:29 GMT

ಬೆಂಗಳೂರು, ಫೆ.16: ಎರಡು ದಿನಗಳ ಹಿಂದೆ ಹಣದ ವಿಚಾರಕ್ಕಾಗಿ ಅಮ್ಜದ್(28) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆ.ಜೆ.ನಗರ ಠಾಣಾ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ಬಾಪೂಜಿ ನಗರದ ಮುಬಾರಕ್(19), ಜಯನಗರ 1ನೆ ಬ್ಲಾಕ್‌ನ ಪರ್ವಿಝ್‌ಬೇಗ್(22), ಜೆ.ಜೆ. ನಗರದ ಸಲೀಂ(24), ಶಬ್ಬೀರ್ ಪಾಷ(20) ಜಾವೀದ್(25) ಹಾಗೂ ಮಂಜುನಾಥ್‌ನಗರದ ಜುನೈದ್(26), ನಯೀ ಮುಲ್ಲಾಖಾನ್(22) ಮತ್ತು ವಾಲಿ ಯಾನೆ ಸ.ಆರೀಫ್(25) ಎಂದು ಗುರುತಿಸಲಾಗಿದೆ.

 ಫೆ.14 ರಂದು ಇಲ್ಲಿನ ಮೈಸೂರು ರಸ್ತೆಯ 2ನೆ ಕ್ರಾಸ್‌ನಲ್ಲಿ ಹಣದ ವಿಚಾರವಾಗಿ ಜಗಳ ತೆಗೆದು ಡ್ರಾಗರ್‌ನಿಂದ ಅಮ್ಜದ್ ಎಂಬವರ ಎದೆ ಮತ್ತು ಬೆನ್ನಿಗೆ ಇರಿದು ಬರ್ಬರ ಕೊಲೆಗೆ ಕಾರಣ ಈ ಎಂಟು ಆರೋಪಿಗಳೆ ಎಂದು ಪೊಲೀಸರು ಹೇಳಿದ್ದು, ಹೆಚ್ಚುವರಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News