ಸಿಕ್ಸ್ ಪ್ಯಾಕ್‌ಗಳ ಹಿಂದಿನ ಕರಾಳ ರಹಸ್ಯ

Update: 2016-04-17 08:49 GMT

ಇಪ್ಪತ್ತು ಬರ್ಪಿಗಳು (ಏಳುವುದು-ಕೂರುವುದು) ನಿಮ್ಮ ದೇಹಕ್ಕೆ ಮಾದಕ ಲುಕ್ ಕೊಡುತ್ತದೆ. ಕನ್ನಡಿಯಲ್ಲಿ ನೋಡಿಕೊಂಡು ನಿಮ್ಮ ಪ್ಯಾಕ್‌ಗಳ ಬಗ್ಗೆ ಖುಷಿ ಪಡಬಹುದು. ನಲವತ್ತು ಕ್ಲೈಂಬರ್ಸ್‌. ನಿಮ್ಮ ಲುಕ್ ಇನ್ನಷ್ಟು ಫಿಟ್ ಆಗುವುದನ್ನು ಕನ್ನಡಿಯಲ್ಲಿ ನೋಡಿ ಖುಷಿ ಪಡುವುದು. ಪ್ರತೀ ಫಿಟ್ನೆಸ್ ಕೇಂದ್ರದಲ್ಲಿ ಬರುವವರ ಉದ್ದೇಶ ಇದೇ ಇರುತ್ತದೆ. ಉತ್ತಮ ಮಾದಕ ದೇಹ ಇರುವವರು ಫಿಟ್ನೆಸ್ ಕೇಂದ್ರಕ್ಕೆ ಹೋದಾಗ ಇದೇ ಮಾಡುತ್ತಾರೆ. ಮುಖ್ಯವಾಗಿ ಎದೆ ಭಾಗದ ಸೌಂದರ್ಯ ಅವರಿಗೆ ಮುಖ್ಯವಾಗಿರುತ್ತದೆ. ಹರವಾದ ಎದೆ ಮತ್ತು ಸಿಕ್ಸ್ ಪ್ಯಾಕ್ ಅವರ ಗುರಿ.

ಒಮ್ಮೆ ಆಬ್ಸ್ ಇದೆ ಎಂದು ಗೊತ್ತಾದ ಮೇಲೆ ಸಾರ್ವಜನಿಕವಾಗಿ ಅದನ್ನು ತೋರಿಸುವ ಉತ್ಸಾಹವೂ ಮತ್ತು ಪ್ರಶಂಸೆ ಪಡೆಯುವ ಆಶಯವೂ ಹೆಚ್ಚಾಗುತ್ತದೆ. ಯುವಕರು ಪ್ರತೀ ಕ್ಷಣಕ್ಕೂ ತಮ್ಮ ಟೀ ಶರಟನ್ನು ಬಿಚ್ಚಿ ಆಬ್ಸ್ ಪರೀಕ್ಷಿಸುವುದನ್ನು ಫಿಟ್ನೆಸ್ ಕೇಂದ್ರಗಳಲ್ಲಿ ನೋಡುವುದೂ ಮೋಜಿನ ವಿಷಯ. ಪ್ರತೀ ಬಾರಿ ವರ್ಕೌಟ್ ಮಾಡಿದಾಗಲೂ ಆಬ್ಸ್ ಇನ್ನಷ್ಟು ಸುಂದರವಾಗಬೇಕು ಎನ್ನುವುದು ಅವರ ಆಶಯ. ಬಹಳಷ್ಟು ಮಂದಿಗೆ ಐಸ್‌ಕ್ರೀಂ ಮತ್ತು ಚಾಕಲೇಟುಗಳ ಸೇವನೆಯ ಆಶೆ ಇರುತ್ತದೆ. ಆದರೆ ಮಾದಕ ಲುಕ್‌ಗಾಗಿ ಫಿಟ್ನೆಸ್ ಕೇಂದ್ರಕ್ಕೆ ಶುಲ್ಕ ಕಟ್ಟುತ್ತಿರುವಾಗ ಆಶಯವನ್ನು ಬದಿಗಿಡಲೇಬೇಕು.

