ಎ.6ರಿಂದ ಕಥಕ್ ನೃತ್ಯ

Update: 2016-03-22 18:15 GMT

ಬೆಂಗಳೂರು, ಮಾ.22: ನವದುರ್ಗ ಟ್ರಸ್ಟ್ ಫಾರ್ ಇಂಡಾಲಜಿ ಸ್ಟಡೀಸ್ ಅಂಡ್ ರೀಸರ್ಚ್ ವತಿಯಿಂದ ಎ.6 ಮ್ತು 7 ರಂದು ಕಥಕ್‌ನೃತ್ಯವನ್ನು ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥೆ ಬಿ.ಆರ್.ಭಾರತಿ, ಕಾರ್ಯಕ್ರಮವು ಎ.6 ರಂದು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಮತ್ತು 6 ಮತ್ತು 7 ರಂದು ದಯಾನಂದ ಸಾಗರ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಒಂದೇ ಸೂರಿನಡಿ ಸಮಗ್ರ ಭಾರತವನ್ನು ಕಟ್ಟಿಕೊಡುವ ಪ್ರಯತ್ನದಿಂದಾಗಿ ‘ಇಂಡಿಯಾಲಜಿಕಲ್ ಮ್ಯೂಸಿಯಂ’ನ್ನು ರೂಪಿಸಲಾಗಿದೆ. ಇದಕ್ಕಾಗಿ ದೇಣಿಗೆಯನ್ನು ಸಂಗ್ರಹಿಸುವ ಉದ್ದೇಶದಿಂದ ಖ್ಯಾತ ಕಲಾವಿದೆ ನಿರುಪಮಾ ರಾಜೇಂದ್ರ ತಂಡದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News