ಸಾಮಾಜಿಕ ಸಾಮರಸ್ಯದ ಬದುಕು ದ.ಕ.ಜಿಲ್ಲೆಯ ದೊಡ್ಡ ಆಸ್ತಿ

Update: 2016-03-27 18:33 GMT

ಸಾಮಾಜಿಕ ಸಾಮರಸ್ಯದ ಬದುಕು ದ.ಕ.ಜಿಲ್ಲೆಯ ದೊಡ್ಡ ಆಸ್ತಿ

- ಯು.ಟಿ.ಖಾದರ್, ಆರೋಗ್ಯ ಸಚಿವ.

ಅದನ್ನು ಕೆಡಿಸಿದರೂ ಕೆಲವರಿಗೆ ಆಸ್ತಿ ಮತಗಳ ರೂಪದಲ್ಲಿ ವರ್ಗಾವಣೆಯಾಗುತ್ತದೆ.

---------------------

 ಅಂಬೇಡ್ಕರ್ ಅವರೇ ಇಂದು ಪ್ರತ್ಯಕ್ಷವಾದರೂ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಗೋಳ್ವಾಲ್ಕರ್ ಪ್ರತ್ಯಕ್ಷರಾದರೆ...ಅದನ್ನೂ ಸ್ವಲ್ಪ ವಿವರಿಸಿ.

---------------------

ಭಾರತದ ಸಮಸ್ಯೆಗೆ ಯುವಕರು ಪರಿಹಾರ ಹುಡುಕಬೇಕು

- ಪ್ರಣವ್ ಮುಖರ್ಜಿ, ರಾಷ್ಟ್ರಪತಿ.

ಮುದುಕರು ಮಾಡಿಟ್ಟ ಸಮಸ್ಯೆಗಳನ್ನು ಯುವಕರ ತಲೆಗೆ ಕಟ್ಟುವುದೇ?

---------------------

ನಮ್ಮ ಸಂವಿಧಾನ ದೇಶ ಒಡೆಯುವುದನ್ನು ಸಹಿಸುವುದಿಲ್ಲ

- ಅರುಣ್ ಜೇಟ್ಲಿ, ಕೇಂದ್ರ ಸಚಿವ.

ಅದಕ್ಕಾಗಿ ಸಂವಿಧಾನವನ್ನು ಒಡೆಯುವ ಪ್ರಯತ್ನವೇ?

---------------------

ಚೀನಾದಿಂದ ಪ್ರೇರಣೆ ಪಡೆದಿರುವ ಕಮ್ಯುನಿಸ್ಟರು ಭಾರತವನ್ನು ಅಸ್ಥಿರ ಗೊಳಿಸಲು ಯತ್ನಿಸುತ್ತಿದ್ದಾರೆ

- ಬಾಬಾ ರಾಮ್‌ದೇವ್. ಯೋಗ ಗುರು

ಆ ಹಿನ್ನೆಲೆಯಲ್ಲೇ ನೇಪಾಳದ ಮೂಲಕ ನಿಮ್ಮನ್ನು ಭಾರತಕ್ಕೆ ರವಾನಿಸಿದ್ದಾರೆ ಎಂಬ ವದಂತಿಯಿದೆ.

---------------------

 ಮಹಿಳೆಯರು ರಾಜಕೀಯವಾಗಿ ಬೆಳೆಯುವುದು ಕಷ್ಟ 

- ರಮ್ಯಾ, ಮಾಜಿ ಸಂಸದೆ.

ಸಿನೆಮಾದಲ್ಲಿ ಬೆಳೆದಷ್ಟು ಖಂಡಿತಾ ಸುಲಭ ಇಲ್ಲ.

---------------------

ಪ್ರಶಸ್ತಿ ಸಮಾರಂಭಗಳು ನನಗೆ ಸರ್ಕಸ್‌ಗಳಂತೆ ಭಾಸವಾಗುತ್ತದೆ

- ಜಾನ್ ಅಬ್ರಹಾಂ, ಬಾಲಿವುಡ್ ನಟ.

ಪ್ರಶಸ್ತಿ ಪಡೆಯದ ಜೋಕರ್‌ಗಳ ಕಣ್ಣೀರು.

--------------------- 

ನರೇಂದ್ರ ಮೋದಿ ಅಭಿವೃದ್ಧಿ ಶೀಲ ದೇಶದ ಬದಲಾವಣೆಯ ಹರಿಕಾರ

- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ.

ಅದು ಯಾವ ದೇಶ ಎನ್ನುವುದನ್ನೂ ಬಯಲು ಮಾಡಬಾರದೇ?

---------------------

ನರೇಂದ್ರ ಮೋದಿಯವರ 21 ತಿಂಗಳ ಆಡಳಿತದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಕಪ್ಪು ಹಾಳೆಯಲ್ಲಿ ಕಪ್ಪು ಚುಕ್ಕೆಯನ್ನು ಹುಡುಕುವವರು ಮೂರ್ಖರು.

---------------------

ರಾಹುಲ್ ಒಬ್ಬ ಬುದ್ದು

- ಸುಬ್ರಮಣಿಯನ್ ಸ್ವಾಮಿ. ಬಿಜೆಪಿ ಮುಖಂಡ 

ಅದನ್ನು ಬುದ್ಧ ಎಂದು ಕೇಳಿಸಿಕೊಂಡ ರಾಹುಲ್, ಮತ್ತೆ ತಪಸ್ಸಿಗೆ ಕೂತಿದ್ದಾರಂತೆ.

