ಮಠಾಧೀಶರು ಸಮಾಜ ಒಂದುಗೂಡಿಸಲು ಯತ್ನಿಸಿದರೆ ರಾಜಕಾರಣಿಗಳು ಛಿದ್ರಗೊಳಿಸುತ್ತಿದ್ದಾರೆ.

Update: 2016-02-28 17:49 GMT



                                             -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
    
ರಾಜಕಾರಣಿಗಳು ಛಿದ್ರಗೊಳಿಸುತ್ತಿರುವುದರಿಂದಲೇ, ಮಠಾಧೀಶರಿಗೆ ಒಂದುಗೂಡಿಸುವ ಕೆಲಸ ಸಿಕ್ಕಿರುವುದು. ಇಲ್ಲವಾದರೆ ಅವರು ನಿರುದ್ಯೋಗಿಗಳಾಗಿರಬೇಕಾಗಿತ್ತು.

---------------------
     ವಾಚು ಪ್ರಕರಣ ನಾಯಕತ್ವ ಬದಲಿಸುತ್ತೆ ಎಂಬುದು ಭ್ರಮೆ
                                                        -ಸಿದ್ದರಾಮಯ್ಯ, ಮುಖ್ಯಮಂತ್ರಿ
    ವಾಚು ಕೈ ಬದಲಿಸುವುದಂತೂ ಖಂಡಿತ.
---------------------
     
        ಕನ್ನಡದ ಕೆಲಸ ಸರಿಯಾಗಿ ಆಗುತ್ತಿಲ್ಲ. -ಡಾ. ಎಂ. ವೀರಪ್ಪ ಮೊಯ್ಲಿ, ಸಂಸದ
    ಅದಕ್ಕೇ ಕನ್ನಡದಲ್ಲಿ ಕಲಿತವರಿಗೆ ಕೆಲಸ ಕೊಡುವುದಿಲ್ಲ.
---------------------
     ಮನೆಯ ಬೆಕ್ಕನ್ನು ಹೇಗೆ ದೂರ ಮಾಡಲಾಗುವುದಿಲ್ಲವೋ, ಹಾಗೆಯೇ ನಮ್ಮ ಸಂಪ್ರದಾಯಗಳನ್ನು ದೂರ ಮಾಡಲಾಗುವುದಿಲ್ಲ
                       -ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
    
ಮನೆಯ ಬೆಕ್ಕು ಕಳ್ಳ ಬೆಕ್ಕಾದರೆ ಕಷ್ಟ.

---------------------
                             
                                                             ಚಾ ಮಾರುವವನೊಬ್ಬ ಪ್ರಧಾನಿಯಾಗಿರುವುದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. -ನರೇಂದ್ರ ಮೋದಿ, ಪ್ರಧಾನಿ
    ಚಾ ಮಾರಿದಂತೆ ದೇಶವನ್ನೂ ಮಾರಿದರೆ ಸಹಿಸುವುದಾದರೂ ಹೇಗೆ?
---------------------
     ದಲಿತರು ಮೀಸಲಾತಿಯಿಂದ ಹೊರಬರಬೇಕು
                                                          -ಸತೀಶ್ ಜಾರಕಿಹೊಳಿ, ಸಚಿವ
    
ಮೊದಲು ಅವರನ್ನು ಶೋಷಣೆಯಿಂದ ಹೊರತನ್ನಿ.

---------------------
     ಭಾರತ ನೇಪಾಳದ ಹಿರಿಯಣ್ಣ, ದೊಡ್ಡಣ್ಣನಲ್ಲ
                                                         -ಸುಷ್ಮಾ ಸ್ವರಾಜ್, ಕೇಂದ್ರ ಸಚಿೆ
    ಹಿರಿಯಕ್ಕ, ದೊಡ್ಡಕ್ಕ ಎಂದು ಕರೆಯಬೇಕೇ?
---------------------
     ಪುಂಡರನ್ನು ನಿಯಂತ್ರಿಸಲು ದೇಶದ್ರೋಹ ಕಾನೂನೇ ಬೇಕು
                                  -ನ್ಯಾ. ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ
    ಆದರೆ ಅದೀಗ ಬಳಕೆಯಾಗುತ್ತಿರುವುದು ಅಮಾಯಕ ವಿದ್ಯಾರ್ಥಿಗಳ ಮೇಲೆ.
---------------------
     ನನ್ನನ್ನು ಮುಗಿಸಲು ಕೆಲವು ಶಕ್ತಿಗಳು ಸಂಚು ನಡೆಸುತ್ತಿವೆ.
                                                             -ನರೇಂದ್ರ ಮೋದಿ, ಪ್ರಧಾನಿ
    
