‘ಸಿಇಟಿ’ ಒಎಂಆರ್ ಉತ್ತರ ಹಾಳೆ ಮಾದರಿ ಪ್ರಕಟ

Update: 2016-04-13 18:48 GMT

ಬೆಂಗಳೂರು, ಎ. 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 4 ಮತ್ತು 5ರಂದು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುತ್ತಿದ್ದು, ಆ ಸಂಬಂಧ ಅಭ್ಯರ್ಥಿಗಳ ಮಾಹಿತಿಗಾಗಿ ಒಎಂಆರ್ ಉತ್ತರಹಾಳೆಯ ಮಾದರಿಯನ್ನು ಮತ್ತು ಪರೀಕ್ಷಾ ಸಂಬಂಧವಾದ ಸೂಚನೆಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ಪರೀಕ್ಷಾ ಸಂಬಂಧಿತ ಸೂಚನೆಗಳನ್ನು ವೆಬ್‌ಸೈಟ್: http://kea.kar.nic.inನಲ್ಲಿ ನೋಡಿಕೊಳ್ಳುವುದರೊಂದಿಗೆ ಒಎಂಆರ್ ಹಾಳೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡುವ ಬಗ್ಗೆ ಅಭ್ಯಾಸ ಮಾಡಿಕೊಳ್ಳಬಹುದು ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News