ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಆರೋಪಿಯನ್ನು ಬೆನ್ನಟ್ಟಿ ಹಿಡಿದ ಯುವಕರು

Update: 2016-02-21 18:46 GMT

ಬೆಂಗಳೂರು, ಫೆ.21: ಮಹಿಳೆ ಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಇಬ್ಬರು ಯುವಕರು ಬೆನ್ನಟ್ಟಿ ಹಿಡಿದು ಕೆ.ಆರ್.ಪುರ ಪೊಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ವರದಿಯಾಗಿದೆ.

ನಿವೃತ್ತ ಎಎಸ್‌ಐ ಅಂತೋಣಿ ಜೋಸೆಫ್ ಅವರ ಪತ್ನಿ ಹೃದಯರಾಣಿ(55) ತಂಭುಚೆಟ್ಟಿಪಾಳ್ಯದಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಯು ಅವರ ಕತ್ತಿನಲ್ಲಿದ್ದ 52 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯನ್ನು ಗಮನಿಸಿದ ವಿಬಿನ್ ರಿಚರ್ಡ್ ಹಾಗೂ ಸುಪ್ರಿತ್ ಎಂಬ ಯುವಕರು ಆರೋಪಿಯನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಸುಮಾರು 4 ಕಿ.ಮೀ ಬೆನ್ನಟ್ಟಿಕೊಂಡು ಹೋಗಿ ಹಿಡಿಯುವಲ್ಲಿ ಯಶಸ್ವಿಯಾದರು. ಅಲ್ಲದೆ, ಆತನನ್ನು ಕೆ.ಆರ್.ಪುರ ಠಾಣಾ ಪೊಲೀಸರಿಗೆ ಒಪ್ಪಿಸಿದರು.
ವಿಬಿನ್ ರಿಚರ್ಡ್ ಹಾಗೂ ಸುಪ್ರಿತ್ ಅವರ ಸಾಹಸಕ್ಕೆ ಕೆ.ಆರ್.ಪುರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವರಾಯಪ್ಪ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News