ಹಾಗೆಂದು ನೀವು ಅಡ್ವಾಣಿಯ ಕಡೆಗೆ ವಾರೆ ನೋಟ ಬೀರಿದ್ದು ಸರಿಯಲ್ಲ

 ---------------------
     ಮೀಸಲಿಗೆ ಅರ್ಹತೆಯನ್ನು ನಿರ್ಧರಿಸಲು ರಾಜಕೀಯೇತರ ಸಂಸ್ಥೆಯೊಂದನ್ನು ರಚಿಸಬೇಕು
                                         -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
    ಆರೆಸ್ಸೆಸ್ ರಾಜಕೀಯೇತರ ಸಂಸ್ಥೆ ಎಂದು ಈಗಾಗಲೇ ಘೋಷಿಸಿದ್ದೀರಿ ಅಲ್ಲವೇ?
---------------------
     ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ.
                                                -ಕೃಷ್ಣ ಜೆ. ಪಾಲೆಮಾರ್, ಮಾಜಿ ಸಚಿವ
    
 ಬ್ಲೂಫಿಲಂಗಳು ಮತ್ತೆ ಸದನದೊಳಗೆ ಪ್ರವೇಶಿಸಲಿದೆ ಎಂದಾಯಿತು.

---------------------
     ತಾಪಂ-ಜಿಪಂ ಚುನಾವಣಾ ಫಲಿತಾಂಶದಿಂದ ಬೇಸರವಾಗಿಲ್ಲ
                                             -ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
    

     ಅಭ್ಯಾಸವಾಗಿದೆ ಎಂದು ಕಾಣುತ್ತದೆ.

...........................

ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು.
                                       -ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
    
ಅದನ್ನು ದಮನಿಸುವುದು ನನ್ನ ಹಕ್ಕು ಎನ್ನುತ್ತಿದ್ದಾರೆ ಮೋದಿ.

---------------------
     ಭಾರತವು ಭಯೋತ್ಪಾದಕರ ಸಣ್ಣ ಗೂಡಿನ ಮಧ್ಯೆ ಸಿಲುಕಿಗೊಂಡಿದೆ.
-ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
    
ಸದ್ಯಕ್ಕೆ ಭಯೋತ್ಪಾದಕರೇ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆಯೇ ಎನ್ನುವ ಶಂಕೆ ಜನರದು

. ---------------------
     ನಿಮಗೆ (ವಿಪಕ್ಷ) ಸವಾಲು ಹಾಕುತ್ತೇನೆ. ನನ್ನ ಜಾತಿ ಯಾವುದು ಹೇಳಿ?
-ಸ್ಮತಿ ಇರಾನಿ, ಕೇಂದ್ರ ಸಚಿವೆ
    ಇದೇ ಪ್ರಶ್ನೆಯನ್ನು ಕೆಳಜಾತಿಯ ಜನರು ಹೆಮ್ಮೆಯಿಂದ ಕೇಳಲಾರರು.
---------------------
     ಕೆಲವು ಸಚಿವರನ್ನು ಬದಲಿಸದಿದ್ದರೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ.
-ಎಚ್. ವಿಶ್ವನಾಥ್, ಕಾಂಗ್ರೆಸ್ ಮುಖಂಡ
    ಕಾಂಗ್ರೆಸ್‌ನ್ನು ಬದಲಿಸದೇ ಇದ್ದರೆ ಜನರಿಗೆ ಭವಿಷ್ಯವಿಲ್ಲ.
---------------------
     ನನ್ನ ಕಂಡರೆ ಸರಕಾರಕ್ಕೆ ಭಯ
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
    
ಕಾಂಗ್ರೆಸ್‌ಗೂ ಕೂಡ.

---------------------
     ಸಿನೆಮಾ ಬೇರೆ ಪರ್ಸನಲ್ ಲೈಫ್ ಬೇರೆ.
-ಶಿವರಾಜ್ ಕುಮಾರ್, ಚಿತ್ರನಟ
    
ಹೌದು. ಕಳೆದ ಚುನಾವಣೆಯಲ್ಲಿ ಅದು ಸಾಬೀತಾಯಿತು.

---------------------
     ಸಂಸ್ಕೃತ ಭಾಷೆ ಉಳಿದರೆ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿಯುತ್ತದೆ.
-ವಜುಭಾಯಿ ವಾಲಾ, ರಾಜ್ಯಪಾಲ
    ಸಂಸ್ಕೃತ ಸತ್ತ ಭಾಷೆ ಎಂದು ಹೇಳುತ್ತಾರಲ್ಲ!
---------------------

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!