ಲೈಂಗಿಕ ಕಿರುಕುಳ ಪ್ರಕರಣ, ನಿತ್ಯಾನಂದ ಸ್ವಾಮಿ ವಿಚಾರಣೆ ಮುಂದೂಡಿಕೆ
Update: 2016-03-01 18:14 GMT
ರಾಮನಗರ, ಮಾ.1: ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಆರೋಪದ ವಿಚಾರಣೆಯನ್ನು ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.31ಕ್ಕೆ ಮುಂದೂಡಿದೆ.
ವಿವಾದಿತ ನಿತ್ಯಾನಂದ ಸ್ವಾಮಿ, ಇತರ ಆರೋಪಿಗಳಾದ ಶಿವವಲ್ಲಭನೇನಿ, ಧನಶೇಖರನ್, ಗೋಪಾಲ ಶೀಲಂ ರೆಡ್ಡಿ, ಜಮುನಾ ರಾಣಿ, ರಾಗಿಣಿ ನ್ಯಾಯಾಲಯದಲ್ಲಿ ಹಾಜರಿದ್ದರು.