ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯ ವಾಚು-ಕನ್ನಡಕ-ಕಾರು ಚರ್ಚೆ ಅನಗತ್ಯ

Update: 2016-02-21 17:30 GMT

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
    ಬಹುಶಃ ಇನ್ನು ನಿಮ್ಮ ವಾಚು, ಕಾರಿನ ಲೆಕ್ಕ ಹೊರಗೆ ಬರಬಹುದು ಎನ್ನುವ ಭಯವಿರಬೇಕು.
---------------------
    ಹಣಕಾಸು ಸಚಿವರಾಗಿದ್ದಾಗ ಮನಮೋಹನ್ ಸಿಂಗ್ ಅತ್ಯುತ್ತಮ ಕೆಲಸ ಮಾಡಿದ್ದರು
- ಅರುಣ್ ಜೇಟ್ಲಿ, ಕೇಂದ್ರ ಸಚಿವ
    
ಅವರೇ ನಿಮಗೆ ಮಾದರಿಯೆಂದು ಕಾಣುತ್ತಿದೆ.

---------------------
    ವಿಪಕ್ಷಗಳಿಂದ ಸಿಎಂ ಸಿದ್ದರಾಮಯ್ಯ ವರ್ಚಸ್ಸಿಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ
- ಯು.ಟಿ.ಖಾದರ್, ಸಚಿವ
    
ಪಕ್ಷದೊಳಗಿರುವವರು ಮಾಡಿದ ಕುಂದು ಧಾರಾಳ ಸಾಕು.

---------------------
    ದೇಶ ದ್ರೋಹಿಗಳ ಬೆಂಬಲಿಗರನ್ನು ಕೇಂದ್ರ ಸಹಿಸದು
- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
    
ದೇಶದ್ರೋಹಿಗಳನ್ನಷ್ಟೇ ಸಹಿಸುತ್ತೀರಿ ಎಂದಾಯಿತು.

---------------------
    ಮೊಯ್ಲಿ ನನ್ನ ಬಾಯಿಗೆ ಕೋಲು ಹಾಕುವುದು ಬೇಡ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
    
ನಮ್ಮಲ್ಲಿ ಕೋಲು ಹಾಕುವುದು, ಚರಂಡಿ ಬ್ಲಾಕ್ ಆದಾಗ ಮಾತ್ರ.

---------------------
    ದೇಶದ ಆರ್ಥಿಕತೆ ಸುಭದ್ರ
- ನರೇಂದ್ರ ಮೋದಿ, ಪ್ರಧಾನಿ
    
ಅದಾನಿ, ಅಂಬಾನಿ ಕೈಯಲ್ಲಿ ಸುಭದ್ರವಾಗಿದೆ ಎನ್ನುವುದು ಗೊತ್ತು.

---------------------
    ದೋಸೆಯ ಬೆಲೆ ಇಳಿಯದಿರಲು ಕಾವಲಿ ಕಾರಣ
- ರಘುರಾಮ್ ರಾಜನ್, ಆರ್‌ಬಿಐ ಗವರ್ನರ್
    
ಕಾವಲಿಯಿಲ್ಲದೆ ಬರೇ ಒಲೆಯ ಮೇಲೆ ದೋಸೆ ಉಯ್ಯುವುದನ್ನು ಕಲಿಸಲಿದ್ದಾರಂತೆ ಮೋದಿ.

---------------------
    ಬಿಜೆಪಿ ಹಾಗೂ ಕಾಂಗ್ರೆಸ್ ಸಂಸ್ಕೃತಿಗೆ ವ್ಯತ್ಯಾಸವಿದೆ
- ಡಾ.ವೀರಪ್ಪ ಮೊಯ್ಲಿ, ಸಂಸದ
    
ಅವರದು ಚಡ್ಡಿ, ನಿಮ್ಮದು ಟೋಪಿ.

---------------------
    ಸಿದ್ದರಾಮಯ್ಯ ವಾಚ್ ಪ್ರಕರಣ ಸಂಸತ್ತಿನಲ್ಲಿ ಪ್ರಶ್ನಿಸುವೆ
- ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ
    
ನಿಮ್ಮ ಸೊಂಟದ ಉಡುದಾರ ಎಷ್ಟು ತೂಕ ಚಿನ್ನದ್ದು ಎನ್ನುವ ವಿವರ ಶೀಘ್ರ ಹೊರ ಬೀಳಲಿದೆಯಂತೆ.

---------------------
    ಗೋಮಾಂಸ ಭಕ್ಷಕರ ಕೊಲೆ ಘೋರ ಅಪರಾಧ
- ತಸ್ಲೀಮಾ ನಸ್ರೀನ್, ವಿವಾದಿತ ಬಾಂಗ್ಲಾ ಲೇಖಕಿ
    ಕೊಲೆ ಅಪರಾಧ ಎಂದರೆ ಸಾಕಾಗುವುದಿಲ್ಲವೇ?
---------------------
    ವಾಕ್ ಸ್ವಾತಂತ್ರ ಸ್ವೇಚ್ಛಾಚಾರವಾಗಬಾರದು
- ಅನುಪಮ್ ಖೇರ್, ಬಾಲಿವುಡ್ ನಟ
    
ತಸ್ಲೀಮಾ ನಸ್ರೀನ್ ಅವರು ಅಸಹಿಷ್ಣುತೆ ಎಂದು ಬೆವರು ಒರೆಸಿಕೊಂಡರಂತೆ.

