ಇಂದು ಅಗ್ನಿಶಾಮಕ ಸೇವಾ ಸಪ್ತಾಹ

Update: 2016-04-13 18:52 GMT

ಬೆಂಗಳೂರು,ಎ. 13: ಮುಂಬೈಯ ವಿಕ್ಟೋರಿಯಾ ಡಾಕ್ ಬಂದರಿನಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿದ್ದ ಎಸ್.ಎಸ್. ಪೋರ್ಟ್ ಸ್ಟೈಕೈನ್ ಹಡಗು 1914ರ ಎ.14ರಂದು ಅಗ್ನಿ ಅನಾಹುತಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಹೋದ ಮುಂಬೈ ಫೈರ್ ಬ್ರಿಗೇಡ್‌ನ ಅಧಿಕಾರಿ, ಸಿಬ್ಬಂದಿಯವರು ಹಡಗು ಸ್ಫೋಟಗೊಂಡು ಮರಣ ಹೊಂದಿದ್ದರು. ಇದರ ಭಾಗವಾಗಿ ಇಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ.
 
   ಪ್ರತಿ ವರ್ಷ ಎ.14ರಿಂದ 20ರವರೆಗೆ ಇಡೀ ದೇಶದಾದ್ಯಂತ ಸಪ್ತಾಹವನ್ನು ಸಂಘಟಿಸಿ ಅಗ್ನಿ ಅನಾಹುತ ಬಗ್ಗೆ ಮುಂಜಾಗ್ರತೆ ಕ್ರಮಗಳ ತಿಳಿಸಲು ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಿಳಿವಳಿಕೆಯನ್ನು ನೀಡಿ, ಅಗ್ನಿಶಮನ ವಿಚಾರಗಳ ಬಗ್ಗೆ ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ದೇಶಾದ್ಯಂತ ಸಪ್ತಾಹದ ಮೊದಲನೆ ದಿನವಾದ ಎಪ್ರಿಲ್ 14ರಂದು ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿದಾನಗೈದು ಅಮರರಾದ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News