• ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಗದಂತಹ ಕ್ರಮ ಕೈಗೊಂಡಿದ್ದೇವೆ.

Update: 2016-04-17 18:20 GMT

• ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಗದಂತಹ ಕ್ರಮ ಕೈಗೊಂಡಿದ್ದೇವೆ.
 -ಕಿಮ್ಮನೆ ರತ್ನಾಕರ, ಶಿಕ್ಷಣ ಸಚಿವ
ಸೋರಿಕೆಯಾಗಿರುವುದನ್ನು ಬಹಿರಂಗವಾಗದಂತೆ ನೋಡಿಕೊಳ್ಳುವ ಯೋಜನೆ ಇದೆಯೇ?
---------------------
 • ಯಡಿಯೂರಪ್ಪರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.

-ರೇಣುಕಾಚಾರ್ಯ, ಮಾಜಿ ಸಚಿವ

ಖೆಡ್ಡಾ ತೋಡುವುದಕ್ಕೆ ಈಶ್ವರಪ್ಪ, ಅಶೋಕ್, ಶೆಟ್ಟರ್ ಆಗಲೇ ಶುರು ಹಚ್ಚಿದ್ದಾರೆ.

---------------------

• ರಾಜಕೀಯದ ಕೊನೆಯ ದಿನಗಳನ್ನು ನೋಡುತ್ತಿದ್ದೇನೆ.

-ವಿ. ಶ್ರೀನಿವಾಸ ಪ್ರಸಾದ್, ಕಂದಾಯ ಸಚಿವ

ಜನರಿಗೆ ಇನ್ನಾದರೂ ಹೊಸ ದಿನಗಳು ದಕ್ಕೀತೇ?

---------------------

• ಸ್ಪೀಕರ್ ಹುದ್ದೆ ತನ್ನ ಪಾಲಿಗೆ ಶಿಕ್ಷೆಯಾಗಿದೆ.

-ಕಾಗೋಡು ತಿಮ್ಮಪ್ಪ, ವಿಧಾನ ಸಭಾಧ್ಯಕ್ಷ

ಸಚಿವ ಸ್ಥಾನಾಕಾಂಕ್ಷಿಯ ಒಳಗಿನ ವೇದನೆ.

---------------------

• ಅನ್ಯ ಪಕ್ಷಗಳು ಜೆಡಿಎಸ್ ಬಾಗಿಲು ಬಡಿಯುವ ಕಾಲ ದೂರವಿಲ್ಲ.

-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಅದಕ್ಕೆ ಮೊದಲು ಜೆಡಿಎಸ್‌ಗೆ ಒಂದು ಬಾಗಿಲು ಇರಬೇಕಲ್ಲ.

---------------------

• ಪತ್ರಕರ್ತರು ಆತ್ಮಸಾಕ್ಷಿಗೆ ತಕ್ಕಂತೆ ಬರೆಯಬೇಕು.

-ಪ್ರತಾಪ್ ಸಿಂಹ, ಸಂಸದ

ಆತ್ಮಸಾಕ್ಷಿ ಎನ್ನೋದು ಯಾವ ಕೆಟಗರಿಯ ಸೈಟ್ ಎಂದು ಪತ್ರಕರ್ತರು ಕೇಳುತ್ತಿದ್ದಾರೆ.

---------------------

• ಇತ್ತೀಚೆಗೆ ಆಳುವವರ ಗುಲಾಮಗಿರಿ ಮಾಡುವವರಿಗೆ ಪದ್ಮಪ್ರಶಸ್ತಿ ನೀಡಲಾಗುತ್ತದೆ.

-ಕುಂ. ವೀರಭದ್ರಪ್ಪ, ಸಾಹಿತಿ

ಪ್ರಶಸ್ತಿಯ ಹೆಸರಿಗೂ ಆಳುವವರ ಪಕ್ಷದ ಚಿಹ್ನೆಗೂ ಸಂಬಂಧ ಇರುವುದರಿಂದ ಇರಬಹುದು.

---------------------

• ಕಾಂಗ್ರೆಸ್‌ನಲ್ಲಿ ನಾಲ್ಕೈದು ಬಣಗಳಿವೆ

-ಸತೀಶ್ ಜಾರಕಿಹೊಳಿ, ಸಚಿವ

ಅದರಲ್ಲಿ ನಿಮ್ಮದು ಎಷ್ಟನೇ ಬಣ?

---------------------

• ರಾಜ್ಯ ಬಿಜೆಪಿಗೆ ಸಮರ್ಥರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.

-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

 ಈ ಸಮರ್ಥರನ್ನು ಹಿಂದೊಮ್ಮೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಬಿಜೆಪಿಯೇ ಅಲ್ಲವೇ?

---------------------

• ಯಡಿಯೂರಪ್ಪ ನನ್ನ ತಂದೆ ಸಮಾನರು

-ಕೆ.ಎಸ್. ಈಶ್ವರಪ್ಪ, ವಿ.ಪ.ವಿ. ನಾಯಕ

ಯಡಿಯೂರಪ್ಪ ಮಾನನಷ್ಟ ಮೊಕದ್ದಮೆ ಹಾಕಲು ಹೊರಟಿದ್ದಾರೆ.

---------------------

•ಜೈಲಿಗೆ ಹೋಗಿ ಬಂದ ಯಡಿಯೂರಪ್ಪರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರುವುದು ಭ್ರಷ್ಟರ ರಕ್ಷಣಾ ಕ್ರಮ.