---------------------

ಸರಕಾರ ಮತ್ತು ಆರ್‌ಬಿಐ ಗವರ್ನರ್ ಮಧ್ಯೆ ಯಾವುದೇ ಹಗ್ಗ ಜಗ್ಗಾಟ ಇಲ್ಲ

- ಅರುಣ್ ಜೇಟ್ಲಿ, ಕೇಂದ್ರ ಸಚಿವ .

ಹಗ್ಗಗಳೆಲ್ಲ ರೈತರ ನೇಣಿಗೆ ಬಳಕೆಯಾಗಿರುವುದರಿಂದ ಇರಬಹುದೇ?

---------------------

ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಮಾನಸಿಕ ಶಕ್ತಿಯಿದೆ

- ಶೋಭಾ ಕರಂದ್ಲಾಜೆ, ಸಂಸದೆ.

ಯಡಿಯೂರಪ್ಪರ ಮಾನಸಿಕ ಶಕ್ತಿಯ ಬಗ್ಗೆ ಈ ಪರಿಯ ತೀರ್ಪೇ?

---------------------

ಸಚಿವನಾಗಿ ಒಳ್ಳೆಯ ಕೆಲಸ ಮಾಡಬೇಕೆಂದಿದ್ದೇನೆಯೇ ಹೊರತು ಜನರಿಂದ ಉಗಿಸಿಕೊಳ್ಳಲು ಇಷ್ಟವಿಲ್ಲ

- ಡಿ.ಕೆ. ಶಿವಕುಮಾರ್, ಇಂಧನ ಸಚಿವ.

ಅಂದರೆ ಸಚಿವನಾಗುವ ಮೊದಲು ಕೆಟ್ಟ ಕೆಲಸ ಮಾಡುತ್ತಿದ್ದಿರಿ ಎಂದಾಯಿತು.

---------------------

ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಸರಕಾರ ನಂ.1

- ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ.

 ಮಲ್ಯ ಸೂರ್ತಿಯಂತೆ.

 --------------------- 

ಕಾಶ್ಮೀರ ಪಾಕಿಸ್ತಾನದ ಗಂಟಲಿನ ರಕ್ತನಾಳ

- ಮಮ್ನೂನ್ ಹುಸೈನ್. ಪಾಕ್ ಅಧ್ಯಕ್ಷ.

ನಿಮ್ಮ ಗಂಟಲಿಗೆ ನೀವೇ ಕತ್ತಿಯಿಟ್ಟರೆ ಹೇಗೆ?

---------------------

 ಜನತೆ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತಕ್ಕೆ ಬೇಸತ್ತು ಹೋಗಿದ್ದು, ರಾಮಕೃಷ್ಣ ಹೆಗಡೆ ಹಾಗೂ ಜೆ. ಎಚ್.ಪಾಟೇಲರ ಆಡಳಿತ ಬಯಸುತ್ತಿದ್ದಾರೆ.

- ಎಂ.ಪಿ. ನಾಡಗೌಡ, ಜೆಡಿಯು ರಾಜ್ಯಾಧ್ಯಕ್ಷ.

 ಅಂದರೆ ಅವರ ಆತ್ಮಗಳೆಲ್ಲ ಬಂದು ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆಯೇ?

---------------------

ಆನೆ ಸಮಸ್ಯೆ ನಿವಾರಣೆಗೆ 29 ಕ್ಕೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು

- ರಮಾನಾಥ ರೈ, ಸಚಿವ.

ಅಂದರೆ ಆನೆಮರಿಗಳಿಗೆ ಪೋಲಿಯೊ ಪಲ್ಸ್ ಹಾಕುವ ಉದ್ದೇಶ ಇದೆಯೇ?

---------------------

ನನ್ನ ಪಕ್ಷದವರೇ ನನ್ನ ಕೈಕಟ್ಟಿ ಹಾಕಿದ್ದಾರೆ

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

ಸೂಟ್‌ಕೇಸ್ ಕಂಡಲ್ಲೆಲ್ಲ ಕೈ ಚಾಚ ಹೊರಟರೆ ಇನ್ನೇನು ಮಾಡುತ್ತಾರೆ.

--------------------

ಉತ್ತರಾಖಂಡ ರಾಜಕೀಯ ಅಸ್ಥಿರತೆಗೆ ಬಾಬಾ ರಾಮ್‌ದೇವ್ ಕಾರಣ

- ಕಿಶೋರ್ ಉಪಾಧ್ಯಾಯ, ಉ.ಖ.ಕಾಂ. ಅಧ್ಯಕ್ಷ.

ಅವರ ಔಷಯನ್ನು ಸೇವಿಸಿದ ಪರಿಣಾಮವಿರಬೇಕು.

--------------------- 

ನಾನೆಂದಿಗೂ ಆರೆಸ್ಸೆಸ್ ನಿಷ್ಠ

- ಯಡಿಯೂರಪ್ಪ, ಮಾಜಿಮುಖ್ಯಮಂತ್ರಿ.

ರಾಜ್ಯಕ್ಕೆ ಅನಿಷ್ಟ.

---------------------

ನಾನು ಏನು ಮಾಡಿದರೂ ಬಹಿರಂಗವಾಗಿಯೇ ಮಾಡುತ್ತೇನೆ

- ಬಾಬಾ ರಾಮ್‌ದೇವ್. ಯೋಗಗುರು

ಛೀ... ಎಂದು ರಾಖಿ ಸಾವಂತ್ ನಾಚಿಕೊಂಡಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!