ದಾಖಲಾತಿ ಪರಿಶೀಲನೆ
Update: 2016-04-13 18:47 GMT
ಬೆಂಗಳೂರು, ಎ. 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಶುಶ್ರೂಷಕರ ದಾಖಲಾತಿ ಪರಿಶೀಲನೆಯಲ್ಲಿ 136 ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದು, 125 ಅಭ್ಯರ್ಥಿಗಳು ಪರಿಶೀಲನೆಯನ್ನು ಪೂರ್ಣಗೊಳಿಸಲಾಗಿದೆ.
ವಿಕಲಚೇತನ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಕೋಟಾದಡಿ ಮೀಸಲಾತಿ ಕೋರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಕಾರಣಗಳಿಂದ ಇಂದು ಹಾಜರಾಗಿಲ್ಲದ ಅಭ್ಯರ್ಥಿಗಳು ಎ.18ರ ಒಳಗೆ ಹಾಜರಾಗಲು ಸೂಚಿಸಿದೆ.
ಪಿಜಿಇಟಿ: ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ ಸ್ನಾತಕೋತ್ತರ ಸೀಟು ಹಂಚಿಕೆಯ ಪಿಜಿಇಟಿ ಕೌನ್ಸೆಲಿಂಗ್ ಪ್ರಗತಿಯಲ್ಲಿದ್ದು, 18ಅಭ್ಯರ್ಥಿಗಳು ತಮ್ಮ ಇಚ್ಛೆಯನ್ನು ಚಲಾಯಿಸಿದ್ದು 11ಅಭ್ಯರ್ಥಿಗಳು ಪ್ರವೇಶಾನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಎ.21ರ ವರೆಗೆ ಇಚ್ಛೆ ಆಯ್ಕೆಗೆ ಶುಲ್ಕಪಾವತಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.