ಮೆಲ್ಕಾರ್: ಜುಗಾರಿ ಅಡ್ಡೆಗೆ ದಾಳಿ
ಬಂಟ್ವಾಳ, ಫೆ. 29: ತಾಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರಿಕ್ರಿಯೇಶನ್ ಕ್ಲಬ್‌ಗೆ ಎಎಸ್ಪಿ ಲಕ್ಷ್ಮಣ ನಿಂಬರ್ಗಿ ಮತ್ತು ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ 14 ಮಂದಿಯನ್ನು ಬಂಧಿಸಿ, 91,720 ರೂ. ನಗದು ವಶಪಡಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಶಿವಪ್ರಸಾದ್, ಹಂಝ, ಶ್ರೀನಿವಾಸ, ಮುಹಮ್ಮದ್ ಕುಂಞಿ, ಅಬ್ದುಲ್ ಖಾದರ್, ರಾಜೇಶ್, ಸುಲೈಮಾನ್, ಗೋಪಾಲಕೃಷ್ಣ, ಅಬ್ದುರ್ರಹ್ಮಾನ್, ಶಂಸುದ್ದೀನ್, ಜಾನ್ ಸಲ್ಡಾನ್ಹ, ಮುಹಮ್ಮದ್ ಅನ್ಸಾರ್, ಅಬ್ದುಲ್ ಅಝೀಝ್, ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ಆಟಕ್ಕೆ ಬಳಸಿದ್ದ ಇಸ್ಪೀಟು ಕಾರ್ಡ್ ಸಹಿತ 60 ಸಾವಿರ ರೂ. ಮೌಲ್ಯದ 18 ಮೊಬೈಲ್, 6 ಲಕ್ಷ ರೂ. ಮೌಲ್ಯದ ಮಾರುತಿ ಶಿಫ್ಟ್ ಕಾರು, ಟೇಬಲ್ ಮತ್ತು ಕುರ್ಚಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಠಾಣೆ ಕ್ರೈಂ ಎಸ್ಸೈ ಗಂಗಾಧರಪ್ಪತಿಳಿಸಿದ್ದಾರೆ.