ನಕಲಿ ನೋಟು ಮಾರಾಟ ಮಾಡಲೆತ್ನಿಸಿದ ಗ್ಯಾಂಬಿಯಾ ಪ್ರಜೆ ಬಂಧನ

Update: 2016-03-09 09:43 GMT

ಬೆಂಗಳೂರು :ನಗರದ ಹೊರವಲಯದ ಭಟ್ಟರಹಳ್ಳಿಯಲ್ಲಿನಕಲಿ ನೋಟುಗಳನ್ನು ಮಾರಾಟ ಮಾಡಲು ಯತ್ನಿಸಿದ ಗ್ಯಾಂಬಿಯಾ ದೇಶದ ಪ್ರಜೆಯೊಬ್ಬನನ್ನು ಬೆಂಗಳೂರುಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಜೇಡಂ ಅಲಗೈ(45) ಎಂದು ಗುರುತಿಸಲಾಗಿದ್ದು ಆತರೂ. 500 ಹಾಗೂ ರೂ. 1000 ಮುಖಬೆಲೆಯ ಕರೆನ್ಸಿ ನೋಟುಗಳ ಫೊಟೋಕಾಪಿಗಳನ್ನು ಸೂಟ್‌ಕೇಸೊಂದರಲ್ಲಿ ತುಂಬಿಕೊಂಡು ಮಂಗಳವಾರ ಸಂಜೆ ಭಟ್ಟರಹಳ್ಳಿಗೆ ಆಗಮಿಸಿದ್ದು ತಾನೋರ್ವ ಆಫ್ರಿಕಾದ ವ್ಯಾಪಾರಿಯೆಂದು ತನ್ನನ್ನು ಅಲ್ಲಿನ ಜನರಿಗೆ ಪರಿಚಯಿಸಿದ್ದ. ಸ್ಥಳೀಯ ಅಂಗಡಿಗೆ ನಂತರ ಭೇಟಿಕೊಟ್ಟ ಆತ ಅಂಗಡಿ ಮಾಲಿಕನಲ್ಲಿ ತನ್ನ ಬಳಿ ರೂ 10 ಕೋಟಿ ಕಪ್ಪು ಹಣವಿದೆಯೆಂದೂ ಅದನ್ನು ಏನುಮಾಡುವುದೆಂದು ತಿಳಿಯದಾಗಿದೆಯೆಂದು ಹೇಳಿದ್ದ. ತನ್ನ ಸೂಟ್‌ಕೇಸಿನಲ್ಲಿದ್ದ ಕಲರ್ ಫೊಟೋಕಾಪಿ ನೋಟುಗಳನ್ನು ಅಂಗಡಿಯಾತನಿಗೆ ತೋರಿಸಿದ ಆತ ರೂ 10 ಲಕ್ಷ ಕೊಟ್ಟರೆ ಅವನ್ನು ಕೊಡುವುದಾಗಿ ಅಂಗಡಿಯಾತನನ್ನು ನಂಬಿಸಿದ.
ಈ ವಿದೇಶೀಯನ ನಡವಳಿಕೆಯಿಂದ ಸಂಶಯಗೊಂಡ ಅಂಗಡಿಯಾತ ಆತನನ್ನು ಸ್ವಲ್ಪ ಹೊತ್ತು ಕೂರಿಸಿ ಉಪಾಯದಿಂದ ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ಮಾರುವೇಷದಲ್ಲಿ ಸ್ಥಳಕ್ಕೆ ಆಗಮಿಸಿ ಆತನ ಬಲೆಗೆ ಬಿದ್ದವರಂತೆ ನಾಟಕವಾಡಿ ನಂತರ ಆತನನ್ನು ಬಂಧಿಸಿದರು.
ವಿದ್ಯಾರ್ಥಿ ವೀಸಾ ಪಡೆದು ಆರು ತಿಂಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಅಲಗೈ ಹಲವಾರು ಮಂದಿಯನ್ನು ಹಿಂದೆಯೂ ವಂಚಿಸಿದ್ದನೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News