ನಾಳೆ ‘ಟೇಕಿಂಗ್ ಇಂಡಿಯಾ ಟು ಗ್ರೇಟರ್ ಹೈಟ್ಸ್’ ವಿಚಾರ ಸಂಕಿರಣ
ಬೆಂಗಳೂರು, ಮಾ.22: ಇಂಡಸ್ ಬ್ಯುಸಿನೆಸ್ ಅಕಾಡಮಿ ವತಿಯಿಂದ ಮಾ.24 ರಿಂದ ಮೂರು ದಿನಗಳ ಕಾಲ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಿಕೆ ಕುರಿತ ರಾಷ್ಟ್ರೀಯ ಮಟ್ಟದ ‘ಟೇಕಿಂಗ್ ಇಂಡಿಯಾ ಟು ಗ್ರೇಟರ್ ಹೈಟ್ಸ್’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡಮಿಯ ನಿರ್ದೇಶಕ ಸುಭಾಷ್ ಶರ್ಮಾ, ಜಾಗತಿಕವಾಗಿ ಭಾರತ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಅದನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬೆಳೆಸುವುದರ ಕಡೆಗೆ ಹೆಚ್ಚು ಗಮನ ಕೊಡುವ ಅಗತ್ಯವಿದೆ. ಅದರ ಭಾಗವಾಗಿ ಇಂತಹ ವಿಚಾರ ಸಂಕಿರಣಗಳು ಅಗತ್ಯವಾಗಿವೆ ಎಂದು ಹೇಳಿದರು.
ಕಾರ್ಯಕ್ರಮವು ಕನಕಪುರ ರಸ್ತೆಯಲ್ಲಿರುವ ಇಂಡಸ್ ಅಕಾಡಮಿಯಲ್ಲಿ ನಡೆಯಲಿದ್ದು, ಐಐಎಸ್‌ಸಿ ನಿರ್ವಹಣಾ ವಿಭಾಗದ ಮುಖ್ಯಸ್ಥ ಕೆ.ಬಿ.ಅಖಿಲೇಶ್, ಪ್ರೊ.ಎಚ್.ಎಸ್.ಶಿವಪ್ರಕಾಶ್ ಉದ್ಘಾಟನೆ ಮಾಡಲಿದ್ದಾರೆ. ರಾಜಸ್ಥಾನದ ಗಣಿತ ಪ್ರಾಧ್ಯಾಪಕ ಇಮ್ರಾನ್ ಖಾನ್, ಸಾಮಾಜಿಕ ಕಾರ್ಯಕರ್ತ ಟೆಮ್ಸುಟುಲಾ ಇಂಗಾಂಗ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.