ಹಾಗೆಂದು ಯಾವಾಗಲಾದರೊಮ್ಮೆ ಕೊಬ್ಬಿನ ಪದಾರ್ಥ ಸೇವನೆ ತಪ್ಪಲ್ಲ. ಗ್ಲಾಮರ್ ಉದ್ಯಮದ ಭಾಗವಾಗಲು ನಾನೂ ಸಾಮಾನ್ಯ ವ್ಯಕ್ತಿಗಳಂತೆ ಫಿಟ್ನೆಸ್ ಇರುವ ದೇಹಕ್ಕಾಗಿ ಪ್ರಯತ್ನಿಸಿದ್ದೆ. ಒಂದು ಔನ್ಸ್ ತೂಕ ಹೆಚ್ಚಾಗದಂತೆ ಎಲ್ಲವನ್ನೂ ತಿನ್ನುವುದು ನನ್ನ ಉದ್ದೇಶವಾಗಿತ್ತು. ಕಾಲೇಜು ಪದವೀಧರನಾದ ನಾನು ಮಾದಕ ಲುಕ್ ಪಡೆದುಕೊಂಡು ಗ್ಲಾಮರ್ ಉದ್ಯಮ ಸೇರುವ ಕನಸು ಕಂಡೆ. ನನ್ನ ಗಾತ್ರ ಮತ್ತು ಆಕಾರದಿಂದ ನನ್ನಿಂದ ಅದು ಸಾಧ್ಯವಾಗುವುದಿಲ್ಲ ಎಂದು ತಿಳಿದು ಜಿಮ್ ದಾರಿ ಹಿಡಿದೆ. ಒತ್ತಡಪೂರ್ವಕ ಜಿಮ್‌ನಲ್ಲಿ ಕಾಲ ಕಳೆದೆ. ನನ್ನ ದೇಹದ ಯಾವುದೋ ಭಾಗದಲ್ಲಿ ಮೂಳೆ ಕಾಣುವುದು ಅಥವಾ ಕಟ್ ಕಾಣುವ ಬಯಕೆ ನನ್ನದಾಗಿತ್ತು. ನಾನು ಮುಂಬೈಗೆ ಹೋದಾಗ ವಿಭಿನ್ನ ವಾಸ್ತವ ನನ್ನ ಕಣ್ಣಮುಂದೆ ಬಂತು. ಸ್ಟಿರಾಯ್ಡುಗಳು, ಸರ್ಜರಿಗಳು, ಔಷಧಿಗಳು ಮತ್ತು ಹಲವು ಹೊಸ ದಾರಿಗಳ ಮೂಲಕ ಪರಿಪೂರ್ಣ ದೇಹ ಪಡೆದುಕೊಳ್ಳುವ ಅವಕಾಶಗಳು ಬಂದವು. ಮಹಿಳೆಯರು ಪರಿಪೂರ್ಣ ದೇಹ ಪಡೆದುಕೊಳ್ಳಲು ಬಹಳಷ್ಟು ಒತ್ತಡದಲ್ಲಿರುತ್ತಾರೆ. ಆದರೆ ಪುರುಷರ ಮೇಲೂ ಇರುವ ಒತ್ತಡದ ಬಗ್ಗೆ ಯಾರೂ ಹೆಚ್ಚು ಮಾತನಾಡುವುದಿಲ್ಲ. ಮುಖ್ಯವಾಗಿ ರೂಪದರ್ಶಿ ಮತ್ತು ನಟನಾ ಜಗತ್ತಿನಲ್ಲಿ ಉತ್ತಮವಾಗಿ ಮತ್ತು ಮಾದಕವಾಗಿ ಕಾಣಲು ಏನೆಲ್ಲಾ ಕಸರತ್ತು ಮಾಡಬೇಕಾಗುತ್ತದೆ ಎನ್ನುವ ಬಗ್ಗೆ ಅವರು ಸುಮ್ಮನಿರುತ್ತಾರೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಬ್ಸ್ ಮತ್ತು ಮಾದಕ ಜಾಲೈನುಗಳನ್ನು ಪಡೆಯುವ ನಿಟ್ಟಿನಲ್ಲಿ ಹಲವರು ಹೆಚ್ಚು ಮಾಹಿತಿಯಿಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನನಗೂ ಸ್ಟಿರಾಯ್ಡಿ ಸೇವಿಸಿದರೆ ನಿಮ್ಮ ದೇಹ ಹೇಗೆ ಬೆಳೆಯುತ್ತದೆ ನೋಡಿ ಎನ್ನುವ ಸಲಹೆ ಸಿಕ್ಕಿತ್ತು. ಒಂದು ಬಾರಿ ನಾನು ಪ್ರಸಿದ್ಧ ಸ್ಥಳವೊಂದಕ್ಕೆ ಆಡಿಶನ್ ನೀಡಲು ಹೋದಾಗ ಗೌರವಾನ್ವಿತ ವ್ಯಕ್ತಿಯೊಬ್ಬರು, ಗೌರವ್, ವಿ ಶೇಪ್ ದೇಹವನ್ನು ಪಡೆದುಕೊಳ್ಳಲು ನೀನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು. ನೀನು ವೈದ್ಯರನ್ನು ಕಾಣಲು ಏಕೆ ಹೋಗಬಾರದು ಎಂದು ಶಿಫಾರಸ್ಸು ಮಾಡಿದ್ದರು. ಪ್ರತೀ ಬಾರಿ ನಾನು ಇಂತಹ ಸಲಹೆಗಳನ್ನು ಕೇಳುವಾಗ ಯೋಚನೆಗೆ ಬೀಳುತ್ತಿದ್ದೆ ನಾನು ನಿಜಕ್ಕೂ ವೈದ್ಯರನ್ನು ಕಾಣಬೇಕೆ? ಚೆನ್ನಾಗಿ ಕಾಣಲು ಔಷಧಿ ಖರೀದಿಸಬೇಕೆ?

