ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತದೆ.
• ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತದೆ.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
• ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಬಗ್ಗೆ ಅಷ್ಟೊಂದು ಧೈರ್ಯವೇ?
---------------------
• ಮುಖ್ಯಮಂತ್ರಿ ಮನೆ ಕಾಯುವುದೇ ಎಚ್.ಡಿ. ರೇವಣ್ಣ ಅವರ ಕೆಲಸ.
-ಎ.ಮಂಜು, ಸಚಿವ
• ಮನೆಯೊಳಗಿನ ಕಳ್ಳರಿಗೆ ಹೆದರಿ, ರೇವಣ್ಣ ಅವರಿಗೆ ಕಾಯುವ ಕೆಲಸ ಕೊಟ್ಟಿರಬೇಕು.
---------------------
• ಕೇಂದ್ರ ಸಚಿವ ಗಡ್ಕರಿಯವರು ಕಾಮಧೇನು ಇದ್ದಂತೆ.
-ನಳಿನ್ ಕುಮಾರ್ ಕಟೀಲ್, ಸಂಸದ
• ಹಾಲು ಕರೆದು ಮುಗಿಸಿದ ಬಳಿಕ, ಕಸಾಯಿ ಖಾನೆಗೆ ಕಳುಹಿಸುವ ಯೋಜನೆಯಿದೆಯೇ?
---------------------
• ಕಾಂಗ್ರೆಸ್ ಸರಕಾರದ ಮರಣ ಶಾಸನಕ್ಕೆ ಎಸಿಬಿ ಮುನ್ನುಡಿ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
• ಈ ಹಿಂದೆ ಬಿಜೆಪಿ ಮರಣ ಶಾಸನಕ್ಕೆ ಲೋಕಾಯುಕ್ತ ಬರೆದ ಮುನ್ನುಡಿ ನೆನಪಾಯಿತೇ?
---------------------
• "ಭಾರತ್ ಮಾತಾಕಿ ಜೈ" ಎಂದು ಕೂಗಲು ಒತ್ತಾಯ ಬೇಡ
-ಮೋಹನ ಭಾಗವತ್, ಆರೆಸ್ಸೆಸ್ ಮುಖಂಡ
• ಮೋದಿ ಸರಕಾರ ಇರುವವರೆಗೆ ಬೇಡ ಎಂಬ ಸಲಹೆಯೇ?
---------------------
• ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಹೇಳಿದ ಮಾತಿನಂತೆ ನಡೆದುಕೊಂಡಿದ್ದೇನೆ.
-ನಿತಿನ್ ಗಡ್ಕರಿ, ಕೇಂದ್ರ ಸಚಿವ
• ಯಾರಿಗೆ ಹೇಳಿದ್ದು ಎನ್ನುವುದನ್ನೂ ಬಹಿರಂಗ ಪಡಿಸಿ.
---------------------
• ದಲಿತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ಅದು ಈ ದೇಶಕ್ಕೇ ಅವಮಾನ
-ಉಮಾ ಭಾರತಿ, ಕೇಂದ್ರ ಸಚಿವೆ
• ಕೊಲೆಯೇ ಸರಿ ಅಂತೀರಾ?
---------------------
• ವಿಜಯ ಮಲ್ಯ ಮರ್ಯಾದೆಯಿಂದ ಸಾಲ ಮರುಪಾವತಿಸಬೇಕು
-ಅರುಣ್‌ಜೇಟ್ಲಿ, ಕೇಂದ್ರ ಸಚಿವ
• ಮರ್ಯಾದೆಯನ್ನೇ ಅಡವಿಟ್ಟು ಸಾಲ ಪಡೆದಿರುವುದಂತೆ.
---------------------
• ಶಾಶ್ವತವಾಗಿ ಕಾಂಗ್ರೆಸ್‌ನ ಬಾಯಿ ಮುಚ್ಚಿಸಬೇಕಾದರೆ ವೀರ ಸಾವರ್ಕರ್‌ಗೆ ಭಾರತ ರತ್ನ ನೀಡಿ
-ಉದ್ಧವ್ ಠಾಕ್ರೆ, ಶಿವಸೇನೆ ಅಧ್ಯಕ್ಷ
• ಸರಕಾರ ಕನ್ಹಯ್ಯಾನ ಬಾಯಿ ಮುಚ್ಚಿಸುವುದು ಹೇಗೆ ಎಂಬ ಚಿಂತೆಯಲ್ಲಿದೆ.
---------------------
• ಇದೇ ಮೊದಲ ಬಾರಿಗೆ ಉಗ್ರ ದಾಳಿಯೊಂದರ ತನಿಖೆಯನ್ನು ಪಾಕ್ ಗಂಭೀರವಾಗಿ ನಡೆಸುತ್ತಿದೆ.
-ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
• ಐಎಸ್‌ಐ ಜೊತೆ ಭಾಯಿ ಭಾಯಿ.
