ವೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ
Update: 2016-04-13 18:54 GMT
ಬೆಂಗಳೂರು, ಎ.13: ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ನಿನ್ನೆಯಷ್ಟೇ ಮುಕ್ತಾಯವಾದ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ವೌಲ್ಯಮಾಪನಕ್ಕೆ ನೀಯೋಜಿಸಿರುವ ಎಲ್ಲ ಉಪ ವೌಲ್ಯಮಾಪಕರು ಎ.16 ರಂದು ಹಾಗೂ ಸಹಾಯಕ ವೌಲ್ಯ ಮಾಪಕರು ಎ.18ರಂದು ನಿಗದಿ ಪಡಿಸಿರುವ ಕೇಂದ್ರಗಳಲ್ಲಿ ವೌಲ್ಯ ಮಾಪನಕ್ಕೆ ಹಾಜರಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.