ಪ್ರವೇಶ ಪತ್ರ
Update: 2016-03-19 18:20 GMT
ಬೆಂಗಳೂರು, ಮಾ. 19: ಕರ್ನಾಟಕ ಮುಕ್ತ ಶಾಲೆ (ಕೆಒಎಸ್) ಪರೀಕ್ಷೆ ಮಾ.30ರಿಂದ ಎಪ್ರಿಲ್ 9ರ ವರೆಗೆ ನಡೆಯಲಿದ್ದು, ಪ್ರವೇಶ ಪತ್ರಗಳನ್ನು ರಾಜ್ಯದ ಎಲ್ಲ ಕಲಿಕಾ ಕೇಂದ್ರಗಳಿಗೆ ಜಿಲ್ಲಾ ಡಯಟ್ ಪ್ರಾಂಶುಪಾಲರ ಮುಖಾಂತರ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಸಂಬಂಧಿಸಿದ ಕರ್ನಾಟಕ ಮುಕ್ತ ಶಾಲಾ ಕಲಿಕಾ ಕೇಂದ್ರಗಳಿಂದ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳುವಂತೆ, ನಿರ್ದೇಶಕರು (ಇತರೆ ಪರೀಕ್ಷೆಗಳು) ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟನೆ ತಿಳಿಸಿದೆ.