ಕಂದಾಯ ಭವನದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ

Update: 2016-04-06 18:17 GMT

ಬೆಂಗಳೂರು, ಎ.6: ರಾಜ್ಯ ಭೂಮಿ ಕಬಳಿಕೆ ನಿಷೇಧ ಅಧಿನಿಯಮ-2011ರಡಿ ರಚಿಸಲಾಗಿರುವ ವಿಶೇಷ ನ್ಯಾಯಾಲಯಕ್ಕೆ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನದ ಮೂರನೆ ಮಹಡಿಯಲ್ಲಿ 5090.08 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶವನ್ನು ಹಂಚಿಕೆ ಮಾಡಲಾಗಿದೆ.

ರಾಜ್ಯ ಸರಕಾರವು ಕಂದಾಯ ಭವನದ ಕಟ್ಟಡದಲ್ಲಿ ವಿವಿಧ ಕಚೇರಿಗಳಿಗೆ ಸ್ಥಳಾವಕಾಶ ಹಂಚಿಕೆ ಮಾಡಿ 2013ರ ಅ.25ರಂದು ಆದೇಶ ಹೊರಡಿಸಿತ್ತು. ಇದೀಗ ಆದೇಶವನ್ನು ಮಾರ್ಪಡಿಸಿ ಕಂದಾಯ ಭವನದ 3ನೆ ಮಹಡಿಯ ಎಡ ಭಾಗದಲ್ಲಿ ಭೂಮಿ ಕೇಂದ್ರಕ್ಕೆ ಹಂಚಿಕೆಯಾಗಿರುವ 5090.08 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶವನ್ನು ರಾಜ್ಯ ಭೂಮಿ ಕಬಳಿಕೆ ನಿಷೇಧ ಅಧಿನಿಯಮ-2011ರಡಿ ರಚಿಸಲಾಗಿರುವ ವಿಶೇಷ ನ್ಯಾಯಾಲಯಕ್ಕೆ ಮರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News