---------------------
• "ಭಾರತ್ ಮಾತಾಕಿ ಜೈ" ಗದವರು ತಮ್ಮ ತಾಯಿಯನ್ನೇ ಅನುಮಾನದಿಂದ ನೋಡಿದಂತೆ
-ಯೋಗಿ ಆದಿತ್ಯನಾಥ, ಸಂಸದ
• ನೀವು ಹೀಗೆಲ್ಲ ಹೇಳುತ್ತಿದ್ದರೆ, ಅವರು ನಿಮ್ಮ ಭಾರತ ಮಾತೆಯನ್ನು ಅನುಮಾನದಿಂದ ನೋಡದೆ ಬಿಟ್ಟಾರೆಯೇ?
---------------------
• ಪ್ರಧಾನಿ ನರೇಂದ್ರ ಮೋದಿ ಸುತ್ತು ಇರುವ ಭ್ರಮೆ ಕರಗುತ್ತಿದೆ
-ಡಿ.ರಾಜಾ, ಸಿಪಿಐ ರಾ.ಪ್ರ. ಕಾರ್ಯದರ್ಶಿ
• ಅಂದರೆ ನಿಮಗೂ ಅವರ ಕುರಿತಂತೆ ಭ್ರಮೆ ಇತ್ತೇ?
---------------------
• ದೇಶದಲ್ಲಿ ಪ್ರತಿಯೊಬ್ಬರೂ ಏನನ್ನು ಬಯಸುತ್ತಿದ್ದಾರೆಯೋ ನಾನೂ ಅದನ್ನೇ ಬಯಸುತ್ತಿದ್ದೇನೆ.
-ಅರುಣ್ ಜೇಟ್ಲಿ, ಕೇಂದ್ರ ಸಚಿವ
• ಅಂದರೆ ಮೋದಿ ತೊಲಗುವುದನ್ನು ನೀವು ಒಳಗೊಳಗೇ ಬಯಸುತ್ತಿದ್ದೀರಿ ಎಂದಾಯಿತು.
---------------------
• ದೇಶಾದ್ಯಂತ ನನ್ನನ್ನು ಜನರು ಸ್ವೀಕರಿಸಿದ್ದಾರೆ.
-ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
• ನೀವು ದೇಶವನ್ನು ಸ್ವೀಕರಿಸುವುದು ಯಾವಾಗ?
---------------------
• ವಿಚಾರವಾದಿ, ಬುದ್ಧಿಜೀವಿಗಳೇ ನಿಜವಾದ ಕೋಮುವಾದಿಗಳು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
• ಬಾಬರೀ ಮಸೀದಿಯನ್ನು ಬಹುಶಃ ಅವರೇ ಒಡೆದಿರಬೇಕು.
---------------------
• ಮೋದಿ ನೇತೃತ್ವದ ಸರಕಾರಕ್ಕೆ ಪ್ರಜಾಪ್ರಭುತ್ವ ತತ್ವಗಳಲ್ಲಿ ನಂಬಿಕೆಯೇ ಇಲ್ಲ
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
• ಕಾಂಗ್ರೆಸ್‌ನೊಳಗಿನ ಪ್ರಜಾಪ್ರಭುತ್ವದ ಗತಿ ಏನು?
---------------------
• ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನವೆನಿಸುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
• ಮುಂದಿನ ದಾರಿಯನ್ನು ನೋಡುವಾಗ ಮಾತ್ರ ಕಷ್ಟವೆನಿಸುತ್ತದೆಯೇ?
--------------------
• ಎಸಿಬಿ ರಚನೆಗೆ ನಾನು ಬೆಂಬಲ ನೀಡಿಲ್ಲ
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂ.ಸಂ.ಪ. ನಾಯಕ
• ಲೋಕಾಯುಕ್ತ ದುರ್ಬಲಗೊಳಿಸುವುದಕ್ಕಷ್ಟೇ ನಿಮ್ಮ ಬೆಂಬಲ. ಅಲ್ಲವೇ?
---------------------
• ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ವಿಶ್ವದ ಅತಿದೊಡ್ಡ ಸಮಸ್ಯೆ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್‌ಅಭ್ಯರ್ಥಿ
• ಅಣ್ವಸ್ತ್ರಕ್ಕಿಂತ ನಿಮ್ಮ ಹೇಳಿಕೆಗಳಿಗೇ ಅಮೆರಿಕ ಬೆದರುತ್ತಿರುವಂತಿದೆ.
---------------------
• ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಇತಿಹಾಸದಲ್ಲೇ ಮೊದಲು
- ಕೃಷ್ಣ ಜೆ. ಪಾಲೆಮಾರ್, ಮಾಜಿ ಸಚಿವ
• ಸದನದಲ್ಲಿ ಬ್ಲೂಫಿಲಂ ನೋಡಿರುವ ಸಾಧನೆಯ ಮುಂದೆ ಇದೇನು ಅಲ್ಲ ಬಿಡಿ.
--------------------
• ರಾಘವೇಶ್ವರ ಭಾರತೀ ಸ್ವಾಮೀಜಿ ಈಗ ಗ್ರಹಣ ಮುಕ್ತ ಚಂದ್ರನಂತಾಗಿದ್ದಾರೆ.
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
• ನ್ಯಾಯ ವ್ಯವಸ್ಥೆಯೆನ್ನುವ ಸೂರ್ಯನಿಗೀಗ ಗ್ರಹಣದ ಕಾಲ.