ಟಿಪ್ಪು ಜಯಂತಿ ವಿವಾದ

Update: 2016-03-04 13:23 GMT

ಬೆಂಗಳೂರು.ಮಾ.4:ಟಿಪ್ಪು ಜಯಂತಿ ವಿವಾದ ವಿಧಾನಸಭೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾಪಿಸಿದರು. ಟಿಪ್ಪು ಜಯಂತಿ ಹೆಸರಲ್ಲಿ ಸರ್ಕಾರ ಕೋಮುಭಾವನೆ ಕೆರಳಿಸುತ್ತಿದೆ. ಆಡಳಿತದಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರು ದೇಶಭಕ್ತನ ಸಂಸ್ಮರಣೆ ಮಾಡಿದರೂ ತಪ್ಪು ಕಂಡು ಹಿಡಿಯುತ್ತಾರೆ ಎಂದರು. ಅದಕ್ಕೆ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಕೊಡವರು ಎಂದೂ ಟಿಪ್ಪುವನ್ನು ದೇಶಭಕ್ತ ಅಂತಾ ಒಪ್ಪೋದಿಲ್ಲ. ಕೊಡಗಿನಲ್ಲಿ ಟಿಪ್ಪು 85 ಸಾವಿರ ಜನರನ್ನು ಕೊಂದಿದ್ದಾನೆ. 300 ದೇವಾಲಯಗಳನ್ನು ನಾಶ ಮಾಡಿದ್ದಾನೆ ಎಂದರು.  ಬೋಪಯ್ಯ ಹೇಳಿಕೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಜಾಜ್ ಮತ್ತು ಬೋಪಯ್ಯ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ನೀವು ಗೃಹ ಸಚಿವರಾಗಿ ಏನು ಮಾಡಿದ್ರಿ ಎನ್ನುವುದು ಗೊತ್ತಿದೆ ಎಂದು ಬೋಪಯ್ಯ ಮೂದಲಿಸಿದರು. ಇದಕ್ಕೆ ತೀಕ್ಷ್ಣ ಪ್ರತ್ಯುತ್ತರ ಕೊಟ್ಟ ಜಾರ್ಜ್ ನೀವು ಸ್ಪೀಕರ್ ಆಗಿ ಏನು ಮಾಡಿದ್ರಿ ನನಗೂ ಗೊತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News