---------------------
    ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಇಟ್ಟುಕೊಳ್ಳುವುದು ತಪ್ಪಲ್ಲ
- ಝಮೀರ್ ಅಹ್ಮದ್, ಜೆಡಿಎಸ್ ಶಾಸಕ
    ಸಿದ್ದರಾಮಯ್ಯ ಅವರಿಗೆ ನಿಮ್ಮನ್ನು ಪ್ರೀತಿಯಿಂದ ದೇವೇಗೌಡರು ಉಡುಗೊರೆಯಾಗಿ ಕೊಟ್ಟಿದ್ದಾರಂತೆ ಹೌದೇ?
---------------------
    
ನನ್ನನ್ನು ಉರುಳಿಸುವ ಶಕ್ತಿ ಯಾರಿಗೂ ಇಲ್ಲ - ಅಂಬರೀಷ್, ಸಚಿವ
    
ಬಹುಶಃ ರಾತ್ರಿ ನೀವು ತೆಗೆದುಕೊಳ್ಳುವ ಎಣ್ಣೆಗೆ ಮಾತ್ರ ಆ ಶಕ್ತಿ ಇದೆ ಎಂದು ಕಾಣುತ್ತದೆ.

---------------------
    ವ್ಯಕ್ತಿತ್ವಕ್ಕೆ ಹಾನಿಯಾದರೆ ಅದನ್ನು ಸರಿಪಡಿಸುವುದು ಕಷ್ಟ
- ಸಿ.ಟಿ.ರವಿ, ಶಾಸಕ
    

    ವ್ಯಕ್ತಿತ್ವವೇ ಇಲ್ಲದ ನಿಮ್ಮಂಥವರಿಗೆ ಆ ಸಮಸ್ಯೆ ಇಲ್ಲ.

.............................

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ
- ಡಾ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
    
ಸಿದ್ದರಾಮಯ್ಯ ಎಂಬ ಬೆಕ್ಕಿಗೆ ಕಾಂಗ್ರೆಸ್‌ನೊಳಗಿನ ಇಲಿಗಳು ಸೇರಿ ಕಟ್ಟಿದ ಗಂಟೆಯಂತೆ ಅದು.

---------------------
    ಉಪಚುನಾವಣೆಯಲ್ಲಿ ನಾವು ಸೋತೂ ಇಲ್ಲ, ಗೆದ್ದೂ ಇಲ್ಲ
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
    
ಸೋಲು ಯಾವತ್ತಿದ್ದರೂ ಮತದಾರರದ್ದೇ ಬಿಡಿ.

---------------------
    ವಿವಿ ಕ್ಯಾಂಪಸ್‌ಗಳಲ್ಲಿ ರಾಜಕೀಯಕ್ಕೆ ಅವಕಾಶ ಬೇಡ
- ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
    ಬರೇ ಎಬಿವಿಪಿಗಷ್ಟೇ ಅವಕಾಶ ಕೊಡಿ ಎಂಬ ಮನವಿಯೇ?
---------------------
    ಸಿದ್ದರಾಮಯ್ಯ ಮೋದಿಯ ಆಡಳಿತ ನೋಡಿ ಕಲಿಯಬೇಕು
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
    ಮೋದಿಯನ್ನು ಹೀಗೂ ವ್ಯಂಗ್ಯ ಮಾಡುವುದೇ?
---------------------
    ಆತ್ಮಹತ್ಯೆ ಮಾಡಿಕೊಳ್ಳುವುದು ಒಂದು ಫ್ಯಾಶನ್ ಆಗಿದೆ
- ಗೋಪಾಲ ಶೆಟ್ಟಿ, ಬಿಜೆಪಿ ಸಂಸದ
    ನಿಮ್ಮಂಥವರನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ ಬೇರೆ ಆಯ್ಕೆಯಾದರೂ ಏನಿದೆ?
---------------------
    ದೇಶ ಪ್ರೇಮ ನನ್ನ ರಕ್ತದಲ್ಲಿದೆ
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
    
ಬಿಜೆಪಿಯವರು ನಿಮ್ಮ ರಕ್ತಕ್ಕಾಗಿ ಹೊಂಚಿ ಹಾಕಿ ಕೂತಿದ್ದಾರೆ.

---------------------
    ನರೇಂದ್ರ ಮೋದಿ ಈ ದೇಶದ ಪ್ರಧಾನಿ ಎಂದು ಅನಿಸುತ್ತಿಲ್ಲ
- ರಾಜ್ ಠಾಕ್ರೆ, ಮ.ನ.ನಿ.ವೇ. ಮುಖ್ಯಸ್ಥ
    ಅನಿಲ್ ಅಂಬಾನಿಯೇ ನಿಜವಾದ ಪ್ರಧಾನಿಯಾಗಿರಬಹುದೇ?
---------------------
    ಬಿಜೆಪಿ ಯಾವತ್ತೂ ಅರಣ್ಯ ವಾಸಿಗಳ ಪರ
- ಸುನೀಲ್ ಕುಮಾರ್, ವಿಪಕ್ಷ ಮುಖ್ಯ ಸಚೇತಕ
    ಅಂದರೆ ಹುಲಿ, ಚಿರತೆ, ತೋಳಗಳ ಬಗ್ಗೆ ಹೇಳುತ್ತಿದ್ದೀರಾ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!