ಅದೃಷ್ಟವಶಾತ್ ನಾನು ಅಂತಹ ಯಾವುದೇ ಬಲೆಗೆ ಬೀಳಲಿಲ್ಲ. ಒಮ್ಮೆ ನಾನು ಮೂಳೆಗಳ ರಚನೆ ವೃದ್ಧಿಗೆ ಔಷಧಿ ಸೇವಿಸಿದ್ದೆನಾದರೂ, ಅದನ್ನು ಮುಂದುವರಿಸಲಿಲ್ಲ. ಆದರೆ ನನ್ನ ಸುತ್ತಲೂ ನಿತ್ಯವೂ ಅಂತಹ ಫಿಟ್ನೆಸ್ ಹುಚ್ಚನ್ನು ನೋಡುತ್ತೇನೆ. ಫ್ಯಾಷನ್ ರನ್ವೇನ ಹಿಂಬದಿ ವೇದಿಕೆಯಲ್ಲಿ ಮಹಿಳೆ ಮತ್ತು ಪುರುಷರ ದೇಹಗಳು ಬದಲಾಗುತ್ತಲೇ ಇರುತ್ತವೆ. ಉತ್ತಮ ದೇಹ, ಉತ್ತಮ ಆಸ್ತಿ ಮತ್ತು ಏನನ್ನಾದರೂ ಸುಂದರಗೊಳಿಸುವ ಪ್ರಯತ್ನ. ಈ ಬ್ರಾಂಡುಗಳು ಸೃಷ್ಟಿಸುವ ಉತ್ತೇಜನವಿದು. ಇವರು ನೀಡುವ ಸೇವೆಗಳಿಂದ ನಾವು ಸುಂದರವಾಗುತ್ತೇವೆ ಎನ್ನುವ ಭ್ರಮೆ ಮೂಡಿಸುತ್ತಾರೆ.

ಕೃತಕ ಬದಲಾವಣೆಗಳಿಂದ ಪರಿಪೂರ್ಣ ದೇಹವನ್ನು ಪಡೆದುಕೊಳ್ಳಬಹುದು ಎನ್ನುವ ಸುಳ್ಳು ನಂಬಿಕೆ ಈಗ ವ್ಯಾಪಕವಾಗಿದೆ. ಹೀಗಾಗಿ ಕೆಲವೊಮ್ಮೆ 15ರ ಯುವಕರೂ ಬದಲಿ ದಾರಿಯನ್ನು ಹಿಡಿದು ದೇಹದ ಫಿಟ್ನೆಸ್ ಮತ್ತು ಉತ್ತಮ ಲುಕ್‌ಗಾಗಿ ಪ್ರಯತ್ನಿಸುತ್ತಾರೆ. ನನ್ನ ವೈಯಕ್ತಿಕ ಅನುಭವ ಹೊರತಾದ ಆರೋಗ್ಯಕರ ಜೀವನವನ್ನು ನಾನು ಸಲಹೆ ನೀಡಲು ಸಾಧ್ಯವಿಲ್ಲ. ದೇಹಕ್ಕೆ ಪರಿಪೂರ್ಣ ಲುಕ್ ಪಡೆಯುವುದು ಸುಲಭವಲ್ಲ. ಆದರೆ ಅದಕ್ಕೆ ಬೆಲೆಯಿದೆಯೆ? ಖಂಡಿತಾ. ಕನ್ನಡಿಯ ಮುಂದೆ ಎಷ್ಟು ಫಿಟ್ ಆಗಿ ಕಾಣುತ್ತೇವೆ ಎನ್ನುವ ಹೊರತಾಗಿಯೂ ನಾವೆಷ್ಟು ಆರೋಗ್ಯವಂತರಾಗಿದ್ದೇವೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು.

ನೀವು ಫಿಟ್ ಆಗಿದ್ದೀರಿ ಎಂದು ನಿಮಗೆ ಅನಿಸಿದಲ್ಲಿ, ಯಾವುದೇ ಪರ್ಯಾಯ ಹಾದಿಯನ್ನು ಹಿಡಿಯುವ ಅಗತ್ಯವಿಲ್ಲ. ಆರೋಗ್ಯಕರವಾದುದೇನಾದರೂ ಕಂಡುಕೊಳ್ಳಿ ಮತ್ತು ಐಸ್ ಕ್ರೀಂ ಮೊದಲಾದ ರುಚಿಕರ ಆಹಾರವನ್ನು ಬಿಡಬೇಡಿ. ಬೆಳಗಿನ ಜಾವ ಏಳುವುದು ಮತ್ತು ಫಿಟ್ ದೇಹ ಪಡೆಯಲು ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

Writer - - ಗೌರವ್ ಅರೋರ

contributor

Editor - - ಗೌರವ್ ಅರೋರ

contributor

Similar News