ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ
Update: 2016-03-08 18:31 GMT
ಬೆಂಗಳೂರು, ಮಾ.8: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಧರ್ಮಪುರಿ ಜಿಲ್ಲೆಯ ಬೆಳಪಟ್ಟಿ ಗ್ರಾಮ ನಿವಾಸಿ ಶಿವಕುಮಾರ್(45), ನಗರದ ಅಡಿಗಾರ ಹಲ್ಲಹಳ್ಳಿ ನಿವಾಸಿ ಅಫ್ರೋಝ್ ಖಾನ್ ಯಾನೆ ಅಮೀರ್ ಖಾನ್ (36) ಎಂದು ಪೊಲೀಸರು ಗುರುತಿಸಿದ್ದಾರೆ.
ಇಲ್ಲಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿ ಗಾರ್ವೆಬಾವಿ ಪಾಳ್ಯದ ಹೊನ್ನಸಂದ್ರ ಬಳಿಯಲ್ಲಿನ ಖಾಲಿ ನಿವೇಶನದಲ್ಲಿ ಆರೋಪಿಗಳಿಬ್ಬರು ಅಕ್ರಮ ಗಾಂಜಾು ಮಾರಾಟಕ್ಕಾಗಿ ಗ್ರಾಹಕರನ್ನು ಕಾಯುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ 2 ಲಕ್ಷ ರೂ. ವೌಲ್ಯದ 15 ಕೆ.ಜಿ. 200 ಗ್ರಾಂ ನಷ್ಟು ಗಾಂಜಾ, ಮೂರು ಮೊಬೈಲ್ ಹಾಗೂ ದ್ವಿಚಕ್ರ ವಾಹನವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.