-ವಿ.ಎಸ್. ಉಗ್ರಪ್ಪ, ವಿ.ಪ. ಸದಸ್ಯ

ಜೈಲಿಗೆ ಹೋಗದಂತೆ ತಡೆಯುವುದಕ್ಕಾಗಿಯೇ ತಾನೆ ನೀವು ಎಸಿಬಿಯನ್ನು ರಚನೆ ಮಾಡಿರುವುದು.

---------------------

•ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ.

-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ

ನಿಮ್ಮ ಕುರಿತಂತೆ ಬಿಜೆಪಿಯೂ ಇದೇ ಧೈರ್ಯದಲ್ಲಿದೆ.

---------------------

• ಹೈಕಮಾಂಡ್ ಅವಕಾಶ ಕೊಟ್ಟರೆ ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಲು ತಾನು ಸಿದ್ಧ.

-ಕೆ.ಎಚ್. ಮುನಿಯಪ್ಪ, ಸಂಸದ

ಅವಕಾಶ ಕೊಡದೇ ಇದ್ದರೆ ಏನು ಮಾಡುತ್ತೀರಿ ಎನ್ನುವುದರ ಕುರಿತಂತೆ ಬಿಜೆಪಿಯವರು ಹೆಚ್ಚು ಆಸಕ್ತರಾಗಿದ್ದಾರೆ.
---------------------

• ಸನಾತನ ಪರಂಪರೆ, ಆಚರಣೆಗಳನ್ನು ನಿತ್ಯಜೀವನದಲ್ಲಿ ಪಾಲಿಸುವುದೇ ನಿಜವಾದ ಧರ್ಮ ರಕ್ಷಣೆ

-ಡಾ. ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

ಶೋಷಣೆ, ಹಿಂಸೆ, ದಬ್ಬಾಳಿಕೆ ನಿಮ್ಮ ಸನಾತನ ಪರಂಪರೆ ಎನ್ನುವುದು ಸಮಾಜಕ್ಕೆ ಚೆನ್ನಾಗಿ ಗೊತ್ತಿದೆ.

--------------------

• ಸಿಎಂ ಆಗಲು ಕಾಲ ಕೂಡಿ ಬಂದಿಲ್ಲ

-ಡಿ.ಕೆ. ಶಿವಕುಮಾರ್, ಇಂಧನ ಸಚಿವ

ಹಾಲಿ ಸಿಎಂನ ಕಾಲೆಳೆಯಲು ಕಾಲ ಕೂಡಿ ಬಂದಿಲ್ಲ ಅನ್ನುತ್ತೀರ?

---------------------

•ಆರೋಪ ಎಂದರೆ ಅನಾಥ ಪ್ರೇತ

-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಆ ಪ್ರೇತ ನಿಮ್ಮ ಹೆಗಲಿಂದ ಕೆಳಗಿಳಿಯುವುದು ಅಷ್ಟು ಸುಲಭವಿಲ್ಲ.

---------------------

• ನನ್ನನ್ನು ಶೋಭಾ ಕರಂದ್ಲಾಜೆ ನಿಯಂತ್ರಿಸುತ್ತಾರೆ ಎಂಬುದು ಶುದ್ಧ ಸುಳ್ಳು

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಹಾಗಾದರೆ ನಿಮ್ಮನ್ನು ನಿಯಂತ್ರಿಸುವ ಇನ್ನಷ್ಟು ಮಂದಿ ಗುಟ್ಟಾಗಿದ್ದಾರೆ ಎಂದಾಯಿತು.

---------------------

• ದೇಶದಲ್ಲೇ ಅತೀ ಹೆಚ್ಚು ಭ್ರಷ್ಟಾಚಾರ ಎಸಗಿದ್ದು ಜಯಲಲಿತಾ ಸರಕಾರ

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಐದು ವರ್ಷ ಪೂರೈಸುವಷ್ಟರಲ್ಲಿ ಮೋದಿ ಅದನ್ನು ಮೀರಬಹುದು, ತಲೆಕೆಡಿಸಿಕೊಳ್ಳಬೇಡಿ.

---------------------

• ಬಿಜೆಪಿಯಂತಹ ಸಂವಿಧಾನ ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಾಂಗ್ರೆಸ್ ಕೇಂದ್ರದಲ್ಲಿ ಎಚ್ಚರದಲ್ಲಿರುವಾಗಲೇ ತಾನೆ, ಬಾಬರಿ ಮಸೀದಿ ಧ್ವಂಸವಾದದ್ದು.

---------------------

• ಹಳೆಯದನ್ನು ಮರೆತು ಬಿಜೆಪಿ ಸೇರಲು ನಾನು ಸಿದ್ಧವಾಗಿದ್ದೇನೆ.

-ಧನಂಜಯ ಕುಮಾರ್, ಕೇಂದ್ರ ಮಾಜಿ ಸಚಿವ

ಆದರೆ ಹಳೆಯದನ್ನು ಜನರು ಮರೆಯುವುದು ಕಷ್ಟ.

---------------------

• ನನಗಿಂತ ದೊಡ್ಡ ದೇಶ ಭಕ್ತ ಇಲ್ಲ

-ಶಾರುಕ್‌ಖಾನ್, ಸಿನೆಮಾ ನಟ

ಹಾಗಾದರೆ ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿ ನೋಡೋಣ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!